Friday, February 7, 2025
Homeರಾಷ್ಟ್ರೀಯ | Nationalಕುಂಭಮೇಳ ಕಾಲ್ತುಳಿತ ದುರಂತ : ಲೋಕಸಭೆಯಲ್ಲಿ ಕೋಲಾಹಲ

ಕುಂಭಮೇಳ ಕಾಲ್ತುಳಿತ ದುರಂತ : ಲೋಕಸಭೆಯಲ್ಲಿ ಕೋಲಾಹಲ

Parliament in uproar over Maha Kumbh stampede

ನವದೆಹಲಿ,ಫೆ.3– ನಿರೀಕ್ಷೆಯಂತೆ ಉತ್ತರಪ್ರದೇಶದ ಪ್ರಯಾಗ್ರಾಜ್ನ ಕುಂಭಮೇಳದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಸತ್ನ ಕೆಳಮನೆಯಾದ ಲೋಕಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದ ನಡೆಯಿತು.

ದಿನದ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಕಳೆದ ವಾರ ಮೌನಿ ಅಮಾವಾಸ್ಯೆ ದಿನದಂದು ಪ್ರಯಾಗ್ರಾಜ್ನಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದ ವೇಳೆ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಈ ವೇಳೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ , ಮೊದಲು ಪ್ರಶ್ನೋತ್ತರ ಕಲಾಪ ಮುಗಿಯಲಿ ನಂತರ ಸರ್ಕಾರವು ಜಂಟಿ ಸಂಸದೀಯ ಸಮಿತಿಯ ವಕ್‌್ಫ ತಿದ್ದುಪಡಿ-2024 ಮಸೂದೆಯನ್ನು ಮಂಡನೆ ಮಾಡಲಿದೆ. ನಂತರ ನಾನು ನಿಮ ಮನವಿಯನ್ನು ಪರಿಗಣಿಸುತ್ತೇನೆ ಎಂದು ಹೇಳಿದರು.

ಇದನ್ನು ಒಪ್ಪದ ಪ್ರತಿಪಕ್ಷಗಳ ಸದಸ್ಯರು ದಿನದ ಎಲ್ಲಾ ಕಲಾಪವನ್ನು ಬದಿಗೊತ್ತಿ ಅತಿ ಜರೂರು ಎನಿಸಿದ ಕಾಲ್ತುಳಿತದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಕೋಲಾಹಲ ನಡೆಸಿದರು.
ಈ ಕೋಲಾಹಲದ ನಡುವೆ ಸಚಿವರಾದ ಅಮಿತ್ ಷಾ ಅವರು ತ್ರಿಭುವನ್ ಶೇಕರಿ ವಿಶ್ವವಿದ್ಯಾನಿಲಯ ಮಸೂದೆಯನ್ನು ಮಂಡಿಸಿದರು.

ಈ ಹಂತದಲ್ಲಿ ಮತ್ತೆ ಸದನದಲ್ಲಿ ಭಾರೀ ಗದ್ದಲ, ಕೋಲಾಹಲ ಉಂಟಾಯಿತು. ಪ್ರತಿಪಕ್ಷಗಳ ಸದಸ್ಯರು ಮೊದಲು ತಮ ತಮ ಆಸನದಲ್ಲಿ ಕುಳಿತುಕೊಳ್ಳಬೇಕೆಂದು ಸ್ಪೀಕರ್ ಮಾಡಿಕೊಂಡ ಮನವಿಗೆ ಯಾರೊಬ್ಬರು ಸೊಪ್ಪು ಹಾಕಲಿಲ್ಲ.

ಇದರಿಂದ ಕೆರಳಿದ ಸ್ಪೀಕರ್, ನೀವು ಸದನದಲ್ಲಿ ಹೇಗೆ ಘನತೆಯಿಂದ ನಡೆದುಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳಿ. ಸದನ ಸಮಯವನ್ನು ಹಾಳು ಮಾಡುವ ದುರದ್ದೇಶದಿಂದಲೇ ಇಲ್ಲಿಗೆ ಬಂದಿರಬೇಕು. ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯವಾಗಿ ದುಂದುವೆಚ್ಚ ಮಾಡಬೇಡಿ. ಮೊದಲು ಕಲಾಪ ನಡೆಯಲು ಅವಕಾಶ ನೀಡಿ ಎಂದು ನಿರ್ದೇಶಿಸಿದರು.

ಇಷ್ಟಕ್ಕೂ ಸುಮನಾಗದ ಪ್ರತಿಪಕ್ಷದವರು ಸದನದ ಬಾವಿಗಿಳಿದು ಮೊದಲು ಪ್ರಯಾಗ್ರಾಜ್ ಕಾಲ್ತುಳಿತದ ಬಗ್ಗೆ ಚರ್ಚೆಗೆ ಅವಕಾಶ ಕೊಡಿ. ಇದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಸರ್ಕಾರ ತಮ ತಪ್ಪುಗಳನ್ನು ಮರೆಮಾಚಲು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಆಗ ತಾಳೆ ಕಳೆದುಕೊಂಡ ಸ್ಪೀಕರ್ ಓಂ ಬಿರ್ಲಾ, ನೀವು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಮತದಾರರು ನಿಮನ್ನು ಆರಿಸಿ ಕಳುಹಿಸಿದ್ದಾರೆ. ಆದರೆ ನೀವು ಇಲ್ಲಿ ಮಾಡುತ್ತಿರುವುದಾದರೂ ಏನು? ಪ್ರತಿ ಸಂದರ್ಭದಲ್ಲೂ ಕಲಾಪದ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ಇದು ನಿಮಗೆ ಶೋಭೆ ತರುವುದಿಲ್ಲ. ಪ್ರತಿಪಕ್ಷದವರಾಗಿ ಹೇಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂಬುದನ್ನು ಮೊದಲು ಕಲಿತುಕೊಳ್ಳಿ ಎಂದು ನೀತಿ ಪಾಠ ಮಾಡಿದರು.

RELATED ARTICLES

Latest News