Thursday, January 9, 2025
Homeಜಿಲ್ಲಾ ಸುದ್ದಿಗಳು | District Newsಮಂಡ್ಯ | Mandyaಪ್ರೇಯಸಿ ಮನೆ ಮುಂದೆ ಜಿಲೆಟಿನ್‌ ಕಡ್ಡಿ ಸ್ಪೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ

ಪ್ರೇಯಸಿ ಮನೆ ಮುಂದೆ ಜಿಲೆಟಿನ್‌ ಕಡ್ಡಿ ಸ್ಪೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ

Lover's suicide in front of his girlfriend's house

ನಾಗಮಂಗಲ,ಡಿ.30- ಪ್ರೇಯಸಿ ತನ್ನ ಪ್ರೀತಿ ನಿರಾಕರಿಸಿದಳೆಂದು ನೊಂದ ಪ್ರಿಯಕರ ಬಂಡೆ ಸಿಡಿಸಲು ಬಳಸುವ ಜಿಲೆಟಿನ್‌ ಕಟ್ಟಿಕೊಂಡು ಆಕೆಯ ಮನೆ ಮುಂದೆಯೇ ಸ್ಪೋಟಿಸಿಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ. ರಾಮಚಂದ್ರ ಆತಹತ್ಯೆ ಮಾಡಿಕೊಂಡಿರುವ ಯುವಕ.

ತಾನು ಪ್ರೀತಿಸುತ್ತಿದ್ದ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮನನೊಂದಿದ್ದ ಈತ ಸಾಯಲು ನಿರ್ಧರಿಸಿ ಆಕೆಯ ಮನೆಯ ಮುಂದೆ ಮದ್ದು ಸಿಡಿಸುವ ಸ್ಪೋಟಕವನ್ನು ಮೈಗೆ ಕಟ್ಟಿಕೊಂಡು ಆತಹತ್ಯೆಗೆ ಮಾಡಿಕೊಂಡಿದ್ದಾನೆ. ಪರಿಣಾಮ ಈ ಸ್ಫೋಟಕದಿಂದ ಯುವಕನ ದೇಹ ಛಿದ್ರ ಛಿದ್ರವಾಗಿದೆ.

ಕಳೆದ ವರ್ಷ ರಾಮಚಂದ್ರ ಅಪ್ರಾಪ್ತ ಪ್ರೇಮಿಯ ಜೊತೆ ಹೊರ ಹೋಗಿದ್ದ. ಬಳಿಕ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು ಎಂದು ತಿಳಿದುಬಂದಿದೆ. ಜಾಮೀನಿನ ಮೇಲೆ ಹೊರಬಂದಿದ್ದ ಯುವಕ ಈಗ ಆತಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News