Friday, January 10, 2025
Homeರಾಜ್ಯಶರಣಾದ ನಕ್ಸಲರಿಗೆ ರಾಜ್ಯ ಸರ್ಕಾರ ತಲಾ 3 ಲಕ್ಷ ರೂ. ಘೋಷಣೆ

ಶರಣಾದ ನಕ್ಸಲರಿಗೆ ರಾಜ್ಯ ಸರ್ಕಾರ ತಲಾ 3 ಲಕ್ಷ ರೂ. ಘೋಷಣೆ

ಚಿಕ್ಕಮಗಳೂರು,ಜ.9- ಮುಖ್ಯಮಂತ್ರಿಗಳ ಸಮುಖದಲ್ಲಿ ಶರಣಾದ ಆರು ನಕ್ಸಲರಿಗೆ ಮೊದಲ ಹಂತದಲ್ಲಿ ತಲಾ ಮೂರು ಲಕ್ಷ ರೂ. ಮಂಜೂರು ಮಾಡಲಾಗಿದೆ. ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್‌ ವಸತಿ ಯೋಜನೆಯಡಿಯಲ್ಲಿ ನಕ್ಸಲ್‌ ಚಟುವಟಿಕೆಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬಂದವರಿಗೆ ಸರ್ಕಾರದಿಂದ ಘೋಷಣೆಯಾಗಿರುವ ಸೌಲಭ್ಯ ಒದಗಿಸಲು ಸರ್ಕಾರ ನಿರ್ದೇಶಿಸಿದೆ.

ನಿನ್ನೆ ರಾಜ್ಯದ ಭೂಗತ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳಹೊಳೆ, ಮಾರಪ್ಪ ಆರೋಟಿ, ಕೆ.ವಸಂತ, ಟಿ.ಎನ್‌.ಜಿಷಾ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್‌ ವಸತಿ ಯೋಜನೆಯ ರಾಜ್ಯ ಮಟ್ಟದ ನಕ್ಸಲ್‌ ಶರಣಾಗತಿ ಸಮಿತಿಯ ಮುಂದೆ ಮುಖ್ಯವಾಹಿನಿಗೆ ಬಂದಿದ್ದಾರೆ. ಶರಣಾಗತರಾದವರ ಅರ್ಜಿಯನ್ನು ಅನುಮೋದಿಸಿ ಅಂಗೀಕರಿಸಲು ಹಾಗೂ ಪವರ್ಗ ಎ ಅಡಿಯಲ್ಲಿನ ಶರಣಾಗತರಾಗಲು ಒಪ್ಪಿರುವ ನಕ್ಸಲರಿಗೆ 3 ಲಕ್ಷ ರೂ.ಗಳನ್ನು ಹಾಗೂ ಪ ಪ್ರವರ್ಗ ಬಿ ಅಡಿಯಲ್ಲಿನ ಶರಣಾಗತರಿಗೆ 3 ಲಕ್ಷ ರೂ.ಗಳನ್ನು ಸರ್ಕಾರದ ವತಿಯಿಂದ ನೀಡಲು ರಾಜ್ಯ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ.

ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ, ಬಾಳೆಹೊಳೆ, ಮಾರಪ್ಪ ಆರೋಟಿ, ಕೆ.ವಸಂತ, ಟಿ.ಎನ್‌.ಜಿಷಾ ಇವರುಗಳ ಔಪಚಾರಿಕ ಶರಣಾಗತಿಯನ್ನು ಅಂಗೀಕರಿಸಿ ಆದೇಶ ಹೊರಡಿಸಲು ಚಿಕ್ಕಮಗಳೂರು ಜಿಲ್ಲಾ ಸಮಿತಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್‌ ಸರ್ಕಾರದ ನಿರ್ದೇಶನದಂತೆ ನಿನ್ನೆ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್‌ ವಸತಿಯ ಜಿಲ್ಲಾ ಸಮಿತಿ ಸಭೆಯನ್ನು ನಡೆಸಿ ಸರ್ಕಾರದ ನಿರ್ದೇಶನದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.

ಶರಣಾಗತರಿಗೆ ಮೊದಲನೆ ಹಂತದಲ್ಲಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಜಮೆಯಾಗಿ ಬಾಕಿ ಉಳಿದಿರುವ ಪರಿಹಾರ ನಿಧಿಯಿಂದ ಈ ತಲಾ 3 ಲಕ್ಷ ರೂ. ಪ್ರೋತ್ಸಾಹಧನ ಮಂಜೂರು ಮಾಡಿ ಆದೇಶಿಸಿದ್ದು ಅವರ ವೈಯಕ್ತಿಕ ಖಾತೆಗೆ ಹಣ ಜಮೆ ಆಗಲಿದೆ.

RELATED ARTICLES

Latest News