Thursday, November 14, 2024
Homeಜಿಲ್ಲಾ ಸುದ್ದಿಗಳು | District Newsಬೆಳಗಾವಿಯಲ್ಲಿ ಡಬಲ್ ಮರ್ಡರ್ : ಪತ್ನಿ , ಪ್ರಿಯಕರನ ಕೊಂದು ಪತಿ ಪರಾರಿ

ಬೆಳಗಾವಿಯಲ್ಲಿ ಡಬಲ್ ಮರ್ಡರ್ : ಪತ್ನಿ , ಪ್ರಿಯಕರನ ಕೊಂದು ಪತಿ ಪರಾರಿ

ಬೆಳಗಾವಿ, ಜ.31- ವಿವಾಹವಾದ ತಿಂಗಳೊಳಗೆ ಕೈ ಕೊಟ್ಟು ಪ್ರಿಯಕರನ ಜತೆ ಮದುವೆಯಾಗಿದ್ದನ್ನು ಸಹಿಸದ ಮಾಜಿ ಪತಿ ರಾತ್ರಿ ತೋಟದ ಮನೆಗೆ ನುಗ್ಗಿ ಇಬ್ಬರನ್ನೂ ಲಾಂಗ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದ ಹೀನಾಕೌಸರ್ (19) ಹಾಗೂ ಪ್ರಿಯಕರ ಯಾಸಿನ್ ಬಾಗೊಡೆ (21) ಕೊಲೆಯಾದವರು.ಹಲ್ಲೆ ವೇಳೆ ಬಿಡಿಸಲು ಮಧ್ಯ ಪ್ರವೇಶಿಸಿದ ಅತ್ತೆ ಅಯಿನಾ ಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾ ಅವರ ಮೇಲೂ ಹಲ್ಲೆ ನಡೆಸಿದ್ದು, ಇವರಿಬ್ಬರನ್ನೂ ಮೀರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಜೋಡಿ ಕೊಲೆ ಮಾಡಿದ ಆರೋಪಿ ತೌಫಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ವಿವರ: ಹೀನಾ ಕೌಸರ್ ಪ್ರೀತಿಯ ಬಲೆಗೆ ಬಿದ್ದಿದ್ದರು. ಆದರೆ, ಮನೆಯವರ ಬಲವಂತಕ್ಕೆ ತನ್ನ ಪ್ರೀತಿಯನ್ನು ಮುಚ್ಚಿಟ್ಟು ನಾಲ್ಕು ತಿಂಗಳ ಹಿಂದಷ್ಟೇ ಕುಟುಂಬದವರ ನಿಶ್ಚಯದಂತೆ ಕೌಸರ್ನನ್ನು ವಿವಾಹವಾಗಿದ್ದಳು.ತದನಂತರ ಗಂಡನ ಜತೆ ಬಾಳುವುದಿಲ್ಲ, ನನ್ನ ಪ್ರಿಯಕರನೊಂದಿಗೆ ಹೋಗುವುದಾಗಿ ಹೇಳಿ ಮನೆ ಬಿಟ್ಟು ಹೋಗಿದ್ದಾಳೆ.

ಕುತೂಹಲ ಕೆರಳಿಸಿದ ಕುಮಾರಸ್ವಾಮಿ-ಸೋಮಣ್ಣ ಭೇಟಿ

ಆದರೆ, ಕೇವಲ ಒಂದು ತಿಂಗಳಿಗೆ ಪಿಯನ್ನು ತೊರೆದು ಹೋಗಿದ್ದರಿಂದ ಹೀನಾ ಮನೆಯವರು ಹುಡುಕಿ ಕರೆತಂದು ಸಮಾಜದ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದ್ದರು. ಆ ಸಂದರ್ಭದಲ್ಲಿ ನನಗೆ ತೌಫಿಕ್ ಇಷ್ಟವಿಲ್ಲ, ಪ್ರಿಯರ ಯಾಸಿನ್ ಬೇಕೆಂದು ಹೀನಾ ಹಠ ಹಿಡಿದಿದ್ದಾಳೆ. ಆಗ ಗ್ರಾಮಸ್ಥರೆಲ್ಲರೂ ಸೇರಿ ಹೀನಾಳ ಹೇಳಿಕೆಯಂತೆ ತೌಫಿಕ್ ಜತೆಗಿನ ವಿವಾಹವನ್ನು ಮುರಿದು ಯಾಸಿನ್ ಜತೆ ಮದುವೆ ಮಾಡಿಸಿದ್ದರು.

ಜೀವನದಲ್ಲಿ ಮದುವೆಯಾದ ಬಳಿಕ ಹೇಗೆಲ್ಲಾ ಇರಬೇಕೆಂದು ಕನಸು ಕಟ್ಟಿಕೊಂಡಿದ್ದ ತೌಫಿಕ್ ಲಕ್ಷಾಂತರ ರೂ. ಖರ್ಚು ಮಾಡಿ ಹೀನಾಳನ್ನು ಮದುವೆಯಾಗಿದ್ದರು. ಆಕೆ ಬಿಟ್ಟು ಹೋಗಿ ಬೇರೆ ಮದುವೆಯಾಗಿದ್ದರಿಂದ ತೌಫಿಕ್ ತನಗೆ ಅವಮಾನವಾಯಿತೆಂದು ಬೇಸರಗೊಂಡಿದ್ದಾನೆ.
ತನ್ನ ಜತೆಗಿನ ಸಂಬಂಧ ಮುರಿದುಕೊಂಡು ಕೇವಲ ತಿಂಗಳೊಳಗೆ ಬೇರೊಬ್ಬರ ಜತೆ ಮದುವೆಯಾಗಿ ಸಂಸಾರ ಮಾಡುತ್ತಿದ್ದುದನ್ನು ಸಹಿಸದ ತೌಫಿಕ್ ಅವರಿಬ್ಬರನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

ಅದರಂತೆ ರಾತ್ರಿ ತಾಲ್ಲೂಕಿನ ಕೊರಟನೂರು ಗ್ರಾಮದ ಹೊರವಲಯದ ತೋಟದ ಮನೆಗೆ ನುಗ್ಗಿ ಹೀನಾ ಕೌಸರ್ ಹಾಗೂ ಯಾಸಿನ್ ಮೇಲೆ ಲಾಂಗ್ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.ಈ ವೇಳೇ ತಡೆಯಲು ಬಂದ ಅತ್ತೆ-ಮಾವನ ಮೇಲೂ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಹಲ್ಲೆಯಿಂದ ಗಾಯಗೊಂಡಿದ್ದ ಹೀನಾ ಕೌಸರ್ ಹಾಗೂ ಯಾಸಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಐಗಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. 2 ತಂಡ ರಚನೆ: ಜೋಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ತೌಫಿಕ್ ಪತ್ತೆಗಾಗಿ ಎರಡು ತಂಡ ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಶೋಧ ಕೈಗೊಂಡಿವೆ.

RELATED ARTICLES

Latest News