Sunday, February 2, 2025
Homeಜಿಲ್ಲಾ ಸುದ್ದಿಗಳು | District Newsಶೆಡ್‌ಗೆ ಬೆಂಕಿಬಿದ್ದು 40ಕ್ಕೂ ಹೆಚ್ಚು ಕುರಿಗಳು ಬೆಂಕಿಗಾಹುತಿ

ಶೆಡ್‌ಗೆ ಬೆಂಕಿಬಿದ್ದು 40ಕ್ಕೂ ಹೆಚ್ಚು ಕುರಿಗಳು ಬೆಂಕಿಗಾಹುತಿ

More than 40 sheep burnt in shed fire

ಬಳ್ಳಾರಿ,ಫೆ.2- ಕುರಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 40ಕ್ಕೂ ಹೆಚ್ಚು ಕುರಿಗಳು ಬೆಂಕಿಗೆ ಆಹುತಿಯಾದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿಯ ಅಮಲಾಪುರ ಗ್ರಾಮದಲ್ಲಿ ನಡೆದಿದೆ.

ಅಗಸರ ಶೇಖರಪ್ಪ ಎಂಬ ರೈತರಿಗೆ ಸೇರಿದ ಕಣದಲ್ಲಿ ಆಕಸಿಕವಾಗಿ ಬೆಂಕಿ ತಗುಲಿ ಕಣದ ಪಕ್ಕದಲ್ಲಿದ್ದ ಕುರಿ ಶೆಡ್‌ಗೂ ಬೆಂಕಿ ಹತ್ತಿಕೊಂಡು ಅದರಲ್ಲಿದ್ದ 40 ಕುರಿಗಳು ಸುಟ್ಟುಹೋಗಿವೆ.
ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದಿದ್ದರಿಂದ ಕುರಿಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರೂ ಕುರಿಗಳನ್ನು ಬದುಕಿಸಲು ಸಾಧ್ಯವಾಗಿಲ್ಲ. ಸುಮಾರು 4 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆ ಬಾಳುವ ಕುರಿಗಳನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ.

RELATED ARTICLES

Latest News