Wednesday, January 15, 2025
Homeಜಿಲ್ಲಾ ಸುದ್ದಿಗಳು | District Newsಅಗಲಿದ ಮಗನ ನೆನಪಲ್ಲಿ ಪ್ರತಿಮೆ ನಿರ್ಮಾಣ ಮಾಡಿದ ಹೆತ್ತವರು

ಅಗಲಿದ ಮಗನ ನೆನಪಲ್ಲಿ ಪ್ರತಿಮೆ ನಿರ್ಮಾಣ ಮಾಡಿದ ಹೆತ್ತವರು

Parents build a statue in memory of their son

ಪುತ್ರ ಶೋಕಂ ನಿರಂತರಂ ಅನ್ನುವ ಮಾತಿದೆ, ಆ ತಂದೆ ತಾಯಿಗೆ ಆತ ಒಬ್ಬನೇ ಮಗ, ಎದೆಯೆತ್ತರ ಬೆಳೆದ ಮಗ ಅಪ್ಪ ಅಮನ ಕಣ್ಣು ಎದುರೇ ಕುಸಿದು ಬಿದ್ದು ಹೃದಯಾಘಾತದಿಂದ ದಿಢೀರ್‌ ಸಾವನ್ನಪ್ಪಿದ್ದ.ಇದ್ದ ಒಬ್ಬ ಮಗನನ್ನ ಕಳೆದುಕೊಂಡ ತಂದೆ-ತಾಯಿ ಅಘಾತಕ್ಕೊಳಗಾಗಿ ಮಗನ ಕೊರಗಿನಲ್ಲೇ ಕಾಲ ಕಳೆಯುವಂತಾಗಿ ದಿನ ದೂಡುವಂತಾಗಿತ್ತು…

ಕೊನೆಗೆ ಮಗನ ಸಾವಿನ ನೋವು ನುಂಗಿದ ತಂದೆ ತಾಯಿ ಈಗ ಮಗನ ನೆನಪಲ್ಲಿ ಪುತ್ಥಳಿ ನಿರ್ಮಾಣ ಮಾಡಿಸಿ, ಪುತ್ಥಳಿ ರೂಪದಲ್ಲೇ ಮಗನ ಪ್ರತಿರೂಪ ಕಣ್ತುಂಬಿಕೊಳ್ಳುತ್ತಿದ್ದಾರೆ, ಇಂತಹ ಮನಕಲಕುವ ಘಟನೆ ನಡೆದಿರೋದು..ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ರಾಯಮಾಕಲಹಳ್ಳಿ ಗ್ರಾಮದಲ್ಲಿ.

ಬರಸಿಡಿಲು: ಮಂಚೇನಹಳ್ಳಿ ತಾಲೂಕಿನ ರಾಯಮಾಕಲಹಳ್ಳಿ ವೆಂಕಟೇಶ್‌ ಹಾಗೂ ಇಂದಿರಮ ದಂಪತಿಯ ಏಕೈಕ ಮಗ ದರ್ಶನ್‌ ಇನ್ನೂ 32 ವ?ರ್ ವಯಸ್ಸಾಗಿತ್ತು…ದರ್ಶನ್‌ ಬಾಲ್ಯದಿಂದಲೇ ಸರಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿ ಚೆನ್ನಾಗಿ ಒದಿ ಎಂಜಿನಿಯರ್‌ ಆಗಿ ದೇಶ ವಿದೇಶಗಳಲ್ಲೂ ಕೆಲಸ ಮಾಡಿದ್ದ. ಕೈ ತುಂಬಾ ಲಕ್ಷಾಂತರ ರೂಪಾಯಿ ಸಂಬಳ ಸಹ ಪಡೆಯುತ್ತಿದ್ದ,

