Sunday, September 15, 2024

ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

cow that gave birth to three calfs

ಕನಕಪುರ, ಸೆ.4– ಸಾಮಾನ್ಯವಾಗಿ ಹಸುಗಳು ಒಂದು ಅಥವಾ ಎರಡು ಕರುಗಳಿಗೆ ಜನನೀಡುವುದನ್ನು ಕಂಡಿದ್ದೇವೆ ಆದರೆ ಹಾರೋಹಳ್ಳಿ ತಾಲೂಕು ಗೊಟ್ಟಿಗೆಹಳ್ಳಿ ಗ್ರಾಮದಲ್ಲಿ ಸೀಮೆ ಹಸುವೊಂದು ಮೂರು ಕರುಗಳಿಗೆ ಜನ ನೀಡಿದ ಅಪರೂಪದ ಘಟನೆ ನಡೆದಿದೆ.

ದ್ಯಾವಸಂದ್ರ ಗ್ರಾಮ ಪಂಚಾಯಿತಿ ಗೊಟ್ಟಿಗೆಹಳ್ಳಿ ಗ್ರಾಮದ ಮಂಜುನಾಥ್‌ ಎಂಬುವವರು ಸಾಕಿರುವ ಸೀಮೆ ಹಸು ಇದುವರೆಗೂ ಒಂದೊಂದು ಕರುವಿಗೆ ಜನ ನೀಡುತಿತ್ತು.ಇದೀಗ ಮೂರು ಕರುಗಳಿಗೆ ಒಮೆಲೆ ಜನನೀಡಿ ಅಚ್ಚರಿ ಮೂಡಿಸಿದೆ.

2 ಗಂಡು ಒಂದು ಹೆಣ್ಣು ಕರುವಿಗೆ ಜನ ನೀಡಿದೆ ಸ್ಥಳಕ್ಕೆ ಮರಳವಾಡಿ ಕಿರಿಯ ಪಶು ವೈದ್ಯಕೀಯ ಪರೀಕ್ಷಕ ಸಂತೋಷ್‌ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಬಳಿಕ ಹಸು ಮತ್ತು ಕರುಗಳು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News