Friday, November 22, 2024
Homeಜಿಲ್ಲಾ ಸುದ್ದಿಗಳು | District Newsಅರಣ್ಯ ಸಿಬ್ಬಂದಿ-ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ, ಒಬ್ಬ ಬೇಟೆಗಾರ ಸಾವು

ಅರಣ್ಯ ಸಿಬ್ಬಂದಿ-ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ, ಒಬ್ಬ ಬೇಟೆಗಾರ ಸಾವು

ಚಾಮರಾಜನಗರ, ನ.5-ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಮದ್ದೂರು ವನ್ಯಜೀವಿ ವಲಯದಲ್ಲಿ ಕಳ್ಳಬೇಟೆಗಾರರ ಗುಂಪು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಕಳ್ಳಬೇಟೆಗಾರ ಮೃತಪಟ್ಟಿರುವ ಘಟನೆ ನಡೆದಿದೆ.

ಇಂದು ಬೆಳಗಿನಜಾವ 2 ಗಂಟೆ ಸುಮಾರಿನಲ್ಲಿ 8-10 ಜನರಿದ್ದ ಕಳ್ಳ ಬೇಟೆಗಾರರ ಗುಂಪು ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸಿ, ಸಾಂಬಾರ (ಕಡವೆ) ಬೇಟೆ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಮೇಲೆ ಕಳ್ಳ ಬೇಟೆಗಾರರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿ ದಾಳಿ ಮಾಡಿದ ಸಂದರ್ಭದಲ್ಲಿ ಒಬ್ಬ ಕಳ್ಳ ಬೇಟೆಗಾರ ಮೃತಪಟ್ಟಿದ್ದು, ಇತರರು ತಪ್ಪಿಸಿಕೊಂಡಿರುವುದಾಗಿ ವರದಿಯಾಗಿದೆ.

ಸ್ಥಳದಿಂದ ಸಾಂಬಾರ್ (ಕಡವೆ) ಮಾಂಸ (ತಲೆ ಮತ್ತು ಕಾಲಿನ ಭಾಗ) ಮತ್ತು ಬಂದೂಕನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಜಿಲ್ಲಾ ದಂಡಾಧಿರಿಗಳೂ ಆದ ಜಿಲ್ಲಾಧಿಕಾರಿಗಳು ಮತ್ತು ಕೊಳ್ಳೇಗಾಲದ ಉಪ ವಿಭಾಗಾಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2023)

ನಂಜೇಗೌಡನ ಕಟ್ಟೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದು ಕಾಡಿನ ಗಡಿಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಬಂಡೀಪುರ ಅರಣ್ಯ ವಲಯದ ನಿರ್ದೇಶಕರು, ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಕೊಳ್ಳೆಗಾಲ ಉಪ ವಿಭಾಗಾಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

RELATED ARTICLES

Latest News