ಆದರೆ ಕಳೆದ ವರ್ಷ ವೈಕುಂಠ ಏಕಾದಶಿ ಹನುಮ ಜಯಂತಿಯಂದು ಹಬ್ಬದ ಸಡಗರದಲ್ಲಿದ್ದ ಮನೆಯಲ್ಲಿದ್ದ ಮಗ ಏಕಾಏಕಿ ನನಗೆ ಸುಸ್ತಾಗುತ್ತಿದೆ ಎಂದು ಕುಸಿದು ಬಿದ್ದು, ನೋಡ ನೋಡುತ್ತಿದ್ದಂತೆ ಆಸ್ಪತ್ರೆಗೆ ಹೋಗುವ ಮುನ್ನವೇ ದರ್ಶನ್‌ ಹೃದಯಾಘಾತದಿಂದ ಮಾರ್ಗದ ಮಧ್ಯದಲ್ಲೇ ಅಪ್ಪ ಅಮನ ಕಣ್ಣೆದುರೇ ಕೊನೆಯುಸಿರು ಬಿಟ್ಟಿದ್ದ. ತಮ ಇಳಿವಯಸ್ಸಿನಲ್ಲಿ ನಮಗೆ ಆಸರೆಯಾಗಬೇಕಿದ್ದ. ಮಗ ತಮ ಮುಂದೆಯೇ ಸಾವನ್ನಪ್ಪಿದ್ದು ದರ್ಶನ್‌ ಸಾವು ತಂದೆ ತಾಯಿಗೆ ಒಮೆಲೇ ಬರಸಿಡಿಲು ಬಡಿದಂತಾಗಿತ್ತು ಈ ಘಟನೆ ಅವರಿಗೆ ಇನ್ನಿಲ್ಲದಂತೆ ಭಾಧಿಸಿತ್ತಿದೆ.

ಮಗನ ಪುತ್ಥಳಿ: ಕಳೆದ ವಷರ್ದಿಂದ ಮಗನ ಸಾವಿನ ನೋವಲ್ಲೇ ನೊಂದುಬೆಂದು ಹೋಗಿದ್ದ ತಂದೆ ತಾಯಿ ಕೊನೆಗೆ ಚೇತರಿಸಿಕೊಂಡು ಮಗನ ಸಮಾದಿಯ ಬಳಿ ಪ್ರತಿಮೆಯನ್ನ ನಿರ್ಮಾಣ ಮಾಡಿಸಿ ಪ್ರತಿಮೆಯಲ್ಲೇ ಮಗನ ಪ್ರತಿರೂಪ ಕಾಣುತ್ತಿದ್ದಾರೆ.

ಮಗನ ಸಾವಿನ ನೋವಿನಿಂದ ಹೊರಬಂದ ತಂದೆ ತಾಯಿ ಮಗನಿಲ್ಲದ ತಮಗೆ ಊರ ಮಕ್ಕಳೇ ತಮ ಮಕ್ಕಳು ಅಂತ ಮಗನ ಪುತ್ಥಳಿಯನ್ನು ರಾಜಾಸ್ಥಾನದಿಂದ ಅಮೃತಶಿಲೆಯಲ್ಲಿ ನಿರ್ಮಾಣ ಮಾಡಿಸಿ ಮಗನ ದೇವಾಲಯವನ್ನೇ ನಿರ್ಮಾಣ ಮಾಡಿಸಿದ್ದಾರೆ, ಮಗನ ಹೆಸರಲ್ಲೇ ಶ್ರೀ ದರ್ಶನ್‌ ಚಾರಿಟಬಲ್‌ ಟ್ರಸ್ಟ್‌ (ರಿ) ರಚಿಸುವ ಮೂಲಕ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಶ್ರೀಗಳ ಆರ್ಶೀವಚನ: ಡಿ.23 ರಂದು ವರ್ಷದ ಪುಣ್ಯಸರಣೆ ಅಂಗವಾಗಿ ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮಡಿ ಸಿದ್ದರಾಮೇಶ್ವರ ಸ್ವಾಮಿಗಳನ್ನು ಕರೆಸಿ ದೊಡ್ಡ ಸಮಾರಂಭವನ್ನು ಆಯೋಜಿಸಿ ಗ್ರಾಮಸ್ಥರಿಗೆ , ಶಾಲಾ ವಿದ್ಯಾರ್ಥಿಗಳಿಗೆ ಶ್ರೀಗಳಿಂದ ಆರ್ಶೀವಚನವನ್ನು ಕೊಡಿಸಿ ತಮೂರಿನ ಸರಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದ್ದಾರೆ, ಮಗನ ಸರಣೆಯ ಅಂಗವಾಗಿ ತಾಲೂಕಿನ ವಿವಿಧ ಸರಕಾರಿ ಶಾಲೆಯ ಮಕ್ಕಳಿಗೆ ಸಹಾಯ ಮಾಡುವ ಬಡ ಮಕ್ಕಳ ಶೈಕ್ಷಣಿಕ ಅಬಿವೃದ್ಧಿಗೆ ಕಂಕಣ ತೊಟ್ಟಿದ್ದಾರೆ.

  • ದೇವಿಮಂಜುನಾಥ್‌, ಗೌರಿಬಿದನೂರು
RELATED ARTICLES

Latest News