Friday, January 10, 2025
Homeಬೆಂಗಳೂರುಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳಿಗೆ ಇಡಿ ಬಿಸಿ

ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳಿಗೆ ಇಡಿ ಬಿಸಿ

ಬೆಂಗಳೂರು,ಜ.9- ಬಿಬಿಎಂಪಿ ಪ್ರಧಾನ ಅಭಿಯಂತರ ಪ್ರಹ್ಲಾದ್‌ ಅವರ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವುದರಿಂದ ಪಾಲಿಕೆ ಮಾಜಿ ಕಾರ್ಫೋರೆಟರ್‌ ಗಳಿಗೆ ನಡುಕ ಶುರುವಾಗಿದೆ. 2016ರಲ್ಲಿ ಕೆಆರ್‌ಡಿಎಲ್‌ ವತಿಯಿಂದ ನಗರದಲ್ಲಿ ಕೊರೆಸಿರುವ ಬೋರ್‌ ವೆಲ್‌ ಹಾಗೂ ಅರ್‌ ಓ ಪ್ಲಾಂಟ್‌ ಬಗ್ಗೆ ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ಕಲೆ ಹಾಕಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕೊಟ್ಟ ಲೆಕ್ಕಕ್ಕೂ ಇಡಿ ಬಳಿ ಇರೋ ದಾಖಲೆಗೂ ಬಾರಿ ವ್ಯತ್ಯಾಸ ಕಂಡು ಬಂದಿದ್ದು ಆ ಅವಧಿಯಲ್ಲಿ ಇದ್ದ ಬಿಬಿಎಂಪಿ ಕಾರ್ಪೊರೇಟರ್‌ಗಳ ಕರಾಮತ್ತು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗಿದೆ.

ಲೆಕ್ಕದಲ್ಲಿ ಭಾರತಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ 43 ಮಾಜಿ ಪಾಲಿಕೆ ಸದಸ್ಯರಿಗೆ ಹಾಗೂ ಅಂದಿನ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಅಯುಕ್ತರ ಮೂಲಕ ನೋಟೀಸ್‌‍ ಜಾರಿ ಮಾಡಲಾಗಿದೆ.
ಇದರ ಜೊತೆಗೆ 2015ರಿಂದ 2024ರವರೆಗೆ ಹಂಚಿಕೆಯಾದ ಸ್ಥಾಯಿ ಸಮಿತಿ ನಿರ್ಣಯಗಳ ಪ್ರತಿ ನೀಡುವಂತೆಯೂ ಇಡಿ ಅಧಿಕಾರಿಗಳು ಪಾಲಿಕೆ ಕೌನ್ಸಿಲ್‌ ಸೆಕ್ರೆಟರಿಗೆ ಸೂಚನೆ ನೀಡಿದ್ದಾರೆ.
2015 ರಿಂದ 2019 ರವರೆಗಿನ ಮೂರು ಕೋಟಿಯಿಂದ 10 ಕೋಟಿ ವರೆಗೆ ವಲಯವಾರು ಬೋರ್‌ ವೆಲ್‌ ಕೋರೆಸಿದ ಹಾಗೂ ಅರ್‌ ಓ ಪ್ಲಾಂಟ್‌ ಗಳ ವಿವರ ಒದಗಿಸಿ. ಮೂರು ಕೋಟಿ ಗಿಂತ ಹೆಚ್ಚಿನ ಬೋರ್‌ ವೆಲ್‌ ಹಾಗೂ ಅರ್‌ ಓ ಪ್ಲಾಂಟ್‌ ಗಳ ಕೆಲಸವನ್ನು ಯಾರು ಅನುಮೋದಿಸಿದರೆ. ಈ ಬಗ್ಗೆ ದಾಖಲೆ ನೀಡಬೇಕು. ಬೋರ್‌ ವೆಲ್‌ ಮತ್ತು ಅರ್‌ ಓ ಪ್ಲಾಂಟ್‌ ಗಳ ಪ್ರಾಜೆಕ್ಟ್‌ಗೆ ಯಾರು ಬೇಡಿಕೆ ಇಟ್ಟಿದ್ದರು ಎನ್ನುವ ಮಾಹಿತಿ ನೀಡುವಂತೆಯೂ ಆದೇಶಿಸಲಾಗಿದೆ.

2015 ರಿಂದ 2019 ರವರೆಗೆ ಈ ವಲಯದಲ್ಲಿ ಈ ಹಿಂದೆ ಪ್ರಾಜೆಕ್ಟ್‌ ವ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ ಆಗಿ ಸೇವೆ ಸಲ್ಲಿಸಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಪಟ್ಟಿಯನ್ನು ಸಹ ಒದಗಿಸಿ. ಪ್ರಾಜೆಕ್ಟ್‌ ವ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ಗಳ ವಿಳಾಸಗಳು ಮತ್ತು ಅವರ ಬ್ಯಾಂಕ್‌ ಖಾತೆ ವಿವರಗಳನ್ನು ನೀಡಬೇಕಾಗಿದೆ. ಬೋರ್‌ವೆಲ್‌ಗಳು, ಆರ್‌ಒಗಳು ಹಾಗೂ ಒಳಚರಂಡಿಗಳು ಹಾಕಲಾಗಿದೆಯೇ ಮತ್ತು ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲಿಸಿದ ದಾಖಲೆಗಳನ್ನು ಕೌಂಟರ್‌ ಮಾಡಿ ಕೊಡಿ ಹಾಗೂ ಸರಾಸರಿ ವೆಚ್ಚ ಎಷ್ಟು ಎಂಬುದನ್ನು ತಿಳಿಸುವಂತೆಯೂ ತಿಳಿಸಲಾಗಿದೆ. ಇದರ ಜೊತೆಗೆ ಅಂದಿನ ಕಾರ್ಪೊರೇಟರ್‌ಗಳ ಹೆಸರು, ವಿಳಾಸ, ಪ್ಯಾನ್‌, ಆಧಾರ್‌ ಕಾರ್ಡ್‌, ಇಮೇಲ್‌ ಐಡಿ ಮತ್ತು ಪೋನ್‌ ಸಂಖ್ಯೆಗಳು (2015 ರಿಂದ 2019 ರ ಅವಧಿಯವರೆಗೆ) ನೀಡಿ ಎಂದು ಸೂಚಿಸಿರುವುದರಿಂದ ಮಾಜಿ ಕಾರ್ಪೊರೇಟರ್‌ಗಳಿಗೆ ತಲೆಬಿಸಿ ಶುರುವಾಗಿದೆ.

165 ಎಂಎಂ ವ್ಯಾಸದ ಬೋರ್‌ವೆಲ್‌ ಮತ್ತು ಪಂಪ್‌ಗಳಿಗೆ 10 ಲಕ್ಷಗಳ ಏಕರೂಪದ ಪಾವತಿ ಇತ್ತು. ದಯವಿಟ್ಟು ಏಕೆ ವಿವರಿಸಿ ಎಂದು ಇಡಿ ಅಧಿಕಾರಿಗಳು ಕೇಳಿದ್ದಾರೆ. ಇಡಿ ಅಧಿಕಾರಿಗಳ ಸೂಚನೆ ಮೇರೆಗೆ ಯಶವಂತಪುರ, ಅರ್‌ ಅರ್‌ ನಗರ, ಕೆಅರ್‌ ಪುರಂ, ಬೊಮನಹಳ್ಳಿ ವಲಯಗಳ ಚೀಪ್‌ ಇಂಜಿನಿಯರ್‌ ಗಳಿಗೆ ದಾಖಲೆ ಹಾಗೂ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.

RELATED ARTICLES

Latest News