“ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು CRPF ಸಂಪೂರ್ಣ ಸಿದ್ಧ”

ಶ್ರೀನಗರ, ಮಾ.5- ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತರಲು ಮತ್ತು ಭಯೋತ್ಪಾದಕ ನಿಗ್ರಹ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಮೀಸಲು ಪೊಲೀಸ್ ಪಡೆ ಸಂಪೂರ್ಣ ಸಾಮಥ್ರ್ಯ ಹೊಂದಿದೆ ಎಂದು ಸಿಆರ್‌ಪಿಎಫ್ ಇನ್ಸ್‍ಪೆಕ್ಟರ್ ಜನರಲ್ ಎಂ.ಎಸ್.ಭಾಟಿಯಾ ತಿಳಿಸಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಭದ್ರತಾ ಪರಿಸ್ಥಿತಿ ತೀವ್ರವಾಗಿ ಸುಧಾರಿಸಿದೆ. ಭದ್ರತಾ ಪಡೆ ಜಾಗರೂಕವಾಗಿದೆ, ಅಪರಾಧ ಕೃತ್ಯಗಳ ಮೇಲೆ ನಿಗಾ ಇರಿಸಿದೆ. ಭಯೋತ್ಪಾದನೆ ನಿಗ್ರಹವನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಶಕ್ತಿ, ಸಾಮಥ್ರ್ಯ, […]
ಛತ್ತಿಸ್‍ಗಡದಲ್ಲಿ ಮೂವರು ನಕ್ಸಲರ ಹತ್ಯೆ

ಬಿಜಾಪುರ್, ನ.26- ಛತ್ತೀಸ್‍ಗಡ ರಾಜ್ಯ ಬಿಜಾಪುರ ಜಿಲ್ಲೆಯ ಮಿರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ತನಿಖಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದಾರೆ. ನಕ್ಸಲ್ ಬಾತ ಈ ಭಾಗದಲ್ಲಿ ಸಿಆರ್‍ಪಿಎಫ್, ಡಿಆರ್‍ಐ ಮತ್ತು ಎಸ್‍ಟಿಎಫ್ ಪಡೆಗಳು ಜಂಟಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದವು. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುವ ವೇಳೆ ನಕ್ಸಲರು ಎದುರಾಗಿದ್ದು ಗುಂಡಿನ ಕಾಳಗದಲ್ಲಿ ಮೂವರು ಹತ್ಯೆಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಸ್.ಪಿ.ಆಂಜನೇಯ ವರ್ಸೆನಿ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. […]