ಸಂಸತ್‍ನಲ್ಲಿ ಮತ್ತೆ ಗದ್ದಲ ಕೋಲಾಹಲ : ಕಲಾಪ ಮುಂದೂಡಿಕೆ

ನವದೆಹಲಿ,ಮಾ.28- ಸಂಸತ್‍ನ ಉಭಯ ಸದನಗಳಲ್ಲಿ ನಿನ್ನೆಯಂತೆ ಇಂದೂ ಕೂಡ ಕೋಲಾಹಲದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯಸಭೆ ಮತ್ತು ಲೋಕಸಭೆ ಎರಡು ಮಧ್ಯಾಹ್ನದವರೆಗೂ ಮುಂದೂಡಿಕೆಯಾಗಿದೆ. ರಾಹುಲ್‍ಗಾಂಧಿ ವಿರುದ್ಧ ರಾಜಕೀಯ ಪ್ರೇರಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದಾನಿ ಗುಂಪಿನ ಹಗರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಇಂದು ಕೂಡ ಕಪ್ಪು ಬಟ್ಟೆ ಧರಿಸಿ ಕಲಾಪದಲ್ಲಿ ಭಾಗವಹಿಸಿವೆ. ಲೋಕಸಭೆಯಲ್ಲಿ ಸದನ ಸಮಾವೇಶಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕ ಕಪ್ಪು ಬಟ್ಟೆಯೊಂದಿಗೆ ಸಭಾಧ್ಯ ಓಂ ಬಿರ್ಲಾ ಅವರ ಮುಂದಿನ ಬಾವಿಗೆ ಧಾವಿಸಿ […]

ರಾಹುಲ್ ಗಾಂಧಿ ಪ್ರಕರಣದ ಮೇಲೆ ಅಮೆರಿಕಾ ನಿಗಾ

ವಾಷಿಂಗ್ಟನ್,ಮಾ.28- ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನ್ಯಾಯಾಲಯದ ಪ್ರಕರಣವನ್ನು ಅಮೆರಿಕಾ ಗಮನಿಸುತ್ತಿದೆ, ಜೊತೆಯಲ್ಲಿ ಆ ದೇಶದಲ್ಲಿ ಪ್ರಜಾಪ್ರಭುತ್ವದ ತತ್ವಗಳು, ಮಾನವ ಹಕ್ಕುಗಳ ರಕ್ಷಣೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಪಾಲನೆಗಾಗಿ ಭಾರತ ತನ್ನ ಬದ್ಧತೆಯನ್ನು ಮುಂದುವರೆಸುವ ಬಗ್ಗೆ ಸಂವಹನ ನಡೆಸುತ್ತದೆ ಎಂದು ವಾಷಿಂಗ್ಟನ್ ತಿಳಿಸಿದೆ. 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‍ಗಾಂದಿಗೆ ಸೂರತ್ ನ್ಯಾಯಾಲಯವು ಮಾರ್ಚ್ 23 ರಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಅದಾದ ಒಂದು ದಿನದ ನಂತರ ಪ್ರಕರಣದಲ್ಲಿ ಶಿಕ್ಷೆಯಾದ […]

ಸಂಸತ್ ಉಭಯ ಸದನಗಳಲ್ಲಿ ಗದ್ದಲ: ಕಲಾಪ ಮುಂದೂಡಿಕೆ

ನವದೆಹಲಿ,ಮಾ.27- ರಾಹುಲ್‍ಗಾಂಧಿ ಅನರ್ಹತೆಯನ್ನು ಪ್ರಶ್ನಿಸಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ಇಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಸ್ಪೀಕರ್‍ಪೀಠದ ಮುಂದಿನ ಬಾವಿಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಕೆಲ ವಿಪಕ್ಷಗಳ ಸದಸ್ಯರು ಕೂಡ ದನಿ ಗೂಡಿಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಕೋಲಾಹಲ ಉಂಟಾಗಿ ಸ್ಪೀಕರ್ ಓಂಬಿರ್ಲಾ ಅವರು ಸದನವನ್ನು ಮಧ್ಯಾಹ್ನ 4 ಗಂಟೆಗೆ ಮುಂದೂಡಿದರು. ಈಶಾನ್ಯ ಪೊಲೀಸರ ಕಾರ್ಯಾಚರಣೆ : ದಾಖಲೆ […]

