ಮುಂಬೈ, ನ.1- ಪಾದದ ಗಾಯದಿಂದ ಚೇತರಿಸಿಕೊಂಡಿರುವ ಭಾರತದ ಸ್ಟಾರ್ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರು ನವೆಂಬರ್ 12 ರಂದು ನೆದಲ್ರ್ಯಾಂಡ್ಸ್ ವಿರುದ್ಧದ ವಿಶ್ವಕಪ್‍ನ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಕಣಕ್ಕೆ ಮರಳುವ ಸಾಧ್ಯತೆಯಿಲ್ಲ.
ಅಕ್ಟೋಬರ್ 19 ರಂದು ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅವರು ಬೌಲಿಂಗ್‍ನಲ್ಲಿ ಚಂಡನ್ನು ತಡೆಯುವಾಗ ಎಡ ಪಾದಕ್ಕೆ ಗಾಯವಾಗಿತ್ತು. ನಂತರ ನಡೆದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಆಡಲಿಲ್ಲ ನಾಳೆ ಶ್ರೀಲಂಕಾ ಮತ್ತು ನ.5 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ನವೆಂಬರ್ 12 ರಂದು ಬೆಂಗಳೂರಿನಲ್ಲಿ ನೆದಲ್ರ್ಯಾಂಡ್ಸ್ ವಿರುದ್ಧ ಭಾರತ ಆಡಲಿರುವ ಕೊನೆಯ ಲೀಗ್ ಪಂದ್ಯಕ್ಕೆ ಪಾಂಡ್ಯ ಲಬ್ಯವಾಗಬಹುದು,ಪ್ರಸ್ತುತ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ನೇರವಾಗಿ ಸೆಮಿಫೈನಲ್ ಪಂದ್ಯ ಆಡುವ ಸಾಧ್ಯತೆಯೂ ಇದೆ. ಈಗಾಗಲೆ ಆರು ಪಂದ್ಯಗಳಲ್ಲಿ ಗೆಲುವು ಪಡೆದು ಭಾರತ ಸೆಮಿಫೈನಲ್‍ಗೆ ಅರ್ಹತೆ ಪಡೆಯುವುದು ನಿಶ್ಛಿತವಾಗಿದೆ.
ವಾಣಿಜ್ಯ ಸಿಲಿಂಡರ್ ಬೆಲೆ 101 ರೂ. ಏರಿಕೆ
ಪಾಂಡ್ಯ ಅನುಪಸ್ಥಿತಿಯಲ್ಲಿ, ಭಾರತ ತಂಡ ಐವರು ಬೌಲರ್‍ಗಳೊಂದಿಗೆ ಆಡುತ್ತಿದ್ದು, ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ. ಪಾಂಡ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‍ಸಿಎ) ಚೇತರಿಸಿಕೊಳ್ಳುತ್ತಿದ್ದು.ವೈದ್ಯಕೀಯ ತಂಡವು ಪರಿಶೀಲಿಸುತ್ತಿದೆ ನಾವು ಕೂಡ ಎನ್‍ಸಿಎ ಜೊತೆಗೆ ಸಂಪರ್ಕದಲ್ಲಿದ್ದೇವೆ ಒಂದೆರಡು ದಿನಗಳಲ್ಲಿ ಸದ್ಯದ ಪರಿಸ್ಥಿತಿ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಬೌಲಿಂಗ್ ಕೋಚ್ ಮಾಂಬ್ರೆ ಹೇಳಿದ್ದಾರೆ.
ಬಿಸಿಸಿಐ ಮಾಧ್ಯಮ ಬಿಡುಗಡೆಯ ಪ್ರಕಾರ, ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಪಾಂಡ್ಯ ಲಕ್ನೋದಲ್ಲಿ ತಂಡವನ್ನು ಸೇರಿಕೊಳ್ಳಬೇಕಿತ್ತು ಆದರೆ ಅವರು ತಂಡದಲ್ಲಿ ಇರಲಿಲ್ಲ.