Thursday, September 19, 2024
Homeಜಿಲ್ಲಾ ಸುದ್ದಿಗಳು | District Newsಬೆಂಗಳೂರು ಗ್ರಾಮಾಂತರ | Bengaluru Ruralಕ್ಯಾಂಟರ್‌ ರಿಪೇರಿ ವೇಳೆ ಗೇರ್‌ ಬಾಕ್ಸ್ ಬಿದ್ದು ಮೆಕ್ಯಾನಿಕ್‌ ಸಾವು

ಕ್ಯಾಂಟರ್‌ ರಿಪೇರಿ ವೇಳೆ ಗೇರ್‌ ಬಾಕ್ಸ್ ಬಿದ್ದು ಮೆಕ್ಯಾನಿಕ್‌ ಸಾವು

While repairing the canter, the gearbox fell and the mechanic died

ದೊಡ್ಡಬಳ್ಳಾಪುರ, ಆ. 29– ಕ್ಯಾಂಟರ್‌ನ ಗೇರ್‌ ಬಾಕ್ಸ್ ರಿಪೇರಿ ವೇಳೆ ಬೆಡ್ಡಿಂಗ್‌ ತುಂಡಾಗಿ ಗೇರ್‌ ಬಾಕ್ಸ್ ಎದೆ ಮೇಲೆ ಬಿದ್ದ ಪರಿಣಾಮ ಮೆಕ್ಯಾನಿಕ್‌ ಮೃತಪಟ್ಟಿರುವ ಘಟನೆ ಪಟ್ಟಣದ ಗ್ಯಾರೇಜೊಂದರಲ್ಲಿ ಸಂಭವಿಸಿದೆ.

ಪಾಲನಜೋಗಹಳ್ಳಿ ನಿವಾಸಿ ಮನ್ಸೂರ್‌ ಷಾ (51) ಮೃತಪಟ್ಟ ಮೆಕ್ಯಾನಿಕ್‌. ಕ್ಯಾಂಟರ್‌ ಇಂಜಿನ್‌ ಅನ್ನು ಜಾಕ್‌ ಬಳಸಿ ಮೇಲಕ್ಕೆ ಎತ್ತಿ ಗೇರ್‌ಬಾಕ್ಸ್‌‍ ರಿಪೇರಿ ಮಾಡುವಾಗ ಆಕಸಿಕವಾಗಿ ಗೇರ್‌ ಬಾಕ್ಸಿನ ಬೆಡ್ಡಿಂಗ್‌ ತುಂಡಾಗಿ ಮೆಕ್ಯಾನಿಕ್‌ ಮೇಲೆ ಬಿದ್ದಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News