Saturday, January 4, 2025
Homeಕ್ರೀಡಾ ಸುದ್ದಿ | Sports4 ಕ್ಯಾಚ್ ಬಿಟ್ಟ ಜೈಸ್ವಾಲ್‌ಗೆ ರೋಹಿತ್ ಕ್ಲಾಸ್

4 ಕ್ಯಾಚ್ ಬಿಟ್ಟ ಜೈಸ್ವಾಲ್‌ಗೆ ರೋಹಿತ್ ಕ್ಲಾಸ್

Rohit Sharma Loses It On Field As Yashasvi Jaiswal Drops Three Catches

ಮೆಲ್ಬೋರ್ನ್, ಡಿ. 29– ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ನಾಲ್ಕು ಪ್ರಮುಖ ಕ್ಯಾಚ್ ಗಳನ್ನು ಬಿಟ್ಟು ತಂಡವನ್ನು ಸಂಕಷ್ಟಕ್ಕೆ ನೂಕಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದ ಭರವಸೆಯ ಆಟಗಾರ ಮಾರ್ನಸ್ ಲಬುಸ್ಟೆಂಗ್ನೆ ಅವರು 46 ರನ್ ಗಳಿಸಿದ್ದಾಗ ಜೈಸ್ವಾಲ್ ತಮಗೆ ಬಂದ ಸುಲಭದ ಕ್ಯಾಚನ್ನು ಕೈಚೆಲ್ಲಿದರು. ಇದರ ಲಾಭ ಪಡೆದ ಮಾರ್ನಸ್ 70 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಯಶಸ್ವಿ ಜೈಸ್ವಾಲ್ ಕ್ಯಾಚ್ ಕೈಚೆಲ್ಲಿದಾಗ ಆಸ್ಟ್ರೇಲಿಯಾ 99 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಕಾಶ್ ದೀಪ್ ಬೌಲಿಂಗ್ ಮಾಡಿದ ಓವರ್ ಒಂದರಲ್ಲಿ ಯಶಸ್ವಿ ಜೈಸ್ವಾಲ್ ಗಲ್ಲಿಯಲ್ಲಿ ನಿಂತಿದ್ದಾಗ ಮಾರ್ನಸ್ ಹೊಡೆದ ಚೆಂಡನ್ನು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಮತ್ತೊಮೆ ಎಡವಿದರು. ಆ ಮೂಲಕ ಮತ್ತೊಮೆ ಜೀವದಾನ ಪಡೆದ ಮಾರ್ನಸ್ ಲಬುಸ್ಟೆಂಗ್ನೆ ವೇಗಿ ಮೊಹಮದ್ ಸಿರಾಜ್ ಓವರ್ ನಲ್ಲಿ ಎಲ್ ಬಿಡ್ಲ್ಯು ಬಲೆಗೆ ಬಿದ್ದರು.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮೂರನೇ ಓವರ್ ನಲ್ಲೇ ಆರಂಭಿಕ ಆಟಗಾರ ಉಸಾನ್ ಖ್ವಾಜಾ ಅವರ ಬ್ಯಾಟ್ ನಿಂದ ಚಿಮಿದ ಚೆಂಡನ್ನು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಜೈಸ್ವಾಲ್ ಎಡವಿದರು. ಆದರೆ 19 ರನ್ ಗಳಿಸಿದ್ದ ಖ್ವಾಜಾ ಅವರನ್ನು ವೇಗಿ ಮೊಹಮದ್ ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದರು.

ಟೀ ವಿರಾಮಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್‌್ಸ 20 ರನ್ ಗಳಿಸಿದ್ದಾಗ ಸಿಲ್ಲಿ ಪಾಯಿಂಟ್ ನಲ್ಲಿ ನಿಂತಿದ್ದ ಜೈಸ್ವಾಲ್ ಸುಲಭ ಕ್ಯಾಚ್ ಕೈಚೆಲ್ಲಿದ್ದ ನಾಯಕ ರೋಹಿತ್ ಶರ್ಮಾ ಜೈಸ್ವಾಲ್ ವಿರುದ್ಧ ಬೇಸರ ವ್ಯಕ್ತಪಡಿಸಿದರು.

RELATED ARTICLES

Latest News