Saturday, January 11, 2025
Homeರಾಷ್ಟ್ರೀಯ | Nationalದೆಹಲಿ ಸರ್ಕಾರದ ಮದ್ಯ ನೀತಿಯಿಂದ 2026 ಕೋಟಿ ನಷ್ಟ

ದೆಹಲಿ ಸರ್ಕಾರದ ಮದ್ಯ ನೀತಿಯಿಂದ 2026 ಕೋಟಿ ನಷ್ಟ

ನವದೆಹಲಿ,ಜ.11- ದೆಹಲಿ ಸರ್ಕಾರದಲ್ಲಿ ರದ್ದಾದ ಮದ್ಯ ನೀತಿಯ ಅನುಷ್ಠಾನದಲ್ಲಿನ ಅಕ್ರಮಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ 2026 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್‌ (ಸಿಎಜಿ) ವರದಿ ಬಹಿರಂಗಪಡಿಸಿದೆ. ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಸಿಎಜಿ ವರದಿ ಮಹತ್ವ ಪಡೆದುಕೊಂಡಿದೆ. ಅನುಷ್ಠಾನದಲ್ಲಿ ಉಂಟಾದ ಲೋಪದೋಷಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಇದರಲ್ಲಿ ಕೆಲವರ ಹಿತಾಸಕ್ತಿಯು ಅಡಗಿತ್ತು ಎಂದು ಪರೋಕ್ಷವಾಗಿ ಎಎಪಿ ನಾಯಕರ ಮೇಲೆ ವರದಿ ಬೊಟ್ಟು ಮಾಡಿದೆ.

ಈ ನೀತಿಯು ಅದರ ಉದ್ದೇಶಿತ ಗುರಿಗಳನ್ನು ಸಾಧಿಸಲು ವಿಫಲವಾಗಿದೆ ಮತ್ತು ಎಎಪಿ ನಾಯಕರು ಕಿಕ್‌ಬ್ಯಾಕ್‌ಗಳಿಂದ ಲಾಭ ಪಡೆದಿದ್ದಾರೆ ಎಂದು ಅದು ಉಲ್ಲೇಖಿಸಿದೆ. ಅಬಕಾರಿಯ ಬಿಡ್‌ದಾರರು ನಷ್ಟದಲ್ಲಿ ಓಡುತ್ತಿದ್ದಾರೆ ಎಂದು ವರದಿ ಹೇಳಿಕೊಂಡಿದೆ. ಆದರೂ ಅರವಿಂದ್‌ ಕೇಜ್ರಿವಾಲ್‌ ತಮ ಆಡಳಿತದಿಂದ ಪರವಾನಗಿ ನೀಡಲಾಗಿದೆ. ಸಿಎಜಿ ವರದಿಯು ಅಬಕಾರಿ ನೀತಿಯ ಅನುಷ್ಠಾನದಲ್ಲಿ ಗಮನಾರ್ಹ ಲೋಪಗಳನ್ನು ಎತ್ತಿ ತೋರಿಸಿದೆ. ಇದು ಸರ್ಕಾರಕ್ಕೆ ಸುಮಾರು 2,026 ಕೋಟಿ ನಷ್ಟಕ್ಕೆ ಕಾರಣವಾಯಿತು.

ಅಬಕಾರಿ ಇಲಾಖೆಯ ನೇತೃತ್ವ ವಹಿಸಿದ್ದ ಮನೀಶ್‌ ಸಿಸೋಡಿಯಾ ಮತ್ತು ಅವರ ಸಚಿವರ ಗುಂಪು ತಜ್ಞರ ಸಮಿತಿಯ ಶಿಫಾರಸುಗಳನ್ನು ನಿರ್ಲಕ್ಷಿಸಿದ್ದರಿಂದ ನಷ್ಟವಾಗಿದೆ. ಅಲ್ಲದೆ ಮದ್ಯದ
ಅಂಗಡಿಗಳಿಗೆ ಪರವಾನಗಿ ನೀಡುವಲ್ಲಿ ಮದ್ಯನೀತಿ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಸಚಿವ ಸಂಪುಟ ಸಭೆಯು ದೆಹಲಿ ಲೆಫ್ಟಿನೆಂಟ್‌ ಜನರಲ್‌ ಅನುಮೋದನೆಯಿಲ್ಲದೆ ಅನೇಕ ಪ್ರಮುಖ ನಿರ್ಧಾರಗಳನ್ನು ನಿರಂಕುಶವಾಗಿ ತೆಗೆದುಕೊಳ್ಳಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಸಿಎಜಿ ವರದಿಯ ಮುಖ್ಯಾಂಶಗಳು:

