Saturday, December 14, 2024
Homeರಾಷ್ಟ್ರೀಯ | Nationalಅಸಭ್ಯವಾಗಿ ವರ್ತಿಸಿ ಗೌರವ ಕಳೆದುಕೊಳ್ಳಬೇಡಿ : ವಿಪಕ್ಷಗಳಿಗೆ ಮೋದಿ ಸಲಹೆ

ಅಸಭ್ಯವಾಗಿ ವರ್ತಿಸಿ ಗೌರವ ಕಳೆದುಕೊಳ್ಳಬೇಡಿ : ವಿಪಕ್ಷಗಳಿಗೆ ಮೋದಿ ಸಲಹೆ

ನವದೆಹಲಿ,ಜ.31- ಸಂಸತ್ನಲ್ಲಿ ದುರ್ವತನೆ ತೋರಿ ಸದನದಿಂದ ಅಮಾನತುಗೊಂಡು ಪ್ರಜಾಪ್ರಭುತ್ವದ ಗೌರವವನ್ನು ಹಾಳು ಮಾಡಿದ್ದ ಸಂಸದರು ಈಗಲಾದರೂ ಪಶ್ಚಾತ್ತಾಪಪಟ್ಟು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಜಂಟಿ ಅಧಿವೇಶನಕ್ಕೂ ಮುನ್ನ ಸಂಸತ್ನ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಕೆಲವರು ಸಂಸತ್ನಲ್ಲಿ ಅಶಿಸ್ತು ತೋರಿ ಸದನದಿಂದ ಅಮಾನತುಗೊಂಡಿದ್ದರು. ಅಂಥವರು ಚರ್ಚೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದ ಮರ್ಯಾದೆ ಕಳೆದವರು ಪಶ್ಚಾತ್ತಾಪ ಪಡಲೇಬೇಕೆಂದು ಸೂಚ್ಯವಾಗಿ ಹೇಳಿದರು.

ವಿರೋಧ ಪಕ್ಷಗಳ ಸದಸ್ಯರ ಅಶಿಸ್ತಿನ ವರ್ತನೆ ಯಾರಿಗೂ ಶೋಭೆ ತರುವುದಿಲ್ಲ. ನಾವು ಮಾಡಿದ್ದೇ ಸರಿ ಎಂದು ಕೆಲವು ಸಂಸದರು ಭಾವಿಸಿದ್ದಾರೆ. ನಿಮ್ಮ ನಡೆಯನ್ನು ದೇಶದ ಜನತೆ ನೋಡುತ್ತಿದ್ದಾರೆ ಎಂಬುದನ್ನು ಮರೆಯಬೇಡಿ. ಈಗಲಾದರೂ ನಿಮ್ಮ ದುರ್ನಡತೆಯನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ಮಾಡಿದರು.

ಬೆಳಗಾವಿಯಲ್ಲಿ ಡಬಲ್ ಮರ್ಡರ್ : ಪತ್ನಿ , ಪ್ರಿಯಕರನ ಕೊಂದು ಪತಿ ಪರಾರಿ

ನಮ್ಮ ಸಂಸತ್ ಇರುವುದು ಸಕಾರಾತ್ಮಕ ಚರ್ಚೆಗೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುವ ಅಭ್ಯಾಸ ಇಟ್ಟುಕೊಂಡಿರುವವರು ಈ ಸದನದಲ್ಲಿ ನಾವು ಏನು ಮಾಡುತ್ತೇವೆ ಎಂಬ ಅರಿವು ನಿಮಗಿರಬೇಕು. ಧನಾತ್ಮಕ ಚಿಂತನೆ ಪ್ರತಿಯೊಬ್ಬರಲ್ಲೂ ಇರಬೇಕೆಂಬುದನ್ನು ನಾವು ಭಾವಿಸುತ್ತೇನೆ. ಸಂಸತ್ಗೆ ತಮ್ಮದೇ ಆದ ಸೇವೆ ಸಲ್ಲಿಸಿದವರನ್ನು ನಾವು ಸದಾ ಸ್ಮರಿಸುತ್ತೇವೆ. ಕಲಾಪಕ್ಕೆ ಅಡ್ಡಿಪಡಿಸಿದ ಸದಸ್ಯರನ್ನು ಎಂದಾದರೂ ನೆನಪಿಸಿಕೊಳ್ಳುತ್ತೇವೆ ಎಂದು ವಿರೋಧ ಪಕ್ಷಗಳಿಗೆ ಛಾಟಿ ಬೀಸಿದರು.

ಈ ವರ್ಷದ ಗಣರಾಜ್ಯೋತ್ಸವದಲ್ಲಿ ನಾವೆಲ್ಲರೂ ನಾರಿಶಕ್ತಿಗೆ ಸಾಕ್ಷಿಯಾಗಿದ್ದೇವೆ. ಇದು ನಮ್ಮ ದೇಶ ಮಹಿಳೆಯರಿಗೆ ನೀಡುವ ಗೌರವ. ನಾಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಲೋಕಸಭೆ ಮುಗಿದ ನಂತರ ನಾವೇ ಪೂರ್ಣ ಬಜೆಟ್ ಮಂಡನೆ ಮಾಡುತ್ತೇವೆ ಎನ್ನುವ ಮೂಲಕ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹೊಸ ಸಂಸತ್ನಲ್ಲಿ ಕಳೆದ ಅವೇಶನದ ವೇಳೆ ನಾವು ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಿದ್ದೇವೆ. ಈ ಹೊಸ ಸಂಸತ್ನ ಕಟ್ಟಡದಲ್ಲಿ ಮೊದಲ ಅಧಿವೇಶನದ ಕೊನೆಯ ದಿನ ಸಂಸತ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ಅದುವೇ ನಾರಿ ಶಕ್ತಿ ವಂದನ್ ಅನಿಯಮ್, ಇದೇ 26ರಂದು ದೇಶವು ನಾರಿಶಕ್ತಿ ಸಾಮಥ್ರ್ಯವನ್ನು ಅವರ ಶೌರ್ಯ, ಶಕ್ತಿ ಏನೆಂಬುದನ್ನು ಇಡೀ ದೇಶವೇ ನೋಡಿದೆ ಎಂದು ಕೊಂಡಾಡಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಧ್ಯಂತರ ಬಜೆಟ್ ಮಂಡಿಸುವಾಗ ಇದು ಕೂಡ ಒಂದು ರೀತಿ ನಾರಿ ಶಕ್ತಿಯ ಹಬ್ಬವಾಗಿದೆ ಎಂದು ಮೋದಿ ಪ್ರಶಂಸಿಸಿದರು.

RELATED ARTICLES

Latest News