Saturday, February 8, 2025
Homeಜಿಲ್ಲಾ ಸುದ್ದಿಗಳು | District Newsಬೆಂಗಳೂರು ಗ್ರಾಮಾಂತರ | Bengaluru Ruralಕಾಣೆಯಾದ ವ್ಯಕ್ತಿ ಅಸ್ಥಿಪಂಜರವಾಗಿ ಪತ್ತೆ

ಕಾಣೆಯಾದ ವ್ಯಕ್ತಿ ಅಸ್ಥಿಪಂಜರವಾಗಿ ಪತ್ತೆ

Missing man found as skeleton

ದೊಡ್ಡಬಳ್ಳಾಪುರ,ಫೆ.8– ಕಾಣೆಯಾದ ವ್ಯಕ್ತಿಯ ಶವ ಮರವೊಂದರ ಕೊಂಬೆಯಲ್ಲಿ ನೇತಾಡುವ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಕೂಗೋನಹಳ್ಳಿ ಬಳಿ ಬೆಳಕಿಗೆ ಬಂದಿದೆ.

ಮೃತ ವ್‌ಯಕ್ತಿಯನ್ನು ಕೂಗೋನಹಳ್ಳಿ ನಿವಾಸಿ ಸುರೇಶ(53)ಎಂದು ಗುರುತಿಸಲಾಗಿದೆ.ಕುಡಿತದ ಚಟ ಬಿಡಿಸಲು ಕುಟುಂಬಸ್ಥರು ವಿಪರೀತ ಒತ್ತಡ ಹೇರಿದ್ದರಿಂದ ಬೇಸರಗೊಂಡು ಗ್ರಾಮದ ಹೊರವಲಯದಲ್ಲಿರುವ ಹುಣಸೆಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸುಮಾರು ಎರಡು ತಿಂಗಳ ಹಿಂದೆಯೆ ಸುರೇಶ್‌ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮರದ ಸುತ್ತ ರೆಂಬೆ ಕೊಂಬೆಗಳು ಬೆಳೆದು ದಟ್ಟವಾಗಿದ್ದರಿಂದ ಹಾಗು ಜನರ ಓಡಾಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದು ಯಾರಿಗೂ ತಿಳಿದುಬಂದಿಲ್ಲ..! ಸುರೇಶ್‌ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ದೊಡ್ಡಬೆಳವಂಗಲ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು.

ಶುಕ್ರವಾರ ಆಕಸ್ಮಿಕವಾಗಿ ಗ್ರಾಮಸ್ಥರು ಆ ಕಡೆ ಹೋದಾಗ ಮರದಲ್ಲಿ ನೇಣುಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿ ಅಸ್ಥಿಪಂಜರ ಕಂಡಿದೆ,ಮಾಹಿತಿ ತಿಳಿದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅದು ಸುರೇಶ್‌ ನ ಶವ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News