ನವದೆಹಲಿ, ಜ.2- ಅತಿ ಹೆಚ್ಚು ಬಡ್ಡಿ ನೀಡುವ ಆಮಿಷ ವೊಡ್ಡಿ ಗ್ರಾಹಕರಿಗೆ ವಂಚನೆ ಮಾಡಿರುವ ಬಿಜಿ ಗ್ರೂಪ್ ನ ಮಾಲೀಕನ ಹೇಳಿಕೆ ಆಧಾರಿಸಿರುವ ಸಿಐಡಿ ಅಧಿಕಾರಿಗಳು ಗುಜರಾತ್ ಟೈಟಾನ್ಸ್ ನ ನಾಯಕ ಶುಭಮನ್ ಗಿಲ್ ಸೇರಿದಂತೆ ಹಲವು ಕ್ರಿಕೆಟಿಗರಿಗೆ ಸಮನ್ಸ್ ನೀಡಲು ಮುಂದಾಗಿದೆ.
ಶುಭಮನ್ ಗಿಲ್ ಅಲ್ಲದೆ, ಗುಜರಾತ್ ಟೈಟನ್ಸ್ ನ ಇತರೆ ಆಟಗಾರರಾದ ಸಾಯಿ ಸುದರ್ಶನ್, ರಾಹುಲ್ ಟೆವಾಟಿಯಾ ಹಾಗೂ ಮೋಹಿತ್ ಶರ್ಮಾ ಅವರಿಗೆ ಸಿಐಡಿ ಶಾಕ್ ನೀಡಲಿದೆ.
ಬಿಜಿ ಗ್ರೂಪ್ ಅವರು ಗ್ರಾಹಕರಿಗೆ ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷ ಒಡ್ಡಿದ್ದು,450 ಕೋಟಿ ರೂ.ಗಳನ್ನು ಠೇವಣಿ ಇರಿಸಿಕೊಂಡು ಯಾವ ಗ್ರಾಹಕರಿಗೂ ಬಡ್ಡಿ ನೀಡದೆ ಇರುವುದರಿಂದ ತಾವು ವಂಚನೆ ಹೋಗಿರುವುದಾಗಿ ತಿಳಿದು ಸಿಐಡಿಗೆ ದೂರು ನೀಡಿದ್ದಾರೆ.
ಪೋಂಜಿ ಸ್ಕ್ಯಾಮ್ ನಲ್ಲಿ ಶುಭಮನ್ ಗಿಲ್ ಅವರು 1.95 ಕೋಟಿ ವರಮಾನವನ್ನು ಹೂಡಿಕೆ ಮಾಡಿದ್ದರೆ, ಗುಜರಾತ್ ಟೈಟನ್ಸ್ ಇತರ ಆಟಗಾರರು ಕೂಡ ಹಣ ಹೂಡಿಕೆ ನೀಡಿದ್ದರಿಂದ ವಿಚಾರಣೆಗೆ ಆಗುವಂತೆ ಸಿಐಡಿಯು ಸಮನ್ಸ್ ನೀಡಲು ಸಿದ್ಧತೆ ನಡೆಸಿದೆ.
ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿಗಳನ್ನ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜಿ ಗ್ರೂಪ್ ನ ಮಾಲೀಕ ಭುಪೇಂದ್ರ ಸಿಂಗ್ ಅವರನ್ನು ಈಗಾಗಲೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ವೇಳೆ ಭುಪೇಂದ್ರ ಅವರು ತಾನು ಗುಜರಾತ್ ಟೈಟನ್‌್ಸ ನ ಆಟಗಾರರು ಹೂಡಿಕೆ ಮಾಡಿರುವ ಹಣವನ್ನು ಹಿಂದಿರುಗಿಸಿದ್ದೇನೆ ಎಂದು ಹೇಳಿರುವುದರಿಂದ ಗಿಲ್ ಸೇರಿದಂತೆ ಇತರ ಆಟಗಾರರಿಗೆ ಸಿಐಡಿ ಸಮನ್‌್ಸ ನೀಡಲು ಮುಂದಾಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಗಿಲ್ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಆಡುತ್ತಿದ್ದು, ಪರ್ತ್ ನಲ್ಲಿ ನಡೆದಿದ್ದ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದ ಶುಭಮನ್ ಗಿಲ್, ಅಡಿಲೇಡ್ ಟೆಸ್ಟ್ ನಲ್ಲಿ ಸ್ಥಾನ ಪಡೆದು 31 ಹಾಗೂ 28 ರನ್ ಗಳಿಸಿದ್ದರು.
ಮೂರನೇ ಟೆಸ್ಟ್ ನಲ್ಲೂ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಎಡವಿದ್ದ ಗಿಲ್ ಅವರನ್ನು ಮೆಲ್ಬೋರ್ನ್ ನಲ್ಲಿ ನಡೆದಿದ್ದ 4ನೇ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ ಹೊರಗಿಡಲಾಗಿದ್ದು, ನಾಳೆಯಿಂದ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆಯಲು ಗಿಲ್ ಎದುರು ನೋಡುತ್ತಿದ್ದಾರೆ.
5 ಪಂದ್ಯಗಳ ಟೆಸ್ಟ್ ಸರಣಿಯ 4ನೇ ಪಂದ್ಯದ ಅಂತ್ಯಕ್ಕೆ ರೋಹಿತ್ ಪಡೆ 1-2 ಹಿನ್ನೆಡೆ ಅನುಭವಿಸಿದ್ದು, ಸರಣಿ ಸಮಬಲಗೊಳಿಸಲು ಹರಸಾಹಸಪಡುತ್ತಿದೆ.