ಸಂಸತ್‍ನ ಉಭಯ ಸದನಗಳಲ್ಲಿ ಗದ್ದಲ

ನವದೆಹಲಿ,ಮಾ.24- ಎಂದಿನಂತೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ಗದ್ದಲದಿಂದ ಸಂಸತ್‍ನ ಉಭಯ ಸದನಗಳು ಯಾವುದೇ ಚರ್ಚೆಯಿಲ್ಲದೆ ಮುಂದೂಡಿಕೆಯಾಗಿವೆ. ಈ ಮೂಲಕ ಬಜೆಟ್ ಅಧಿವೇಶನದ ಮುಂದುವರೆದ ಎರಡನೇ ಭಾಗದಲ್ಲಿ ಯಾವುದೇ ಕಲಾಪಗಳು ನಡೆಯದೆ ಸಂಸತ್‍ನ ಸಮಯ ವ್ಯರ್ಥವಾಗಿದೆ. ಈ ನಡುವೆ ಯಾವುದೇಚರ್ಚೆ ಇಲ್ಲದೆ ಕೇಂದ್ರ ಬಜೆಟ್ ಅಂಗೀಕಾರಗೊಂಡಿರುವುದು ಆತಂಕ ಮೂಡಿಸಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಲಂಡನ್‍ನಲ್ಲಿ ರಾಹುಲ್‍ಗಾಂಧಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಅವಮಾನವಾಗುವಂತಹ ಹೇಳಿಕೆ ನೀಡಿದ್ದಾರೆ ಎಂದು […]

ಸಂಸತ್ ಸಂಕೀರ್ಣದಲ್ಲೇ ಪ್ರತಿಪಕ್ಷಗಳ ಪ್ರತಿಭಟನೆ

ನವದೆಹಲಿ, ಮಾ.21-ಎಂದಿನಂತೆ ಸಂಸತ್ತಿನ ಉಭಯ ಸದನಗಳ ಕಲಾಪ ಮತ್ತೆ ಮುಂದೂಡಿಕೆಯಾಗಿದ್ದು, ಪ್ರತಿಪಕ್ಷಗಳು ಅದಾನಿ ಗುಂಪಿನ ಷೇರು ಮೌಲ್ಯ ಹೆಚ್ಚಳ ಹಗರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸುವಂತೆ ಒತ್ತಾಯಿಸಿ ಸಂಸತ್ ಭವನದಲ್ಲೇ ಪ್ರತಿಭಟನೆ ನಡೆಸಿವೆ. ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರು, ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರ ಬೇಷರತ್ ಕ್ಷಮೆಗೆ ಪಟ್ಟುಹಿಡಿದಿವೆ. ಈ ಗೊಂದಲದಿಂದಾಗಿ ಕಳೆದ ಏಳು ದಿನದ ಕಲಾಪದಲ್ಲಿ ಯಾವುದೇ ಚರ್ಚೆಯಾಗದೆ, ಸಮಯ ವ್ಯರ್ಥವಾಗಿದೆ. ಇಂದು ಬೆಳಗ್ಗೆ ರಾಜ್ಯಸಭೆ […]

