Wednesday, January 22, 2025
Homeರಾಷ್ಟ್ರೀಯ | Nationalಮುಸ್ಲಿಂರನ್ನೂ ಆಕರ್ಷಿಸುತ್ತಿರುವ ಮಹಾಕುಂಭ..!

ಮುಸ್ಲಿಂರನ್ನೂ ಆಕರ್ಷಿಸುತ್ತಿರುವ ಮಹಾಕುಂಭ..!

Muslims take holy dip in Mahakumbh

ಲಕ್ನೋ,ಜ.22- ಮಹಾಕುಂಭ ಮೇಳದಲ್ಲಿ ಮುಸಲ್ಮಾನ್ ಬಾಂಧವರನ್ನು ನಿಷೇಧಿಸಿದ್ದರೂ ಕೆಲವರು ಇಲ್ಲಿಗೆ ಬಂದು ಪವಿತ್ರ ಸ್ನಾನ ಮಾಡುವ ಮೂಲಕ ತಾವು ಹಿಂದೂ ಪ್ರೇಮಿಗಳು ಎಂದು ಸಾಬೀತುಪಡಿಸಿದ್ದಾರೆ.

ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೆ 8.5 ಕೋಟಿಗೂ ಹೆಚ್ಚು ಜನರು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಸನಾತನ ಧರ್ಮದಲ್ಲಿ ನಂಬಿಕೆಯಿರುವ ಜನರು ಕುಂಭಕ್ಕೆ ಬರುತ್ತಿದ್ದಾರೆ. ಮಹಾಕುಂಭದಲ್ಲಿ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಲಾಗಿದೆ, ಆದರೂ ಜನರು ಅಲ್ಲಿಗೆ ಬಂದು ಸ್ನಾನ ಮಾಡುತ್ತಿದ್ದಾರೆ.

ಒಡಿಶಾದ ಬಾಲಸೋರ್‌ ನಿವಾಸಿ ಶೇಖ್‌ ರಫೀಕ್‌ ಎಂಬಾತ ಪ್ರಯಾಗ್‌ರಾಜ್‌ಗೆ ಆಗಮಿಸಿ ಪವಿತ್ರ ಸ್ನಾನ ಮಾಡಿ ಪುನೀತನಾಗಿದ್ದಾರೆ.ನಾನು ಒರಿಸ್ಸಾದ ಬಾಲಸೋರ್‌ ಜಿಲ್ಲೆಯ ನಿವಾಸಿ ಎಂದು ಶೇಖ್‌ ರಫೀಕ್‌ ಹೇಳಿದ್ದಾರೆ. ನಾನು ಪ್ರತಿದಿನ ಬೆಳಿಗ್ಗೆ ಟೀ ಸ್ಟಾಲ್‌ನಲ್ಲಿ ಮಹಾ ಕುಂಭದ ಬಗ್ಗೆ ಕೇಳುತ್ತಿದ್ದೆ. ಅದರ ಮಹಿಮೆಯನ್ನು ಕೇಳಿ ತಡೆದುಕೊಳ್ಳಲಾಗದೆ ಹೋಗಲೇಬೇಕು ಎಂದು ನಿರ್ಧರಿಸಿದೆ. ಮನೆಯವರೊಂದಿಗೆ ಮಾತನಾಡಿ ಮಹಾ ಕುಂಭಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಮಹಾಕುಂಭಕ್ಕೆ ಮುಸ್ಲಿಮರು ಬರುವಂತಿಲ್ಲ ಎಂದು ಈ ಜನರು ಹೇಳಿದ್ದರು, ಈ ಬಗ್ಗೆ ರಫೀಕ್‌ ದೇವರು ಒಬ್ಬನೇ, ಹಾಗಾಗಿ ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಇಲ್ಲಿಗೆ ಬಂದಿರುವುದು ನನ್ನ ಅದಷ್ಟ ಎಂದು ಭಾವಿಸುತ್ತೇನೆ ಎಂದರು. ರಫೀಕ್‌ ಅವರು ಸಂತರಿಂದ ಆಶೀರ್ವಾದ ಪಡೆಯುತ್ತಿದ್ದಾರೆ ಎಂದು ಹೇಳಿದರು. ಕಳೆದ ಮೂರು ದಿನಗಳಿಂದ ತ್ರಿವೇಣಿಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಜನರ ಕೊರಳಲ್ಲಿ ರುದ್ರಾಕ್ಷಿ ಮಣಿಗಳನ್ನು ಕಂಡಾಗ ನಾನು ಒಂದನ್ನು ಖರೀದಿಸಿ ಧರಿಸಿದ್ದೇನೆ ಎನ್ನುತ್ತಾರೆ ಅವರು.

ಇನ್ನು ಒಂದೋ ಎರಡೋ ದಿನ ಇದ್ದು ಬಿಡುತ್ತೇನೆ. ನಾನು ಇಲ್ಲಿ ಆನಂದವನ್ನು ಕಂಡುಕೊಂಡಿದ್ದೇನೆ, ಆದ್ದರಿಂದ ನಾನು ಕಳೆದ ಮೂರು ದಿನಗಳಿಂದ ಇಲ್ಲಿಯೇ ಕುಳಿತಿದ್ದೇನೆ. ಶೇಖ್‌ ರಫೀಕ್‌ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದಾರೆ. ಮನೆಯವರೆಲ್ಲ ಸೇರಿ ಬರಬೇಕೆಂದಿದ್ದರೂ ಮಗಳು ಚಿಕ್ಕವಳಾದ ಕಾರಣ ಚಳಿಯಿಂದಾಗಿ ಬರಲಾಗಲಿಲ್ಲ. ಸಿಎಂ ಯೋಗಿ ಎಲ್ಲಾ ವ್ಯವಸ್ಥೆಗಳನ್ನು ಸರಿಯಾಗಿ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

RELATED ARTICLES

Latest News