ಚಿಕ್ಕಮಗಳೂರು,ಡಿ.27-ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಮೆಸ್ಕಾಂ ವಿದ್ಯುತ್ ತಂತಿ ತಾಗಿ ಆನೆಯೊಂದು ಸಾವನ್ನಪ್ಪಿದೆ.ಆಹಾರ ಅರಿಸಿ ಬಂದ ಕಾಡಾನೆಗೆ ವಿದ್ಯುತ್ ತಂತಿ ತಗಲಿ ಕಂದಕಕ್ಕೆ ಉರುಳಿ ಬಿದ್ದಿರುವ ಒಂಟಿ ಸಲಗ ಅಸುನೀಗಿದೆ.
ಕಳೆದ ಮೂರು ದಿನಗಳ ಹಿಂದೆ ಲಿಂಗದಹಳ್ಳಿ ಬಳಿಯ ಉಡೇವಾವಾದಲ್ಲಿ ಘಟನೆ ನಡೆದಿದ್ದರೂ ಕೂಡ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವೇ ಇರಲಿಲ್ಲ,ಮೆಸ್ಕಾಂ ನಿರ್ಲಕ್ಷಕ್ಕೆ ಮೂರನೇ ಸಲಗ ಬಲಿಯಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.ಆಲ್ದೂರು ವಲಯದಲ್ಲಿ 2 ಈಗ ತರೀಕೆರೆ ವಯಲದಲ್ಲಿ ಸಲಗ ಸತ್ತಿರುವುದು ಮೆಸ್ಕಾಂ ಇಲಾಖೆಯ ನಿರ್ಲಕ್ಷ ಕಾರಣವಾಗಿದೆ ಎಂದು ದೂರಿದ್ದಾರೆ.
ಸುಮಾರು 30 ವರ್ಷದ ಸಲಗ ಇದಾಗಿದೆ ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಬಂದಿದ್ದು ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಉಪನ್ಯಾಸಕರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು.
ಮೆಸ್ಕಾಂ ಇಲಾಖೆ ಅಧಿಕಾರಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲು ತರೀಕೆರೆ ವಲಯ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.