Wednesday, February 5, 2025
Homeರಾಷ್ಟ್ರೀಯ | Nationalಹೊಸ ವರ್ಷಕ್ಕೆ ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ

ಹೊಸ ವರ್ಷಕ್ಕೆ ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ

7th Pay Commission: DA Hike For Central Govt Employees?

ನವದೆಹಲಿ,ಡಿ.28-ಹೊಸ ವರ್ಷದ ಮೊದಲ ತಿಂಗಳಿನಲ್ಲೇ ಸೆಂಟ್ರಲ್‌ ಗೌರ್ಮೆಂಟ್‌ ಉದ್ಯೋಗಿಗಳ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗುತ್ತಾ? ಕೇಂದ್ರ ಸರ್ಕಾರೀ ನೌಕರರು, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯುವ ಕ್ಯಾಬಿನೆಟ್‌ ಮೀಟಿಂಗ್‌ ನಿರ್ಧಾರವನ್ನು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಕೇಂದ್ರ ಸರ್ಕಾರೀ ನೌಕರರ ಡಿಎ ಹೆಚ್ಚಳದ ಶೆಡ್ಯೂಲ್‌ ಮುಂದಿನ ವರ್ಷದ ಜನವರಿಯಲ್ಲಿ ನಿಗದಿಯಾಗಿದೆ. ಡಿಎ ಹೆಚ್ಚಳದ ಅಧಿಕೃತ ಘೋಷಣೆ ಮಾಡುವ ಮುನ್ನ, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಪರಿಷ್ಕೃತ ಸಂಖ್ಯೆಗಾಗಿ ಕೇಂದ್ರ ಹಣಕಾಸು ಇಲಾಖೆ ಕಾಯಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಪ್ರಕ್ರಿಯೆಯು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ, ಪರಿಷ್ಕೃತ ತುಟ್ಟಿಭತ್ಯೆಯ ಘೋಷಣೆ ಕೂಡಾ ಸ್ವಲ್ಪದಿನದ ಮಟ್ಟಿಗೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ವರ್ಷಕ್ಕೊಮೆ ಕಾಸ್ಟ್‌ ಆಫ್‌ ಲೀವಿಂಗ್‌ ಆಧರಿಸಿ, ಜನವರಿ ಮತ್ತು ಜೂನ್‌ ತಿಂಗಳಲ್ಲಿ ಡಿಎ ಹೆಚ್ಚಳ ಮಾಡುವುದು ಹಿಂದಿನಿಂದಲೂ ನಡೆದುಕೊಂಡ ಪದ್ದತಿ.

ಪ್ರತೀ ವರ್ಷ ಜೂನ್‌ ತಿಂಗಳಲ್ಲಿ ಮುಕ್ತಾಯಗೊಳ್ಳುವಂತೆ, ಅಂದರೆ ಜುಲೈ – ಜೂನ್‌ ಅವಧಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕದ ಶೇಕಡಾವಾರು ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ. ಇದರ ಆಧಾರದ ಮೇಲೆ ಪ್ರತೀ 6 ತಿಂಗಳಿಗೊಮೆ ಡಿಎ ಮೊತ್ತವನ್ನು ಪರಿಷ್ಕೃತಗೊಳಿಸಲಾಗುತ್ತದೆ. ಇದಾದ ನಂತರ, ಹೆಚ್ಚಳವಾದ ಡಿಎ ಮೊತ್ತವನ್ನು ಕೆಲವು ತಿಂಗಳ ಬಳಿಕ ಕೇಂದ್ರ ಹಣಕಾಸು ಇಲಾಖೆ ಪ್ರಕಟಿಸಿ, ಬಾಕಿ ಸಮೇತ ವೇತನದಲ್ಲಿ ಸೇರಿಸಿ ಕೊಡಲಾಗುತ್ತದೆ.

2024ರ ಅಕ್ಟೋಬರ್‌ 16ರಂದು ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರೀ ನೌಕರರಿಗೆ ಶೇ.3ರಷ್ಟು ಡಿಎ ಹೆಚ್ಚಳ ಮಾಡಿತ್ತು, ಇದು ದೀಪಾವಳಿ ಹಬ್ಬಕ್ಕೆ ಕೆಲವು ದಿನಗಳು ಇರಬೇಕಾದರೆ. ಇದರಿಂದ ಡಿಎ ಮೊತ್ತ ಶೇ. 50ರಿಂದ ಶೇ. 53ಕ್ಕೆ ಹೆಚ್ಚಳವಾಗಿತ್ತು. ಇದು, ನೌಕಕರಿಗೆ ಮತ್ತು ಕೇಂದ್ರ ಸರ್ಕಾರದ ಪಿಂಚಣಿ ಪಡೆಯುವವರಿಗೂ ಅನ್ವಯವಾಗಿತ್ತು.