  • ಮನೀಶ್‌ ಸಿಸೋಡಿಯಾ ನೇತೃತ್ವದ ಸಚಿವರ ಗುಂಪು ತಜ್ಞರ ಸಮಿತಿಯ ಶಿಫಾರಸುಗಳನ್ನು ನಿರ್ಲಕ್ಷಿಸಿದೆ.
  • ದೂರುಗಳ ಹೊರತಾಗಿಯೂ ಎಲ್ಲಾ ಘಟಕಗಳು ಬಿಡ್‌ ಮಾಡಲು ಅನುಮತಿಸಲಾಗಿದೆ.
  • ಒಂದು ಘಟಕವು ನಷ್ಟವನ್ನು ತೋರಿಸಿದೆ, ಆದರೂ ಪರವಾನಗಿಯನ್ನು ನವೀಕರಿಸಲಾಗಿದೆ.
  • ಪರವಾನಗಿಗಳ ವಿತರಣೆಯಲ್ಲಿ ಉಲ್ಲಂಘನೆಯಾಗಿದೆ. ಉಲ್ಲಂಘಿಸುವವರಿಗೆ ಉದ್ದೇಶಪೂರ್ವಕವಾಗಿ ದಂಡ ವಿಧಿಸಲಾಗಿಲ್ಲ.
  • ಬೆಲೆ ನಿಗದಿಯಲ್ಲಿ ಪಾರದರ್ಶಕತೆಯ ಕೊರತೆ ಕಂಡುಬಂದಿದೆ.
  • ಕ್ಯಾಬಿನೆಟ್‌ ಅನುಮೋದನೆ ಅಥವಾ ಎಲ್‌ಜಿ ಅನುಮೋದನೆಯನ್ನು ಹಲವು ಪ್ರಮುಖ ನಿರ್ಧಾರಗಳಿಗೆ ತೆಗೆದುಕೊಳ್ಳಲಾಗಿಲ್ಲ.
  • ಅಬಕಾರಿ ನಿಯಮಗಳನ್ನು ಅನುಮೋದಿಸಲು ಶಾಸಕಾಂಗ ಸಭೆಯ ಮುಂದೆ ಇಡಬೇಕಾಗಿತ್ತು ಆದರೆ ಅವುಗಳು ಇಡಲಿಲ್ಲ.

  • ಸರ್ಕಾರಕ್ಕೆ 2,026 ಕೋಟಿ ರೂ.ನಷ್ಟ :
    ದೆಹಲಿ ಸರ್ಕಾರದ ಖಜಾನೆಗೆ 2,026 ಕೋಟಿ ರೂಪಾಯಿಗಳ ನಷ್ಟವನ್ನು ವಿವರಿಸಿದ ಸಿಎಜಿ ವರದಿಯು
    ಕೆಲವು ಚಿಲ್ಲರೆ ವ್ಯಾಪಾರಿಗಳು ತಮ ಪರವಾನಗಿಗಳನ್ನು ಪಾಲಿಸಿ ಅವಧಿ ಮುಗಿಯುವ ಮೊದಲೇ ಒಪ್ಪಿಸಿದ್ದಾರೆ
    ಮತ್ತು ಸರ್ಕಾರವು ಅವುಗಳನ್ನು ಮರು-ಟೆಂಡರ್‌ ಮಾಡದ ಕಾರಣ 890 ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾಯಿತು. ವಲಯ ಪರವಾನಗಿದಾರರಿಗೆ ಸರ್ಕಾರ ವಿನಾಯಿತಿ ನೀಡಿದ್ದು, ಇದರಿಂದ 941 ಕೋಟಿ ರೂ. ನಷ್ಟವಾಗಿದೆ.
  • ಕೋವಿಡ್‌-19 ನಿರ್ಬಂಧಗಳ ಕಾರಣದಿಂದಾಗಿ ಆಗಿನ ಕೇಜ್ರಿವಾಲ್‌ ಸರ್ಕಾರವು 144 ಕೋಟಿ ರೂಪಾಯಿಗಳ ಪರವಾನಗಿ ಶುಲ್ಕವನ್ನು ಮನ್ನಾ ಮಾಡಿದೆ. ಇದು ಮತ್ತಷ್ಟು ಆದಾಯ ನಷ್ಟಕ್ಕೆ ಕಾರಣಗಿದ್ದು, ಟೆಂಡರ್‌ ಒಪ್ಪಂದದಲ್ಲಿ ಬಲವಂತದ ನಿಬಂಧನೆಗೆ ಯಾವುದೇ ನಿಬಂಧನೆಗಳಿಲ್ಲ ಹಾಗೂ ಭದ್ರತಾ ಠೇವಣಿಗಳನ್ನು ತಪ್ಪಾದ ಸಂಗ್ರಹದಿಂದಾಗಿ 27 ಕೋಟಿ ರೂ. ನಷ್ಟವಾಗಿದೆ ಎಂದು ವರದಿ ತಿಳಿಸಿದೆ.
RELATED ARTICLES

Latest News