Monday, May 6, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2023)

ನಿತ್ಯ ನೀತಿ : ಹಣ ಮನುಷ್ಯನನ್ನು ಬದಲಿಸುವುದಿಲ್ಲ. ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ.

ಪಂಚಾಂಗ ಭಾನುವಾರ 05-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಪುಷ್ಯ / ಯೋಗ: ಶುಭ / ಕರಣ: ಬಾಲವ

ಸೂರ್ಯೋದಯ : ಬೆ.06.14
ಸೂರ್ಯಾಸ್ತ : 05.52
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ತಂದೆಯವರ ಕಠಿಣ ನಡವಳಿಕೆ ನಿಮಗೆ ಸಿಟ್ಟು ಬರಿಸುತ್ತದೆ. ಶಾಂತವಾಗಿರುವುದು ಒಳಿತು.
ವೃಷಭ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.
ಮಿಥುನ: ಮಕ್ಕಳ ಪ್ರಗತಿಯಲ್ಲಿ ಮಿಶ್ರ ಪ್ರತಿಫಲ ಕಾಣಬೇಕಾಗುತ್ತದೆ. ಶ್ರಮ ವಹಿಸಿ ಕೆಲಸ ಮಾಡಿ.

ಕಟಕ: ವಾಹನ ಕೊಳ್ಳಲು ಆಲೋಚನೆ ಮಾಡುವಿರಿ.
ಸಿಂಹ: ನಿಮ್ಮ ಜನಪ್ರಿಯತೆ ಉತ್ತುಂಗದಲ್ಲಿರುತ್ತದೆ ಮತ್ತು ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಿರಿ.
ಕನ್ಯಾ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡ ಬೇಡಿ.

ತುಲಾ: ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.
ವೃಶ್ಚಿಕ: ವಧು-ವರನನ್ನು ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ಸಿಗುವುದು ಕಷ್ಟಸಾಧ್ಯ.
ಧನುಸ್ಸು: ದೊಡ್ಡ ದೊಡ್ಡ ಕಾರ್ಯಕ್ರಮ ಆಯೋಜಿಸುವ ಮುನ್ನ ಹಿರಿಯರೊಂದಿಗೆ ಚರ್ಚಿಸಿ.

ಮಕರ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನ ದಲ್ಲಿ ಯಶಸ್ವಿಯಾಗುತ್ತಾರೆ.
ಕುಂಭ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.
ಮೀನ: ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ದೂರ ಪ್ರಯಾಣ ಮಾಡುವಿರಿ.

RELATED ARTICLES

Latest News