ಕೊಪ್ಪಳ: ಬಿಜೆಪಿಯವರು ಬರ ಅಧ್ಯಯನ ಮಾಡುತ್ತಿರುವುದು ನಾಟಕ ಕಂಪನಿ, ಅವರು ಮೊದಲು ಕೇಂದ್ರದ ಮೇಲೆ ಒತ್ತಡ ಮಾಡಲಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಬಂದಿದೆ. ಬರ ತಂಡ ಬಂದು ಹೋಗಿದೆ. ನಮ್ಮ ರಾಜ್ಯದ ನಾಲ್ಕು ಸಚಿವರು ಇದ್ದಾರೆ.
ಕೇಂದ್ರದಿಂದ ಸಹಕಾರ ನಮಗೆ ಸಿಗುತ್ತಿಲ್ಲ. ಕೇಂದ್ರ ಸರಕಾರದವರು ನಮ್ಮ ಪರ ಇಲ್ಲ. ನಮ್ಮ ಸಿಎಂ ಪತ್ರ ಬರೆದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಸಿಎಂ ಸೀಟು ಖಾಲಿ ಇಲ್ಲ. ಹೈಕಮಾಂಡ್ ಈ ಕುರಿತು ನಿರ್ಧಾರ ಮಾಡಲಿದೆ, ರಮೇಶ್ ಜಾರಕಿಹೊಳಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದರು. ಮರಳು ಮಾಫಿಯಾ ತಡೆಯುತ್ತೇನೆ.
192 ಕೋಟಿ ರೂಪಾಯಿ ಕುಡಿವ ನೀರು ಯೋಜನೆಯಲ್ಲಿ ಆಗಿರುವ ವ್ಯವಾಹಾರ ತನಿಖೆ ಮಾಡಿಸಲಾಗಿದೆ ಎಂದರು. ದುಬೈಗೆ ಕಾಂಗ್ರೆಸ್ ಶಾಸಕರು ಹೋಗುತ್ತಿರುವುದು ವೈಯಕ್ತಿಕವಾಗಿ ಹೋಗುತ್ತಿದ್ದಾರೆ. ಅವರನ್ನು ಸರಕಾರದಿಂದ ಕಳುಹಿಸುತ್ತಿಲ್ಲ. ರಾಜ್ಯದ ಕಾಂಗ್ರೆಸ್‌ನಲ್ಲಿ ಅತೃಪ್ತಿ ಇಲ್ಲ. ಅತೃಪ್ತಿ ಎಂಬುವುದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.