Tuesday, December 3, 2024
Homeರಾಜ್ಯಛತ್ತೀಸ್‍ಗಢ : ಮಾವೋವಾದಿಗಳಿಂದ ಐಇಡಿ ಸ್ಫೋಟ, ಸಿಆರ್‌ಪಿಎಫ್ ಯೋಧರಿಗೆ ಗಾಯ

ಛತ್ತೀಸ್‍ಗಢ : ಮಾವೋವಾದಿಗಳಿಂದ ಐಇಡಿ ಸ್ಫೋಟ, ಸಿಆರ್‌ಪಿಎಫ್ ಯೋಧರಿಗೆ ಗಾಯ

ರಾಯ್‍ಪುರ, ನ.7- ಮೊದಲ ಹಂತದ ಮತದಾನ ನಡೆಯುತ್ತಿರುವ ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಯೋಧ ಗಾಯಗೊಂಡಿರುವ ಘಟನೆ ಸಂಭವಿಸಿದೆ. ದಾಳಿಯ ವೇಳೆ ಗಾಯಗೊಂಡ ಯೋಧನನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮಾವೋವಾದಿಗಳ ಉಪಟಳವಿರುವ ತೊಂಡಮಾರ್ಕಾದ ದಟ್ಟ ಅರಣ್ಯದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಆರ್‍ಪಿಎಫ್ ಮತ್ತು ಕಮಾಂಡೋ ಬೆಟಾಲಿಯನ್ಸ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) 206 ನೇ ಬೆಟಾಲಿಯನ್ ಒಳಗೊಂಡ ಜಂಟಿ ತಂಡವು ಚುನಾವಣಾ ಸಮಯದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತೊಂಡಮಾರ್ಕ ಕ್ಯಾಂಪ್‍ನಿಂದ ಎಲ್ಮಗುಂದ ಗ್ರಾಮದ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಎಂದು ಹಿರಿಯ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಸುಳ್ಳು ಆರೋಪ ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ : ಸಿದ್ದರಾಮಯ್ಯ

ಕೋಬ್ರಾ 206ನೇ ಬೆಟಾಲಿಯನ್‍ನ ಸದಸ್ಯ ಇನ್ಸ್‍ಪೆಕ್ಟರ್ ಶ್ರೀಕಾಂತ್ ಅವರು ಮಾವೋವಾದಿಗಳು ನೆಲದಲ್ಲಿ ಹುದುಗಿಸಿಟ್ಟಿದ್ದ ಐಇಡಿಯನ್ನು ಆಕಸ್ಮಿಕವಾಗಿ ತುಳಿದ ಪರಿಣಾಮವಾಗಿ ಸ್ಫೋಟಗೊಂಡು ಗಾಯಗೊಂಡಿದ್ದಾರೆ. 90 ಸದಸ್ಯ ಬಲದ ಛತ್ತೀಸ್‍ಗಢ ವಿಧಾನಸಭೆಗೆ ಎರಡು ಹಂತದ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ಇಂದು ನಡೆದಿದೆ. 20 ಕ್ಷೇತ್ರಗಳಲ್ಲಿ ಒಂದಾದ ಕೊಂಟಾ ವಿಧಾನಸಭಾ ವಿಭಾಗಕ್ಕೆ ಒಳಪಡುತ್ತದೆ.

ಇವುಗಳಲ್ಲಿ ಹಲವಾರು ಕ್ಷೇತ್ರಗಳು ಮಾವೋವಾದಿ ಪೀಡಿತ ಬಸ್ತಾರ್ ವಿಭಾಗದಲ್ಲಿ ಬರುತ್ತವೆ. ಮೊದಲ ಹಂತದಲ್ಲಿ 5,304 ಚುನಾವಣಾ ಬೂತ್‍ಗಳನ್ನು ಸ್ಥಾಪಿಸಲಾಗಿದ್ದು, 25,249 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಾವೋವಾದಿಗಳ ಬೆದರಿಕೆಯಿಂದಾಗಿ ಮೊಹ್ಲಾ-ಮಾನ್‍ಪುರ, ಅಂತಗಢ, ಭಾನುಪ್ರತಾಪುರ್, ಕಂಕೇರ್, ಕೇಶ್ಕಲ್, ಕೊಂಡಗಾಂವ್, ನಾರಾಯಣಪುರ, ದಾಂತೇವಾಡ, ಬಿಜಾಪುರ ಮತ್ತು ಕೊಂಟಾದಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆದರೆ, ಉಳಿದ ಹತ್ತು ಕ್ಷೇತ್ರಗಳಾದ ಖೈರ್‍ಗಢ್, ಡೊಂಗರ್‍ಗಢ್, ರಾಜನಂದಗಾಂವ್, ಡೊಂಗರ್‍ಗಾಂವ್, ಖುಜ್ಜಿ, ಬಸ್ತಾರ್, ಜಗದಲ್‍ಪುರ್, ಚಿತ್ರಕೋಟ್, ಪಂಡರಿಯಾ ಮತ್ತು ಕವರ್ಧಾ ಜನರು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತ ಚಲಾಯಿಸಲಾಯಿತು.

RELATED ARTICLES

Latest News