ಮತ್ತೆ ಸದ್ದು ಮಾಡಿದ ಪೊಲೀಸರ ರಿವಾಲ್ವರ್ : ರೌಡಿಗೆ ಗುಂಡೇಟು

ನೆಲಮಂಗಲ, ನ.25- ಪೊಲೀಸರ ರಿವಾಲ್ವರ್ ಮತ್ತೆ ಸದ್ದು ಮಾಡಿದ್ದು, ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಕೊಲೆ ಆರೋಪಿಯೂ ಆಗಿರುವ ರೌಡಿ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ.ರಾಜ ರಾಜನ್ ಅಲಿಯಾಸ್ ಸೇಟು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಶೀಟರ್. ಘಟನೆ ವಿವರ: ದಾಸನಪುರ ಹೋಬಳಿ ಮಾಚೋಹಳ್ಳಿಯ ಗೋಡೌನ್ ಒಂದರ ಬಳಿ ನ.14ರಂದು ನಡೆದ ರೌಡಿ ಶೀಟರ್ ನಟರಾಜ ಅಲಿಯಾಸ್ ಮುಳ್ಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜನ್ ಅಲಿಯಾಸ್ ಮುಳ್ಳು, ಕುಮಾರ್ ಸೇರಿದಂತೆ ಮೂವರು […]

ನೆಲಮಂಗಲದಲ್ಲಿ ಘರ್ಜಿಸಿದ ಪೊಲೀಸ್ ಪಿಸ್ತೂಲ್ : ದರೋಡೆಕೋರನಿಗೆ ಗುಂಡೇಟು

ನೆಲಮಂಗಲ, ನ.23- ಸ್ಥಳ ಮೊಹಜರಿಗೆ ಕರೆದೊಯ್ದ ವೇಳೆ ಇಟ್ಟಿಯಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಯೋಗಾನಂದ ಅಲಿಯಾಸ್ ನೈಟ್‍ಶಿಫ್ಟ್ ಯೋಗಿ ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರ. ಈತ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣವಲ್ಲದೆ ಬೆಂಗಳೂರು ನಗರದ ಬ್ಯಾಟರಾಯನಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪ್ರಕರಣಗಳು,ತುಮಕೂರಿನ ಕೋರಾ, ಅಮೃತೂರು ಠಾಣೆ, ನೆಲಮಂಗಲ ಗ್ರಾಮಾಂತರ, ಶ್ರೀರಂಗಪಟ್ಟಣ, ಹಿರಿಸಾವೆ ಪೊಲೀಸ್ ಠಾಣೆ ಸೇರಿದಂತೆ ಇತರೆ ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು […]

ದುಷ್ಕರ್ಮಿಗಳಿಂದ ಮನೆ, ದೇವಾಲಯ ಧ್ವಂಸ

ನೆಲಮಂಗಲ, ನ.13- ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ಏಕಾಏಕಿ ಮನೆಯಿಂದ ಹೊರಹಾಕಿ ಮನೆ ಹಾಗೂ ಪಕ್ಕದಲ್ಲಿದ್ದ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮಾರನಹಳ್ಳಿಯಲ್ಲಿ ನಡೆದಿದೆ. ಮನೆ ಖಾಲಿ ಮಾಡುವಂತೆ ಲಾಂಗು, ಮಚ್ಚುಗಳಿಂದ ಬೆದರಿಸಿದ ಕೆಲ ದುಷ್ಕರ್ಮಿಗಳು ಜೆಸಿಬಿಗಳ ಮೂಲಕ ಮನೆ ಮತ್ತು ದೇಗುಲವನ್ನು ಕೆಡವಿದ್ದಾರೆ. ಸುಮಾರು 25ಕ್ಕೂ ಹೆಚ್ಚು ದುಷ್ಕರ್ಮಿಗಳು ಮನೆಗೆ ನುಗ್ಗಿ ದಾಂಧಲೆ ಮಾಡಿ ಮನೆಯನ್ನು ಧ್ವಂಸ ಮಾಡುತ್ತಿದ್ದಾಗ ಆಟೋ, ಕಾರು […]

ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆಗೆ ಶರಣಾದ ತಾಯಿ

ಮಾಗಡಿ,ಸೆ.4- ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹೊಸಪಾಳ್ಯದಲ್ಲಿ ನಡೆದಿದೆ.ಮಾಗಡಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಅವರ ಪತ್ನಿ ರೂಪ(38) ಇವರ ಮಕ್ಕಳಾದ ಹರ್ಷಿತ (6) ಹಾಗೂ ಸ್ಪೂರ್ತಿ (4) ಮೃತ ದುರ್ದೈವಿಗಳಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಇಡೀ ಕುಟುಂಬ ತಿರುಪತಿಗೆ ತೆರಳಿ ವಾಪಸ್ ಆಗಿದ್ದರು. ಇಂದು ಮುಂಜಾನೆ ಮಕ್ಕಳನ್ನೊ ಕರೆದುಕೊಂಡು ರೂಪ ಜಮೀನಿಗೆ ಹೋಗಿದ್ದರು.ಎಷ್ಟೊ ಹೊತ್ತಾದರೂ ಬಾರದ ಕಾರಣ ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿ ತಮ್ಮ ಜಮೀನಿನ […]

