Monday, November 3, 2025
Homeಅಂತಾರಾಷ್ಟ್ರೀಯ | Internationalಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಿದ್ದಾಗ ಸಿಕ್ಕಿಬಿದ್ದ 96 ಸಾವಿರ ಭಾರತೀಯರು

ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಿದ್ದಾಗ ಸಿಕ್ಕಿಬಿದ್ದ 96 ಸಾವಿರ ಭಾರತೀಯರು

ವಾಷಿಂಗ್ಟನ್, ನ. 3 (ಪಿಟಿಐ) ಕಳೆದ ಒಂದು ವರ್ಷದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ 96 ಸಾವಿರ ಭಾರತೀಯರನ್ನ ಬಂಧಿಸಲಾಗಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ದತ್ತಾಂಶದಲ್ಲಿ ಬಹಿರಂಗಗೊಂಡಿದೆ. ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಯುಸಿಬಿಪಿ) ದತ್ತಾಂಶದ ಪ್ರಕಾರ 2022 ರ ಅಕ್ಟೋಬರ್ ಮತ್ತು 2023 ರ ಸೆಪ್ಟೆಂಬರ್‍ವರೆಗೆ ದಾಖಲೆಯ 96,917 ಭಾರತೀಯರನ್ನು ಅಕ್ರಮವಾಗಿ ಯುಎಸ್‍ಗೆ ದಾಟುವಾಗ ಬಂಧಿಸಲಾಗಿದೆಯಂತೆ.

ಕಾನೂನುಬಾಹಿರವಾಗಿ ಯುಎಸ್ ಗಡಿಯನ್ನು ದಾಟುತ್ತಿದ್ದಾಗ ಬಂಧಿತರಾದ ಭಾರತೀಯರು ಕಳೆದ ವರ್ಷಗಳಲ್ಲಿ ಐದು ಪಟ್ಟು ಹೆಚ್ಚಳವನ್ನು ಕಂಡಿದೆ ಎಂದು ವರದಿಯಾಗಿದೆ. 2019-20ರಲ್ಲಿ 19,883 ಭಾರತೀಯರನ್ನು ಬಂಧಿಸಲಾಗಿದೆ. 2020-21ರಲ್ಲಿ 30,662 ಭಾರತೀಯರನ್ನು ಬಂಧಿಸಲಾಗಿದ್ದು, 2021-22ರಲ್ಲಿ ಈ ಸಂಖ್ಯೆ 63,927 ಆಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ.

- Advertisement -

ಹಿಂದೂ ದೇವರುಗಳ ಆಶ್ಲೀಲ ಚಿತ್ರ ಮಾರಾಟ ಮಾಡುತ್ತಿದ್ದವನ ಬಂಧನ

ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ ನಡುವೆ ಬಂಧಿಸಲಾದ 96,917 ಭಾರತೀಯರಲ್ಲಿ 30,010 ಕೆನಡಾದ ಗಡಿಯಲ್ಲಿ ಮತ್ತು 41,770 ಮೆಕ್ಸಿಕೊ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ನಾಲ್ಕು ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ – ಜೊತೆಗಿರುವ ಅಪ್ರಾಪ್ತ ವಯಸ್ಕರು, ಕುಟುಂಬ ಘಟಕದಲ್ಲಿರುವ ವ್ಯಕ್ತಿಗಳು, ಒಂಟಿ ವಯಸ್ಕರು ಮತ್ತು ಜೊತೆಯಲ್ಲಿಲ್ಲದ ಮಕ್ಕಳು ಎಂದು ಗುರುತಿಸಲಾಗಿದೆ.

ಒಂಟಿ ವಯಸ್ಕರು ದೊಡ್ಡ ವರ್ಗವನ್ನು ಮಾಡುತ್ತಾರೆ. 2023 ರ ಆರ್ಥಿಕ ವರ್ಷದಲ್ಲಿ, 84,000 ಭಾರತೀಯ ವಯಸ್ಕರು ಅಕ್ರಮವಾಗಿ ಯುಎಸ್ ಅನ್ನು ದಾಟಿದ್ದಾರೆ. ಬಂಧಿತರಲ್ಲಿ 730 ಅಪ್ರಾಪ್ತ ವಯಸ್ಕರು ಸೇರಿದ್ದಾರೆ.

- Advertisement -
RELATED ARTICLES

Latest News