ಆಗ್ರಾ, ಜ, 27 (ಪಿಟಿಐ) – ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ಮನೆಗೆ ಹಿಂತಿರುಗುತ್ತಿದ್ದ ಇಡಿ ಕುಟುಂಬ ಫತೇಹಾಬಾದ್ ಪ್ರದೇಶದಲ್ಲಿ ಲಕ್ನೋ-ಆಗ್ರಾ ಎಕ್್ಸಪ್ರೆಸ್ವೇಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದೆ.
ದೆಹಲಿಯ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತರು, ರಾಷ್ಟ್ರ ರಾಜಧಾನಿಯ ಉತ್ತಮ್ ನಗರದ ನಿವಾಸಿಗಳು, ಪ್ರಯಾಗರಾಜ್ನ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿ ಮನೆಗೆ ಮರಳುತ್ತಿದ್ದರು.
42ರ ಹರೆಯದ ಓಂಪ್ರಕಾಶ್ ಸಿಂಗ್ ಎಂಬುವರು ಕಾರಿನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದಾರೆ. ವಾಹನವು ರಸ್ತೆ ವಿಭಜಕವನ್ನು ಹಾರಿ ಎಕ್ಸ್ ಪ್ರೆಸ್ವೇಯ ಎದುರು ಭಾಗದಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು.
ಸಿಂಗ್ ಅವರ ಪತ್ನಿ ಪೂರ್ಣಿಮಾ, ಅವರ ಮಗಳು ಅಹಾನಾ ಮತ್ತು ನಾಲ್ಕು ವರ್ಷದ ಮಗ ವಿನಾಯಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸಹಾಯಕ ಪೊಲೀಸ್ ಕಮಿಷನರ್ ಅಮರ್ ದೀಪ್ ತಿಳಿಸಿದ್ದಾರೆ.
ಮತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಚಾಲಕ ನಿದ್ರೆಗೆ ಜಾರಿದ್ದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿ ಹೇಳಿದರು.