Wednesday, September 11, 2024
Homeಕ್ರೀಡಾ ಸುದ್ದಿ | Sportsಯುಎಸ್‌‍ ಓಪನ್‌ ಮಿಶ್ರ ಡಬಲ್ಸ್ ಸೆಮೀಸ್‌‍ನಲ್ಲಿ ಸೋತ ಬೊಪಣ್ಣ ಜೋಡಿ

ಯುಎಸ್‌‍ ಓಪನ್‌ ಮಿಶ್ರ ಡಬಲ್ಸ್ ಸೆಮೀಸ್‌‍ನಲ್ಲಿ ಸೋತ ಬೊಪಣ್ಣ ಜೋಡಿ

US Open 2024: Rohan Bopanna-Aldila Sutjiadi Lose Mixed Doubles

ನ್ಯೂಯಾರ್ಕ್‌, ಸೆ 4 (ಪಿಟಿಐ) ಇಲ್ಲಿ ನಡೆಯುತ್ತಿರುವ ಯುಎಸ್‌‍ ಓಪನ್‌ನ ಮಿಶ್ರ ಡಬಲ್ಸ್‌‍ ಸೆಮಿಫೈನಲ್‌ನಲ್ಲಿ ಭಾರತದ ಟೆನಿಸ್‌‍ ತಾರೆ ರೋಹನ್‌ ಬೋಪಣ್ಣ ಮತ್ತು ಅವರ ಇಂಡೋನೇಷ್ಯಾದ ಜೊತೆಗಾರ ಅಲ್ದಿಲಾ ಸುಟ್ಜಿಯಾಡಿ ಅವರು ಅಮೆರಿಕದ ಡೊನಾಲ್ಡ್ ಯಂಗ್‌ ಮತ್ತು ಟೇಲರ್‌ ಟೌನ್‌ಸೆಂಡ್‌ ವಿರುದ್ಧ 3-6, 4-6 ಸೆಟ್‌ಗಳಿಂದ ಸೋತಿದ್ದಾರೆ.

ಕ್ವಾರ್ಟರ್‌ ಫೈನಲ್‌ನಲ್ಲಿ, ಬೋಪಣ್ಣ-ಸುಟ್ಜಿಯಾಡಿ ಅವರು ಎಬ್ಡೆನ್‌ ಮತ್ತು ಜೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೋವಾ ವಿರುದ್ಧ ಒಂದು ಗಂಟೆ 30 ನಿಮಿಷಗಳ ಕಾಲ ನಡೆದ ಸ್ಪರ್ಧೆಯಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದರು.

44 ವರ್ಷದ ಬೋಪಣ್ಣ ಅವರು ಮೂರನೇ ಸುತ್ತಿನಲ್ಲಿ ಪುರುಷರ ಡಬಲ್ಸ್ ನಲ್ಲಿ ಸೋತರು, ಅವರು ಮತ್ತು ಅವರ ಆಸ್ಟ್ರೇಲಿಯಾದ ಪಾಲುದಾರ ವ್ಯಾಥ್ಯೂ ಎಬ್ಡೆನ್‌ ಅವರನ್ನು ಅರ್ಜೆಂಟೀನಾದ ಜೋಡಿಯಾದ ವ್ಯಾಕ್ಸಿಮೊ ಗೊನ್ಜಾಲೆಜ್‌ ಮತ್ತು ಆಂಡ್ರೆಸ್‌‍ ಮೊಲ್ಟೆನಿ ಸೋಲಿಸಿದರು.

ಟೂರ್ನಿಯಲ್ಲಿ ಇದಕ್ಕೂ ಮುನ್ನ ಪುರುಷರ ಸಿಂಗಲ್‌್ಸನ ಮೊದಲ ಸುತ್ತಿನಲ್ಲೇ ಸುಮಿತ್‌ ನಗಾಲ್‌ ಪರಾಭವಗೊಂಡಿದ್ದರೆ, ಯೂಕಿ ಭಾಂಬ್ರಿ ಮತ್ತು ಎನ್‌ ಶ್ರೀರಾಮ್‌ ಬಾಲಾಜಿ ಕೂಡ ವಿವಿಧ ಹಂತಗಳಲ್ಲಿ ಸೋಲು ಕಂಡಿದ್ದರು

RELATED ARTICLES

Latest News