Sunday, April 28, 2024
Homeಅಂತಾರಾಷ್ಟ್ರೀಯಕಿಂಗ್ ಚಾಲ್ರ್ಸ್ ಪರಿಸರ ಸಂರಕ್ಷಣೆ ಕಾರ್ಯ ಶ್ಲಾಘನೀಯ; ಮೋದಿ

ಕಿಂಗ್ ಚಾಲ್ರ್ಸ್ ಪರಿಸರ ಸಂರಕ್ಷಣೆ ಕಾರ್ಯ ಶ್ಲಾಘನೀಯ; ಮೋದಿ

ನವದೆಹಲಿ,ಡಿ.2– ಯುನೈಟೆಡ್ ನೇಷನ್ಸ್ ಕಾನರೆನ್ಸ್ ಆಫ್ ಪಾರ್ಟಿಸ್ -28 (ಕಾಪ್ 28) ಹವಾಮಾನ ಶೃಂಗಸಭೆಗಾಗಿ ದುಬೈಗೆ ಮಹತ್ವದ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ದೊರೆ ಕಿಂಗ್ ಚಾಲ್ಸರ್ ಅವರನ್ನು ಭೇಟಿಯಾದರು.

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಸೇರಿದಂತೆ ಪ್ರಧಾನಿ ಮೋದಿ ಅವರು ಸಮ್ಮೇಳನಕ್ಕೆ ತಮ್ಮ ಒಂದು ದಿನದ ಭೇಟಿಯ ಸಂದರ್ಭದಲ್ಲಿ ಹಲವಾರು ವಿಶ್ವ ನಾಯಕರನ್ನು ಭೇಟಿಯಾದರು.

ನಿನ್ನೆ ಸಾಮಾಜಿಕ ಮಾಧ್ಯಮ ಪೋಸ್ಟ್‍ನಲ್ಲಿ, ಪ್ರಧಾನಿ ಮೋದಿ ಅವರು ಶೃಂಗಸಭೆಯ ಬದಿಯಲ್ಲಿ ಕಿಂಗ್ ಚಾಲ್ಸರ್ ಅವರೊಂದಿಗಿನ ಸಂವಾದದ ಬಗ್ಗೆ ಬರೆದಿದ್ದಾರೆ. ಪರಿಸರ ಸಂರಕ್ಷಣೆಯ ಬಗೆಗಿನ ಬ್ರಿಟಿಷ್ ರಾಜನ ಉತ್ಸಾಹವನ್ನು ಪ್ರಧಾನಿ ಪ್ರಸ್ತಾಪಿಸಿದರು ಮತ್ತು ಅವರನ್ನು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಧ್ವನಿ ಎಂದು ಕರೆದರು.

ನಡ್ಡಾ ಹುಟ್ಟುಹಬ್ಬ : ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಶುಭಾಶಯ

ಇಂದು ಮುಂಚಿನ ದುಬೈನಲ್ಲಿ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಯಾವಾಗಲೂ ಉತ್ಸಾಹ ಹೊಂದಿರುವ ಕಿಂಗ್ ಚಾಲ್ಸರ್ï ಅವರೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತು. ಅವರು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಧ್ವನಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್‍ನಲ್ಲಿ ಬರೆದಿದ್ದಾರೆ.

RELATED ARTICLES

Latest News