2024ರ ಜನವರಿಯಲ್ಲಿ ಶೇ. 5ರಷ್ಟು ಡಿಎ ಮೊತ್ತವನ್ನು ಹೆಚ್ಚಿಗೆ ಮಾಡಲಾಗಿತ್ತು, ಮಾರ್ಚ್‌ 6, 2024 (ಹೋಳಿ ಹಬ್ಬದ ಸಮಯದಲ್ಲಿ ) ಇದನ್ನು ಬಿಡುಗಡೆ ಮಾಡಿತ್ತು. ಡಿಎ ಪಾವತಿ ಮಾಡಬೇಕಾದ ಸಮಯದೊಳಗೆ ಗ್ರಾಹಕ ಬೆಲೆ ಸೂಚ್ಯಂಕದ ಕರಾರುವಾಕ್‌ ಮಾಹಿತಿ ಸಿಗದ ಹಿನ್ನಲೆಯಲ್ಲಿ, ಸಾಮಾನ್ಯವಾಗಿ 6 ತಿಂಗಳ ಸರಾಸರಿ ಮೊತ್ತವನ್ನು ಪರಿಗಣಿಸಲಾಗುತ್ತದೆ.

ಹಾಲೀ ಡಿಸೆಂಬರ್‌ 2024ರ ಡೇಟಾ, ಫೆಬ್ರವರಿ 2025ರೊಳಗೆ ಕೇಂದ್ರ ಹಣಕಾಸು ಇಲಾಖೆಯ ಕೈಸೇರುತ್ತದೆ. ಅಕ್ಟೋಬರ್‌ 2024ರವರೆಗೆ ಗ್ರಾಹಕ ಬೆಲೆ ಸೂಚ್ಯಂಕ 144.5ರಷ್ಟಿದೆ. ಇದರ ಆಧಾರದ ಮೇಲೆ ಲೆಕ್ಕ ಹಾಕುವುದಾದರೆ ಶೇ. 55.05ರಷ್ಟು ಡಿಎ ಮೊತ್ತ ಜಾಸ್ತಿ ಆಗಬಹುದು.
ಆದರೆ, ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿನ ಸೂಚ್ಯಂಕ 145.3ರಕ್ಕೆ ಏರುವ ಸಾಧ್ಯತೆಯಿದೆ.

ಹಾಗಾಗಿ, ಸರಾಸರಿ ಶೇ. 56ರಷ್ಟು ಡಿಎ ಹೆಚ್ಚಾಗಬಹುದು. ಕೇಂದ್ರ ಸರ್ಕಾರದ ಸದ್ಯದ ಕನಿಷ್ಠ ವೇತನ ಮಾಸಿಕ 18,000 ರೂಪಾಯಿ. ಈ ಲೆಕ್ಕದ ಪ್ರಕಾರ 540 ರೂಪಾಯಿ ಹೆಚ್ಚಾಗಬಹುದು. ಪಿಂಚಣಿದಾರರಿಗೆ 270 ರೂ.(9,000 ರೂಪಾಯಿ ಪಿಂಚಣಿ ಇದ್ದರೆ) ಹೆಚ್ಚಳವಾಗಬಹುದು.

ಸೆಂಟ್ರಲ್‌ ಗೌರ್ಮೆಂಟ್‌ ನೌಕರರ ಗರಿಷ್ಠ ವೇತನ 2.5ಲಕ್ಷ. ಈ ಲೆಕ್ಕದ ಪ್ರಕಾರ 7,500 ರೂಪಾಯಿ ಡಿಎ ಹೆಚ್ಚಾಗಬಹುದು. ಇನ್ನು, ಗರಿಷ್ಠ ಪಿಂಚಣಿ 1.25ಲಕ್ಷ. ಈ ಲೆಕ್ಕಾಚಾರದ ಪ್ರಕಾರ ಮಾಸಿಕ 3,750 ರೂಪಾಯಿ ಡಿಎ ಹೆಚ್ಚಾಗಬಹುದು.

RELATED ARTICLES

Latest News