ಹಾಸನ,ಜ.29- ಎಟಿಎಂ ಯಂತ್ರವನ್ನೇ ಕಳ್ಳರು ಹೊತ್ತೊಯ್ದಿರುವ ಘಟನೆ ನಗರದ ಹೊರವಲಯದ ಗೊರೂರು ರಸ್ತೆಯ ಹನುಮಂತಪುರದ ಬಳಿ ನಡೆದಿದೆ.ರಾಜ್ಯ ಹೆದ್ದಾರಿ ಬದಿಯಲ್ಲೇ ಇರುವ ಇಂಡಿಯ ಒನ್ ಎಟಿಎಂಗೆ ನುಗ್ಗಿದ ಕಳ್ಳರು ಹಣ ದೋಚಲು ಯತ್ನಿಸಿದ್ದಾರೆ.
ನಂತರ ಅದು ಸಾಧ್ಯವಾಗದಿದ್ದಾಗ ಸುಮಾರು 3 ಲಕ್ಷಕ್ಕೂ ಹೆಚ್ಚು ಹಣವಿದ್ದ ಯಂತ್ರವನ್ನೇ ಕದ್ದೊಯ್ದಿದ್ದಾರೆ.ಇಂದು ಬೆಳಿಗ್ಗೆ ಎಟಿಎಂ ಯಂತ್ರ ಕಾಣದಿದ್ದಾಗ ಆತಂಕಗೊಂಡ ಎಟಿಎಂಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸುತ್ತಮುತ್ತಲಿನ ಸಿಸಿ ಟಿವಿಯ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು ಕಳ್ಳರು ಯಂತ್ರವನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿದ್ದು ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.