Sunday, December 22, 2024
Homeರಾಜ್ಯಮಂಡ್ಯ ಕನ್ನಡ ಸಾಹಿತ್ಯ ಸಮೇಳನಕ್ಕೆ ಇಂದು ತೆರೆ, 2025ಕ್ಕೆ ಬಳ್ಳಾರಿಯಲ್ಲಿ ಕನ್ನಡ ಹಬ್ಬ

ಮಂಡ್ಯ ಕನ್ನಡ ಸಾಹಿತ್ಯ ಸಮೇಳನಕ್ಕೆ ಇಂದು ತೆರೆ, 2025ಕ್ಕೆ ಬಳ್ಳಾರಿಯಲ್ಲಿ ಕನ್ನಡ ಹಬ್ಬ

2025 Kannada Sahitya Sammelana in Bellary

ಮಂಡ್ಯ,ಡಿ.22- ಕಳೆದೆರಡು ದಿನಗಳಿಂದ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಇಂದು ಅಂತಿಮ ತೆರೆ ಬೀಳಲಿದ್ದು 2025ರ 88 ನೇ ಸಾಹಿತ್ಯ ಸಮೇಳನ ಗಡಿ ಜಿಲ್ಲೆ ಬಳ್ಳಾರಿಯಲ್ಲಿ ನಡೆಯಲಿದೆ.

ಲಕ್ಷಾಂತರ ಮಂದಿ ಸಮೇಳನಕ್ಕೆ ಆಗಮಿಸಿ ಪುಸ್ತಕ ಮೇಳ, ವಿವಿಧ ಗೊಷ್ಟಿ, ವಸ್ತುಪ್ರದರ್ಶನ, ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಗಳನ್ನು ವಿಕ್ಷಿಸಿ ಸಾಹಿತ್ಯ ಹಬ್ಬವನ್ನು ಹಿಮಡಿಗೊಳುಸುದ್ದಾರೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮಿಜಿಯವರ ದಿವ್ಯಸಾನಿಧ್ಯದಲ್ಲಿ ಇಂದು ಸಂಜೆ ನಡೆಯಲಿರುವ ಅದ್ದೂರಿ ವೇದಿಕೆ ಕಾರ್ಯಕ್ರಮದ ಮೂಲಕ ಅಕ್ಷರ ಜಾತ್ರಗೆ ತೆರೆಬೀಳಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್‌, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ಮುಂದಿನ 88 ನೇ ಸಾಹಿತ್ಯ ಸಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್‌ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನು ಮತದಿಂದ ಬಳ್ಳಾರಿಯಲ್ಲಿ ನಡೆಸಲು ತಿರ್ಮಾನಿಸಲಾಗಿದೆ.

ಬಳ್ಳಾರಿ, ಕೋಲಾರ, ಯಾದಗಿರಿ, ಚಿಕ್ಕಮಗಳೂರು ಸೇರಿದಂತೆ ನೂತನ ಜಿಲ್ಲೆಗಳಿಂದಲೂ 88 ನೇ ಸಮೆಳನ ನಡೆಸಲು ಮನವಿ ಬಂದಿದ್ದವು. ಆದರೆ ಭಾಷಾ ಪ್ರೇಮವನ್ನು ಜಾಗೃತಗೊಳಿಸುವ ದೃಷಿಯಿಂದ ಗಡಿ ನಾಡು ಬಳ್ಳಾರಿಯಲ್ಲಿ ಸಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮೀತಿಯ ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನಿಸಲಾಗಿದೆ.

1926 ಹಾಗೂ 1938 ರಲ್ಲಿ ಬಳ್ಳಾರಿಯಲ್ಲಿ ಸಮೇಳನ ನಡೆದಿತ್ತು, ಸ್ವಾತಂತ್ರ್ಯ ನಂತರ 1958 ರಲ್ಲಿ ವಿ.ಕೃ.ಗೋಕಾಕ್‌ ಅವರ ಆಧ್ಯಕ್ಷತೆಯಲ್ಲಿ ಸಮೇಳನ ನಡೆದಿತ್ತು, ಇದೀಗ 66 ವರ್ಷಗಳ ಬಳಿಕ ಮತ್ತೆ ಗಡಿ ನಾಡಿಗೆ ಅಕ್ಷರ ತೇರು ಎಳೆಯುವ ಭಾಗ್ಯ ದೊರೆತಿದೆ.

ಕೊನೆ ದಿನ ಹಾಗೂ ಭಾನುವಾರವಾದ್ದರಿಂದ ಇಂದು ಅಕ್ಷರ ಜಾತ್ರೆಗೆ ಜನ ಸಾಗರವೇ ಹರಿದು ಬಂದಿತ್ತು. ಬೆಂಗಳೂರು, ತುಮಕೂರು, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕನ್ನಢಾಭಿಮಾನಿಗಳು ಆಗಮಿಸಿದ್ದರು.

