ಬೆಂಗಳೂರು,ಜ.8- ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಆರು ಮಂದಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಶರಣಾಗಿದ್ದಾರೆ. ಲತಾ, ವನಜಾಕ್ಷಿ ಎಂ., ಜಯಣ್ಣ ಅರೋಲಿ, ಸುಂದರಿ, ವಸಂತ್ ಕೆ., ಎ.ಡಿ ಜಿಷ . ಅವರುಗಳು ಶರಣಾದ ನಕ್ಸಲರು. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಶಾಂತಿಗಾಗಿ ನಾಗರಿಕ ವೇದಿಕೆಯ ಅಶೋಕ್, ಸಿರಿಮನೆ ನಾಗರಾಜ್, ವನಜಾಕ್ಷಿ ಅವರ ಸಹೋದರ ಉಮೇಶ್ ಮತ್ತಿತರರು ಚಿಕ್ಕಮಗಳೂರಿನ ಪ್ರವಾಸಿ ಮಂದಿರದ ಬಳಿ ಕಾದುಕುಳಿತಿದ್ದರು.
ಆರಂಭದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಣಾಗುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.
ಕೊನೆಕ್ಷಣದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯವರ ಸಮುಖದಲ್ಲೇ ಶರಣಾಗಲು ನಕ್ಸಲರು ನಿರ್ಧರಿಸಿದ್ದು ಅದಕ್ಕೆ ಸಹಮತ ದೊರೆತ ಹಿನ್ನೆಲೆಯಲ್ಲಿ ಪೊಲೀಸರ ಎಸ್ಕಾರ್ಟ್ನಲ್ಲಿ ಚಿಕ್ಕಮಗಳೂರಿನ ಕಾಡಿನಿಂದ ಬೆಂಗಳೂರಿಗೆ ಬಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ನಕ್ಸಲರು ಶರಣಾಗಿದ್ದಾರೆ.