ರಾಹುಲ್ ವಿವಾದಿತ ಹೇಳಿಕೆ : ಸಂಸತ್‍ನಲ್ಲಿ ಮುಂದುವರೆದ ಗದ್ದಲ

ನವದೆಹಲಿ,ಮಾ.20- ಇಂಗ್ಲೆಂಡ್‍ನಲ್ಲಿ ರಾಹುಲ್‍ಗಾಂಧಿ ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಎಬ್ಬಿಸಿರುವ ಗದ್ದಲ ಎರಡನೇ ವಾರದ ಕಲಾಪದಲ್ಲೂ ಮುಂದುವರೆದಿದ್ದು, ಇಂದು ಬೆಳಗ್ಗೆ ರಾಜ್ಯಸಭೆ ಮತ್ತು ಲೋಕಸಭೆ ಅಧಿವೇಶನಗಳು ಮಧ್ಯಾಹ್ನದವರೆಗೂ ಮುಂದೂಡಿಕೆಯಾಗಿವೆ. ಲೋಕಸಭೆಯಲ್ಲಿ ಕಲಾಪವನ್ನು ಮುಂದೂಡುವ ಮೊದಲು ಸ್ಪೀಕರ್ ಓಂ ಬಿರ್ಲಾ, ಧರಣಿ ನಿರತ ಸದಸ್ಯರನ್ನು ಶಾಂತಗೊಳಿಸಲು ಪ್ರಯತ್ನಿಸಿದರು, ಸಮಸ್ಯೆ ಪರಿಹಾರ ಕಂಡುಕೊಳ್ಳಲು ಚರ್ಚೆ ನಡೆಸುವ ಸಲುವಾಗಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ತಮ್ಮ ಕೊಠಡಿಗೆ ಆಗಮಿಸುವಂತೆ ಸಲಹೆ ನೀಡಿದರು. ಕಲಾಪ ಆರಂಭವಾದ ತಕ್ಷಣ, […]

ಸಂಸತ್ ಉಭಯ ಸದನಗಳಲ್ಲಿ ಮುಂದುವರೆದ ಗದ್ದಲ : ಮತ್ತೆ ಕಲಾಪ ಮುಂದೂಡಿಕೆ

ನವದೆಹಲಿ,ಮಾ.17- ಬಜೆಟ್ ಅಧಿವೇಶನದ ಮುಂದುವರೆದ ಕಲಾಪದಲ್ಲಿ ಸತತ ಐದನೇ ದಿನವೂ ಯಾವುದೇ ಕಲಾಪ ನಡೆಯದೆ ಅಮೂಲ್ಯ ಸಮಯ ವ್ಯರ್ಥವಾಗಿದೆ. ಇಂದು ಕೂಡ ಉಭಯ ಸದನಗಳಲ್ಲಿ ಗದ್ದಲ ಮುಂದುವರೆದಿದ್ದರಿಂದ ದಿನದ ಕಲಾಪ ಮೊಟಕುಗೊಂಡಿದೆ. ಬ್ರಿಟನ್‍ನಲ್ಲಿ ರಾಹುಲ್‍ಗಾಂಧಿ ಉಪನ್ಯಾಸ ನೀಡುವಾಗ ಭಾರತದಲ್ಲಿ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ. ಸ್ವಯತ್ತ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪ್ರತಿಪಕ್ಷಗಳನ್ನು ಹತ್ತಿಕ್ಕುತ್ತಿದೆ. ಸಂಸತ್‍ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಮಾಧ್ಯಮಗಳು ಪ್ರತಿಪಕ್ಷಗಳ ಮಾತುಗಳನ್ನು ವರದಿ ಮಾಡದಂತೆ ಒತ್ತಡ ಹೇರಲಾಗುತ್ತಿದೆ. […]

ಸತತ 3ನೇ ದಿನವೂ ನಡೆಯದ ಸಂಸತ್ ಕಲಾಪ, ಅಮೂಲ್ಯ ಸಮಯ ವ್ಯರ್ಥ

ನವದೆಹಲಿ,ಮಾ.15- ವಿದೇಶದಲ್ಲಿ ರಾಹುಲ್‍ಗಾಂಧಿ ಭಾರತೀಯ ಪ್ರಜಾಪ್ರಭತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿ ಆಡಳಿತಾರೂಢ ಬಿಜೆಪಿ ನಡೆಸುತ್ತಿರುವ ವಾಗ್ದಾಳಿ ಮೂರನೇ ದಿನವೂ ಮುಂದುವರೆದಿದ್ದು ಆಡಳಿತ ಮತ್ತು ವಿರೋಧ ಪಕ್ಷಗಳ ಹಗ್ಗ ಜಗ್ಗಾಟದಿಂದ ಸತತ ಮೂರನೇ ದಿನವೂ ಸಂಸತ್ ಉಭಯ ಸದನಗಳಲ್ಲಿ ಯಾವುದೇ ಚರ್ಚೆ ನಡೆಯದೇ ಕಲಾಪ ವ್ಯರ್ಥವಾಗಿದೆ. ಆಡಳಿತ ಪಕ್ಷದ ಸದಸ್ಯರು ಲಂಡನ್‍ನಲ್ಲಿ ರಾಹುಲ್‍ಗಾಂಧಿ ತಾವು ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರೆ, ಪ್ರತಿಪಕ್ಷಗಳ ಸಂಸದರು ಆಡಳಿತ ಪಕ್ಷದ ಸದಸ್ಯ ಧೋರಣೆಯನ್ನು ಖಂಡಿಸಿ ಸದನದ […]