ಕಳೆದೆರಡು ದಿನಗಳಿಂದ ಅದ್ದೂರಿಯಾಗಿ ಸಮೇಳ ನಡೆದಿದ್ದು, ಸಾಹಿತ್ಯಾಸಕ್ತರಿಗೆ ಉತ್ತಮ ಆತಿಥ್ಯ ನೀಡಲಾಗಿದೆ. ಇಂದು ಸಮೇಳನಕ್ಕೆ ಅದ್ದೂರಿ ತೆರೆಬೀಳಲಿದ್ದು, ಕನ್ನಡ ಕಟ್ಟಲು ರಾಜ್ಯಸರ್ಕಾರ ಹಾಗೂ ನಾಗರಿಕರ ಪಾತ್ರ ಏನೆಂಬುದನ್ನು ಕುರಿತು ಬಹುಮುಖ್ಯವಾಗಿ ಸಮೇಳನದ ನಿರ್ಣಯಗಳ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಈಗಾಗಲೇ ಸಮೇಳಾನಾಧ್ಯಕ್ಷರು ಹಿಂದಿ ಹೇರಿಕೆ, ಕನ್ನಡದಲ್ಲಿ ತಂತ್ರಜ್ಞಾನ ಬಳಕೆ, ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲು ಸೇರಿದಂತೆ ಕನ್ನಡಾಭಿವೃದ್ಧಿಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಈಗ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಣಯ ಮಂಡಿಸುವ ಮೂಲಕ ಸರ್ಕಾರಕ್ಕೆ ಏನೆಲ್ಲಾ ಸಲಹೆ ನೀಡಲಿದೆ ಎಂಬುದರ ಬಗ್ಗೆ ಸಮಾರೋಪ ಸಮಾರಂಭದಲ್ಲಿ ಚರ್ಚೆಯಾಗಲಿದೆ.

ಭಕ್ಷ್ಯಭೋಜನ :
ಅಂತಿಮ ದಿನವಾದ ಇಂದು ಸಾರ್ವಜನಿಕರಿಗೆ ವಿವಿಧ ತರೇವಾರಿ ಭಕ್ಷ್ಯಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆ ಉಪಹಾರ ದೋಸೆ- ಚಟ್ನಿ, ಟಮೋಟೋ ಬಾತ್‌, ಕ್ಯಾರೇಟ್‌ ಹಲ್ವ, ಮಧ್ಯಾಹ್ನ ಊಟಕ್ಕೆ ಬಿಳಿಹೋಳಿಗೆ, ಸಾಗು, ಜೀರಾ ರೈಸ್‌‍, ಪಪ್ಪು, ಬಾದೂಷಾ, ಮುದ್ದೆ, ಸೊಪ್ಪಿನ ಸಾರು, ಅನ್ನಸಾಂಬಾರು, ಮೊಸರು, ಕೋಸಂಬರಿ, ಹಪ್ಪಳ, ಸಾಲಾಡ್‌, ರಾತ್ರಿ ಊಟಕ್ಕೆ ಮೆಂತ್ಯ ಬಾತ್‌, ರಾಯಿತ, ಕೊಬ್ಬರಿ ಮಿಠಾಯಿ, ಅನ್ನ, ರಸಂ, ಬಾಳೆಹಣ್ಣು, ಫ್ರೂಟ್‌ ಸಾಲಾಡ್‌ ನೀಡಲಾಗುವುದು.

ಬಿಸಿ ಬೆಲ್ಲ ಸವಿದು ಮನಸೋತ ಜನ :
ಬೆಲ್ಲದ ಸವಿಯನ್ನು ಬಲ್ಲವನೇ ಬಲ್ಲ ಎಂಬ ಮಾತಿನಂತೆ ಮಂಡ್ಯದ ಬಿಸಿಬಿಸಿ ಬೆಲ್ಲ ಸವಿಯಲು ಸಾಹಿತ್ಯಾಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡುಬಂದಿತು. ನುಡಿ ಜಾತ್ರೆಯಲ್ಲಿ ಮಂಡ್ಯ ಸಂಸ್ಕೃತಿಯನ್ನು ಬಿಂಬಿಸುವ ಪ್ರಾತಕ್ಷ್ಯತೆ ಏರ್ಪಡಿಸಲಾಗಿತ್ತು. ಇನ್ನು ವೇದಿಕೆ ಸಮೀಪ ಮಂಡ್ಯ ಜಿಲ್ಲೆ ಆಲೆಮನೆ ಬೆಲ್ಲ ಉತ್ಪಾದಕರ, ರೈತ ಉತ್ಪಾದಕ ಕಂಪನಿ ವತಿಯಿಂದ ಏರ್ಪಡಿಸಿದ್ದ ಆಲೆಮನೆ ಗಮನ ಸೆಳೆಯಿತು. ಚಿಕ್ಕದಾದ ಕೊಪ್ಪರಿಗೆಯನ್ನು ಬಳಸಿ ಸೌದೆ ಒಲೆಯ ಮೂಲಕ ಬೆಲ್ಲದ ಹಾಲನ್ನು ಕಾಯಿಸಿ ಬಿಸಿಬಿಸಿ ಬೆಲ್ಲ ತಯಾರಿಸುವ ಪ್ರಕ್ರಿಯೆಯನ್ನು ಸಾರ್ವಜನಿಕರಿಗೆ ತೋರಿಸಲಾಯಿತು. ನೆರೆದಿದ್ದ ಜನರು ಬಿಸಿ ಬೆಲ್ಲವನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ತುಂಬಿದ ಪುಸ್ತಕ ಮಳಿಗೆಗಳು :
ಇಂದೂ ಸಹ ವಸ್ತುಪ್ರದರ್ಶನ ಹಾಗೂ ಪುಸ್ತಕ ಮಳಿಗೆಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಕುವೆಂಪು, ಕಾರಂತ, ಪೂರ್ಣಚಂದ್ರ ತೇಜಸ್ವಿ, ಭೈರಪ್ಪ ಸೇರಿದಂತೆ ಹಲವಾರು ಸಾಹಿತಿಗಳ ಪುಸ್ತಕಗಳನ್ನು ಕೊಳ್ಳಲು ಸಾಹಿತ್ಯಾಭಿಮಾನಿಗಳು ಉತ್ಸಾಹ ತೋರಿದರು.

RELATED ARTICLES

Latest News