ಬಾರಾಬಂಕಿ, ಫೆ 7 (ಪಿಟಿಐ) ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಬಿಡಿಸಿ ಕಂಟೋನೆಂಟ್ ಗೇಟ್ ಬಳಿ ಸೇನಾ ಟ್ರಕ್ ಡಿಕ್ಕಿ ಹೊಡೆದು ಭಾರತೀಯ ಸೇನೆಯ ಬಾಂಬ್ ನಿಷ್ಕ್ರಿಯ ದಳದ 31 ವರ್ಷದ ಯೋಧ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್ನ ಬ್ರೇಕ್ ಫೇಲ್ ಆಗಿದ್ದರಿಂದ ಅಪಘಾತ ಸಂಭವಿಸಿ ಯೋಧ ಮೊಹಮದ್ ಇರ್ಫಾನ್ ಅಲಿ ಸಾವನ್ನಪ್ಪಿದ್ದಾರೆ. ಸಹರಾನ್ಪುರ ಜಿಲ್ಲೆಯ ದಿಯೋಬಂದ್ನ ನಿವಾಸಿಯಾಗಿದ್ದ ಆಲಿ ಅವರನ್ನು ಕಂಟೋನೆಂಟ್ನಲ್ಲಿ ನಿಯೋಜಿಸಲಾಗಿತ್ತು ಎಂದು ಕೊತ್ವಾಲಿ ಉಸ್ತುವಾರಿ ಅಲೋಕ್ ಮಣಿ ತ್ರಿಪಾಠಿ ಹೇಳಿದ್ದಾರೆ.
ಇರ್ಫಾನ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ವರ್ಷದ ಮಗಳಿದ್ದಾಳೆ. ಇರ್ಫಾನ್ ಕಂಟೋನೆಂಟ್ ಗೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹೊರಗಿನಿಂದ ಬರುತ್ತಿದ್ದ ಸೇನಾ ಟ್ರಕ್ ಕಂಟೋನೆಂಟ್ ಪ್ರವೇಶಿಸುತ್ತಿದ್ದಂತೆ ಬ್ರೇಕ್ ಫೇಲ್ ಆಗಿ ಡಿಕ್ಕಿ ಹೊಡೆದಿದೆ.
ತೀವ್ರವಾಗಿ ಗಾಯಗೊಂಡಿದ್ದ ಇರ್ಫಾನ್ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಬರುವಷ್ಟರಲ್ಲಿ ಅವರು ಮತಪಟ್ಟಿದ್ದಾರೆ ಎಂದು ತ್ರಿಪಾಠಿ ಹೇಳಿದರು.ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಯೋಧನ ಮತದೇಹವನ್ನು ಸಕಲ ಗೌರವಗಳೊಂದಿಗೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ನಂತರ ಅವರ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು