Sunday, January 19, 2025
Homeರಾಷ್ಟ್ರೀಯ | Nationalಸಿಆರ್‌ಪಿಎಫ್‌ ಡಿಜಿಯಾಗಿ ಜ್ಞಾನೇಂದ್ರ ಪ್ರತಾಪ್‌ ಸಿಂಗ್‌ ನೇಮಕ

ಸಿಆರ್‌ಪಿಎಫ್‌ ಡಿಜಿಯಾಗಿ ಜ್ಞಾನೇಂದ್ರ ಪ್ರತಾಪ್‌ ಸಿಂಗ್‌ ನೇಮಕ

Assam Police chief Gyanendra Pratap Singh appointed CRPF DG

ನವದೆಹಲಿ,ಜ.19- ಅಸ್ಸಾಂ ಪೊಲೀಸ್‌‍ ಪಡೆಯ ಮುಖ್ಯಸ್ಥ ಹಾಗು ಹಿರಿಯ ಐಪಿಎಸ್‌‍ ಅಧಿಕಾರಿ ಜ್ಞಾನೇಂದ್ರ ಪ್ರತಾಪ್‌ ಸಿಂಗ್‌ ಅವರನ್ನು ಕೇಂದ್ರ ಮೀಸಲು ಪೊಲೀಸ್‌‍ ಪಡೆ (ಸಿಆರ್‌ಪಿಎಫ್‌‍) ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಸಿಂಗ್‌ ಅವರು ಅಸ್ಸಾಂ-ಮೇಘಾಲಯ ಕೇಡರ್‌ನ 1991 ಬ್ಯಾಚ್‌ನ ಭಾರತೀಯ ಪೊಲೀಸ್‌‍ ಸೇವೆ ಅಧಿಕಾರಿ.ಮುಂದಿನ ನವೆಂಬರ್‌ 30, 2027 ರಂದು ಅವರ ನಿವೃತ್ತಿಯ ದಿನಾಂಕದವರೆಗೆ ಸಿಆರ್‌ಪಿಎಫ್‌‍ ಡಿಜಿಯಾಗಿ ಸಿಂಗ್‌ ಅವರ ನೇಮಕಾತಿಯನ್ನು ಕೇಂದ್ರ ಗೃಹ ಸಚಿವಾಲಯ ನೇಮಕಾತಿ ಸಮಿತಿ ಅನುಮೋದಿಸಿದೆ .

ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕಳೆದ ಡಿ.31 ರಂದು ಸಿಆರ್‌ಪಿಎಫ್‌ ಡಿಜಿ ಆಗಿದ್ದ ಅನೀಶ್‌ ದಯಾಳ್‌ ಸಿಂಗ್‌ ಅವರು ನಿವೃತ್ತರಾದ ನಂತರ ಈವರೆಗೆ ಹಿರಿಯ ಅಧಿಕಾರಿ ವಿತುಲ್‌ ಕುಮಾರ್‌ ಅವರು ಪಡೆಯ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದರು.

RELATED ARTICLES

Latest News