Friday, January 10, 2025
Homeರಾಜ್ಯಇಂಜಿನ್‌ ಸ್ಥಗಿತ : ಬೆಂಗಳೂರಲ್ಲಿ ಏರ್‌ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಇಂಜಿನ್‌ ಸ್ಥಗಿತ : ಬೆಂಗಳೂರಲ್ಲಿ ಏರ್‌ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

Air India flight makes emergency landing in Bengaluru

ಬೆಂಗಳೂರು,ಜ.7-ನವದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದ ಒಂದು ಎಂಜಿನ್‌ ಸ್ಥಗಿತಗೊಂಡ ಹಿನ್ನಲೆಯಲ್ಲಿ ಎಚೆತ್ತ ಪೈಲೆಟ್‌ ತುರ್ತು ಭೂಸ್ಪರ್ಶ ಮಾಡಿದ ಘಟನೆ ತಡವಗಿ ಬೆಳಕಿಗೆ ಬಂದಿದೆ.


ಮೂಲಗಳ ಪ್ರಕಾರ, ಏರ್‌ ಇಂಡಿಯಾ 2820 ವಿಮಾನವು ಸಂಜೆ 7 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಿತ್ತು.ಬೆಂಗಳೂರಿನ ಸುತ್ತ ಸುತ್ತಿದ ನಂತರ ಒಂದು ಗಂಟೆಯ ನಂತರ ಹಿಂತಿರುಗಿತು ಎಂದು ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ಹೆಚ್ಚನ ತಾಂತ್ರಿಕ ವಿವರಗಳಿಲ್ಲ ಆದರೆ ವಿಮಾನವು ತುರ್ತು ಲ್ಯಾಂಡಿಂಗ್‌ ಮಾಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ನಂತರ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.ಘಟನೆಯ ಬಗ್ಗೆ ತನಿಖೆ ಮುಂದುವರೆದಿದೆ.

RELATED ARTICLES

Latest News