ಸಂಸತ್‍ನಲ್ಲಿ ಇಂದೂ ಪ್ರತಿಧ್ವನಿಸಿದ ರಾಹುಲ್‍ ವಿವಾದಿತ ಹೇಳಿಕೆ

ನವದೆಹಲಿ,ಮಾ.14- ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್‍ಗಾಂಧಿ ಲಂಡನ್‍ನಲ್ಲಿ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಂತ್‍ನ ಉಭಯ ಸದನಗಳಲ್ಲಿ ಆಡಳಿತ ಪಕ್ಷದ ಸದಸ್ಯರೇ ಗದ್ದಲ, ಕೋಲಾಹಲ ಸೃಷ್ಟಿಸಿದ್ದರಿಂದ ಇಂದೂ ಕೂಡ ಯಾವುದೇ ಕಲಾಪ ನಡೆಯದೆ ಬೋಜನ ವಿರಾಮಕ್ಕೆ ಅಧಿವೇಶನ ಮುಂದೂಡಿಕೆಯಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ನಿನ್ನೆಯಂತೆ ಇಂದೂ ಕೂಡ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ಬಿಜೆಪಿ ರಾಹುಲ್‍ಗಾಂಧಿ ಸದನಕ್ಕೆ ಬರಬೇಕು ಮತ್ತು ತಮ್ಮ ಹೇಳಿಕೆಗಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದೆ. ರಾಜ್ಯಸಭೆಯಲ್ಲಿ ಸಭಾನಾಯಕ ಮತ್ತು ಕೇಂದ್ರ ಸಚಿವ […]

“ಅದಾನಿ ಹಗರಣ ಮರೆ ಮಾಚಲು ಆಡಳಿತ ಪಕ್ಷದಿಂದ ಸಂಸತ್‍ನಲ್ಲಿ ಗದ್ದಲ”

ನವದೆಹಲಿ,ಮಾ.14- ಅದಾನಿ ಷೇರು ಬೆಲೆ ಏರಿಕೆಯಲ್ಲಿ ನಡೆದಿರುವ ಹಗರಣ ಹಾಗೂ ಸರ್ಕಾರದ ಪ್ರಮುಖರೊಂದಿಗೆ ಖಾಸಗಿ ಸಂಸ್ಥೆಯ ಆಪ್ತ ಸಂಬಂಧಗಳ ಕುರಿತು ಚರ್ಚೆಯಾಗಿ ಸಾರ್ವಜನಿಕರಿಗೆ ಮಾಹಿತಿ ತಿಳಿಯಬಾರದು ಎಂಬ ಕಾರಣಕ್ಕೆ ಬಿಜೆಪಿ ರಾಹುಲ್‍ಗಾಂಧಿ ಹೇಳಿಕೆಯನ್ನು ಉಭಯ ಸದನಗಳಲ್ಲಿ ಪ್ರಸ್ತಾಪಿಸಿ ಗದ್ದಲ ಎಬ್ಬಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇಂದು ಬೆಳಗ್ಗೆ ಸಂಸತ್ ಕಲಾಪಕ್ಕೂ ಮುನ್ನಾ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನಖರ್ಗೆ ಅವರ ಮನೆಯಲ್ಲಿ ಸಭೆ ನಡೆಸಿದ 16 ವಿರೋಧ ಪಕ್ಷಗಳ ನಾಯಕರು, ಸಂಸತ್‍ನಲ್ಲಿ ಅದಾನಿ ಗುಂಪಿನ ಕುರಿತು […]