ಶೆಡ್ ಮೇಲೆ ಗೋಡೌನ್ ಗೋಡೆ ಕುಸಿದು ನಾಲ್ವರ ಸಾವು

ಹೊಸಕೋಟೆ,ಜು.21- ಕೂಲಿ ಕಾರ್ಮಿಕರು ತಂಗಿದ್ದ ಶೆಡ್ ಮೇಲೆ ವೇರ್‍ಹೌಸ್‍ನ ಗೋಡೆ ಕುಸಿದು ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಮೂಲತಃ ಬಿಹಾರದ ಮನೋಜ್‍ಕುಮಾರ್ ಸದಯ್ (35), ರಾಮಕ್‍ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದೆಯ (22) ಹಾಗೂ ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ನಿರ್ಮಾಣ ಹಂತದ ಸೌಪರ್ಣಿಕಾ ಬಹುಮಹಡಿ ಅಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತಂಗಲು ತಾತ್ಕಾಲಿಕ ಶೆಡ್ ನಿರ್ಮಿಸಲಾಗಿತ್ತು. […]

ಮೂವರು ದರೋಡೆಕೋರರ ಸೆರೆ

ದೇವನಹಳ್ಳಿ, ಜು.15- ಕಾರಿನಲ್ಲಿ ಬಂದು ವ್ಯಕ್ತಿಯ ಕಾಲಿಗೆ ಹೊಡೆದು 10 ಗ್ರಾಂ ಸರ ಕಿತ್ತುಕೊಂಡು ಎಟಿಎಂನಿಂದ 15 ಸಾವಿರ ಹಣ ಡ್ರಾಮಾಡಿಸಿಕೊಂಡು ಪರಾರಿಯಾಗಿದ್ದ ಮೂವರನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಅನಿಲ್‍ಕುಮಾರ್ ಅಲಿಯಾಸ್ ದೇವು (22), ಸುಬ್ರಹ್ಮಣಿ ಅಲಿಯಾಸ್ ಸುಟ್ಟ (19) ಮತ್ತು ಪವನ್‍ಕುಮಾರ್ (24) ಬಂಧಿತರು. ಆರೋಪಿಗಳಿಂದ 10 ಗ್ರಾಂ ಸರ, ಮಾರುತಿ 800 ಕಾರು ಹಾಗೂ ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ.ಜುಲೈ 8ರಂದು ದೇವನಹಳ್ಳಿ ಬೈಪಾಸ್‍ನಲ್ಲಿರುವ ರಿಗಾನ್ ಹೋಟೆಲ್‍ನಲ್ಲಿ ಪಿರ್ಯಾದುದಾರರು […]

ಗ್ರಾಪಂ ಕಚೇರಿಯ ಬೀಗ ಒಡೆದು ಕಂಪ್ಯೂಟರ್, ದಾಖಲೆಗಳನ್ನು ಕದ್ದ ಕಳ್ಳರು

ಕನಕಪುರ, ಜು.14- ತಾಲ್ಲೂಕಿನ ಅಚ್ಚಲು ಗ್ರಾಮ ಪಂಚಾಯಿತಿ ಕಚೇರಿಯ ಬೀಗ ಒಡೆದು ಕಳ್ಳರು ಕಂಪ್ಯೂಟರ್ ಹಾಗೂ ಕೆಲ ದಾಖಲೆಗಳನ್ನು ಕದ್ದೊಯ್ದಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಇಂದು ಬೆಳಗ್ಗೆ ಗ್ರಾಪಂಗೆ ಬಂದ ಕೆಲ ಅಧಿಕಾರಿಗಳು ಬಾಗಿಲು ತೆರೆದಿರುವುದನ್ನು ನೋಡಿ ಗಾಬರಿಗೊಂಡು ಒಳನೋಡಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಗೊತ್ತಾಗಿದೆ. ಕಂಪ್ಯೂಟರ್‍ಗಳು ಮತ್ತು ಬೀರುವಿನಲ್ಲಿಟ್ಟಿದ್ದ ಕೆಲ ದಾಖಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿರುವ ಸಾತನೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳ ಪ್ರಕಾರ, ಕೆಲವು […]

ಹೊಯ್ಸಳರ ಕಾಲದ ವೀರಗಲ್ಲು ಶಾಸನ ಪತ್ತೆ

ದೇವನಹಳ್ಳಿ, ಜ. 22- ತಾಲ್ಲೂಕಿನ ಕಸಬಾ ಹೋಬಳಿಯ ಜಿ.ಎಸ್.ಜಿ. ರಿಯಾಲಿಟಿ ಲೇಔಟ್ನಲ್ಲಿ ಒಂದು ಅಪ್ರಕಟಿತ ಹೊಯ್ಸಳರ ಕಾಲದ ಶಿಲಾಶಾಸನ ದೊರೆತಿದ್ದು ಇದು ಯಾರಿಂದ ರಚಿತವಾಯಿತು ಇದರ ಸಾರಾಂಶವೇನು ಎಂಬುದನ್ನು ತಿಳಿಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮೈಸೂರಿನ ಶಾಸನ ತಜ್ಞ ಡಾ|| ಎಸ್.ನಾಗರಾಜಪ್ಪನವರಿಗೆ ಶಾಸನದ ಫೋಟೋಗಳನ್ನು ಕಳುಹಿಸಿಕೊಟ್ಟು ಅವರಿಂದ ಶಾಸನದ ಅರ್ಥವನ್ನು ಇಲ್ಲಿ ಪ್ರಕಟಿಸಿದ್ದೇವೆ ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ತಿಳಿಸಿದರು. ಅಪೂರ್ಣ ಶಾಸನ ಕ್ರಿ.ಶ. 1343 ರಲ್ಲಿ ಬಲ್ಲಾಳನು ತಿರುವಣ್ಣಾಮಲೈ ಪಟ್ಟಣದಿಂದ ಆಳುತ್ತಿರುವಾಗ, ಅವನ […]