Thursday, November 14, 2024
Homeರಾಜ್ಯಅತ್ತಿಗೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಮೈದುನ

ಅತ್ತಿಗೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಮೈದುನ

ಬೆಂಗಳೂರು,ನ.4- ಮೈದುನನೇ ತನ್ನ ಅತ್ತಿಗೆ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಯಳ್ಳೂರು ಗ್ರಾಮದ ನಿವಾಸಿಗಳಾದ ಗೀತಾ ಮರಿಗೌಡ (35), ಇವರ ಮಕ್ಕಳಾದ ಅಕುಲ್(10) ಮತ್ತು ಅಂಕಿತಾ (7) ಕೊಲೆಯಾದ ದುರ್ದೈವಿಗಳು.

ಗೀತಾ ಅವರ ಪತಿ ಹೊನ್ನಗೌಡ ಮರಿಗೌಡ ಅವರು ದುಬೈನಲ್ಲಿ ಮೆಕ್ಯಾನಿಕಲ್ ವೃತ್ತಿ ಮಾಡುತ್ತಿದ್ದು, ಯಳ್ಳೂರಿನಲ್ಲಿ ಇವರ ಕುಟುಂಬ ನೆಲೆಸಿದ್ದು, ಇವರ ಜೊತೆ ಮೈದುನ ಕುಮಾರ ಗೌಡ ಮರಿಗೌಡ (32) ವಾಸವಿದ್ದು ಈತ ಅವಿವಾಹಿತ. ಮನೆ ಹಾಗೂ ಅಂಗಡಿಯನ್ನು ಹೊನ್ನಗೌಡ ಅವರು ಬಾಡಿಗೆಗೆ ಕೊಟ್ಟಿದ್ದು, ಬಾಡಿಗೆ ಹಣವನ್ನು ಸಹೋದರ ಕುಮಾರ ಗೌಡನೇ ಪಡೆದುಕೊಳ್ಳುತ್ತಿದ್ದನು.

ಇತ್ತೀಚೆಗಷ್ಟೇ ದುಬೈನಿಂದ ಹೊನ್ನಗೌಡ ಅವರು ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಕುಮಾರ ಗೌಡ ಬಾಡಿಗೆ ಹಣವನ್ನು ದುಂದುವೆಚ್ಚ ಮಾಡಿ ದುಶ್ಚಟ ಕಲಿತಿದ್ದಾನೆಂದು ಪತಿಗೆ ಗೀತಾ ಅವರು ತಿಳಿಸಿದ್ದಾರೆ. ತನ್ನ ಸಹೋದರ ಹಾಳಾಗುತ್ತಿದ್ದಾನೆಂದು ತಿಳಿದು ಅಂಗಡಿ ಹಾಗೂ ಮನೆಗಳು ಬಾಡಿಗೆದಾರರಿಗೆ ಬಾಡಿಗೆ ಹಣವನ್ನು ಪತ್ನಿಗೆ ಕೊಡಿ ಎಂದು ಹೇಳಿ ನಂತರದ ದಿನಗಳಲ್ಲಿ ಹೊನ್ನಗೌಡ ಅವರು ದುಬೈಗೆ ಹೋಗಿದ್ದಾರೆ.

ದೆಹಲಿಗೆ ಹೊಂದಿಕೊಂಡ ಹಲವು ನಗರಗಳಲ್ಲಿ ಕಂಪಿಸಿದ ಭೂಮಿ

ಇದರಿಂದ ಅತ್ತಿಗೆ ಮೇಲೆ ಕೋಪಗೊಂಡ ಮೈದುನ ಕುಮಾರಗೌಡ ಮಧ್ಯರಾತ್ರಿ ಎದ್ದು, ನಿದ್ರೆಗೆ ಜಾರಿದ್ದ ಅತ್ತಿಗೆ ಮತ್ತು ಇಬ್ಬರು ಮಕ್ಕಳ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಮನಬಂದಂತೆ ಕತ್ತಿಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ವಿಷಯ ಹಾನಗಲ್ ಠಾಣೆ ಪೊಲೀಸರಿಗೆ ಗೊತ್ತಾಗಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ತಾಯಿ ಹಾಗೂ ಇಬ್ಬರು ಮಕ್ಕಳು ರಕ್ತದ ಮಡುವಿನಲ್ಲಿ ಕೊಲೆಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಹಾನಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.

RELATED ARTICLES

Latest News