Sunday, May 5, 2024
Homeರಾಷ್ಟ್ರೀಯನಕ್ಸಲರು ಹುದುಗಿಸಿಟ್ಟಿದ IED ಸ್ಪೋಟ, ಇಬ್ಬರು CRPF ಯೋಧರು ಗಂಭೀರ

ನಕ್ಸಲರು ಹುದುಗಿಸಿಟ್ಟಿದ IED ಸ್ಪೋಟ, ಇಬ್ಬರು CRPF ಯೋಧರು ಗಂಭೀರ

ದಾಂತೇವಾಡ, ಡಿ 2 (ಪಿಟಿಐ) ಛತ್ತೀಸ್‍ಗಢದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲೀಯರು ಹುದುಗಿದ್ದ ಸುಧಾರಿತ ಸ್ಪೋಟಕ ಸಾಧನ (ಐಇಡಿ) ಸ್ಪೋಟಗೊಂಡ ಪರಿಣಾಮ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್ಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಾವತಿ ನದಿಯ ಸೇತುವೆಯ ಬಳಿ ಮಾವೋವಾದಿಗಳ ಬ್ಯಾನರ್‍ನಲ್ಲಿ ಅಡಗಿಸಿಟ್ಟಿದ್ದ ಸ್ಪೋಟಕವನ್ನು ಭದ್ರತಾ ಸಿಬ್ಬಂದಿ ತಟಸ್ಥಗೊಳಿಸುತ್ತಿದ್ದಾಗ ಇಂದು ಬೆಳಿಗ್ಗೆ ಸ್ಪೋಟಿಸಿದೆ ಎಂದು ಸಿಆರ್‍ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಡ್ಡಾ ಹುಟ್ಟುಹಬ್ಬ : ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಶುಭಾಶಯ

ಇಂದಿನಿಂದ ಪ್ರಾರಂಭವಾಗಿರುವ ಪೀಪಲ್ಸ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‍ಜಿಎ) ಸಪ್ತಾಹದ ಅಂಗವಾಗಿ ಬಾರ್ಸೂರು-ಪಲ್ಲಿ ಮಾರ್ಗದಲ್ಲಿ ನಕ್ಸಲೀಯರ ಚಲನವಲನದ ಬಗ್ಗೆ ಸುಳಿವು ನೀಡಿದ ಮೇರೆಗೆ ಸಿಆರ್‍ಪಿಎಫ್‍ನ 195 ನೇ ಬೆಟಾಲಿಯನ್ ತಂಡವನ್ನು ಅಲ್ಲಿಗೆ ರವಾನಿಸಲಾಗಿತ್ತು. ಸಾತ್‍ಧಾರ್ ಸೇತುವೆಯ ಬಳಿ ಮಾವೋವಾದಿಗಳ ಬ್ಯಾನರ್ ಮತ್ತು ಐಇಡಿ ಬಚ್ಚಿಟ್ಟಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅದನ್ನು ನಿಷ್ಕ್ರಿಯಗೊಳಿಸಲು ಪ್ರಾರಂಭಿಸಿದರು.

ಆದರೆ, ಈ ಪ್ರಕ್ರಿಯೆಯಲ್ಲಿ ಅದು ಸೋಟಗೊಂಡು ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಇಬ್ಬರು ಯೋಧರನ್ನು ವಿಮಾನದಲ್ಲಿ ರಾಯ್‍ಪುರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News