ಕೊಯಮತ್ತೂರು, ನ.5- ತನ್ನ ಯಶಸ್ಸಿಗೆ ಕಾರಣರಾದ ಕಾರ್ಮಿಕರಿಗೆ ದೀಪಾವಳಿ ಹಬ್ಬದ ಬೋನಸ್ ರೂಪದಲ್ಲಿ ದುಬಾರಿ ಬೆಲೆಯ ಬೈಕ್ಗಳು ಹಾಗೂ ಎಲೆಕ್ಟ್ರಿಕ್ ಉಪಕರಣಗಳನ್ನು ಮಾಲೀಕರೊಬ್ಬರು ಉಡುಗೊರೆ ನೀಡಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ತ್ರಿಪುರದ ವಂಜಿಪಾಳ್ಯಮ್ ನ ಪಿ. ಶಿವಕುಮಾರ್ ಅವರೇ ತಮ್ಮ ನೌಕರರಿಗೆ ದುಬಾರಿ ಮೌಲ್ಯದ ಉಡುಗೊರೆ ನೀಡಿರುವ ಮಾಲೀಕ ರಾಗಿದ್ದಾರೆ.
ಶಿವಕುಮಾರ್ (42) ಅವರು ನೀಲಗಿರಿಸ್ನಲ್ಲಿ 190 ಎಕರೆ ಟೀ ಎಸ್ಟೇಟ್, ಹಾಗೂ ಕೊಟಾಗಿರಿ ಬಳಿ 315 ಎಕರೆ ಜಮೀನಿನಲ್ಲಿ ಹೂವು, ತರಾಕಾರಿ ಹಾಗೂ ಇನ್ನಿತರ ಕೃಷಿ ಸಂಬಂತ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರ ಬಳಿ 2 ದಶಕಕ್ಕೂ ಹೆಚ್ಚು ಕಾಲದಿಂದ 627 ಕಾರ್ಮಿಕರು ಕೆಲಸ ಮಾಡುತ್ತಿ ದ್ದಾರೆ.
1 ಶತಕೋಟಿ ಡಾಲರ್‌ಗಿಂತ ಹೆಚ್ಚು ಆದಾಯ ಕಳೆದುಕೊಂಡ ಅಫ್ಘಾನಿಸ್ತಾನ
ಶಿವಕುಮಾರ್ ಅವರಿಗೆ ತಂದೆಯ ಮೂಲದಿಂದ ಬಂದ ಗಾರ್ಮೆಂಟ್ಸ್ ಅನ್ನು ನಡೆಸುತ್ತಿದ್ದಾರೆ. ಆರಂಭದಲ್ಲಿ ಶಿವಕುಮಾರ್ ಅವರ ಬಳಿ ಕೇವಲ 60 ಎಕರೆ ಭೂಮಿ ಇತ್ತು. ಆದರೆ ನೌಕರರು ಹಾಗೂ ಕಾರ್ಮಿಕರ ಶ್ರಮದ ಫಲದಿಂದ ತಾನು ಸಾಕಷ್ಟು ಭೂಮಿ ಹಾಗೂ ಹಣವನ್ನು ಗಳಿಸಿದ್ದರು. ತನ್ನ ಏಳಿಗೆಗೆ ಕಾರಣರಾದ ನೌಕರರನ್ನು ಪ್ರೋತ್ಸಾಹಿಸುವ ಸಲುವಾಗಿ ಶಿವಕುಮಾರ್ ಅವರು ನೌಕರರು ಹಾಗೂ ಕಾರ್ಮಿಕರಿಗೆ ಬೋನಸ್ ನೀಡುವುದರ ಜೊತೆಗೆ ಮನೆಗೆ ಬೇಕಾಗುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೂಡ ಉಡುಗೊರೆ ರೂಪದಲ್ಲಿ ನೀಡುತ್ತಿದ್ದರು.
ನೌಕರರಿಗೆ ದುಬಾರಿ ಬೈಕ್ ನೀಡಿದ ಮಾಲೀಕ:
ಶಿವಕುಮಾರ್ ಅವರು ನೌಕರರನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಈ ವರ್ಷದ ದೀಪಾವಳಿ ಹಬ್ಬದ ಉಡುಗೊರೆ ರೂಪದಲ್ಲಿ ಮ್ಯಾನೇಜರ್, ಸೂಪರ್ವೈಸರ್, ಸ್ಟೋರ್ ಕೀಪರ್, ಕ್ಯಾಷಿಯರ್, ಚಾಲಕರು ಸೇರಿದಂತೆ 15 ಜನರಿಗೆ 2 ಲಕ್ಷ ಮೌಲ್ಯದ ದುಬಾರಿ ಬೈಕ್ಗಳು ಹಾಗೂ ಉಳಿದ ನೌಕರರು ಹಾಗೂ ಕಾರ್ಮಿಕರಿಗೆ ಎಲ್ಇಡಿ ಟಿವಿಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
`ನನ್ನ ಬೆಳವಣಿಗೆಗೆ ನೌಕರರು ಸಾಕಷ್ಟು ಶ್ರಮ ವಹಿಸಿದ್ದಾರೆ ಆದ್ದರಿಂ ದಲೇ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಅವರಿಗೆ ಪ್ರತಿ ವರ್ಷ ಬೋನಸ್ ಜೊತೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುತ್ತಿದ್ದೇನೆ. ಈ ಬಾರಿ 15 ನೌಕರರಿಗೆ 2 ಲಕ್ಷ ಮೌಲ್ಯದ ಬೈಕ್ಗಳು ಹಾಗೂ ಉಳಿದ ನೌಕರರಿಗೆ ಎಲ್ಸಿಟಿ ಟಿವಿಗಳು ಹಾಗೂ ಹಲವು ದುಬಾರಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಜೊತೆಗೆ ಶೇ. 18ರಷ್ಟು ಬೋನಸ್ ಕೊಟ್ಟಿದ್ದೇನೆ’ ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಕ್ಕಳಿಗೆ ಉಚಿತ ಶಿಕ್ಷಣ:
ತನ್ನಲ್ಲಿ ಕೆಲಸ ಮಾಡುವ ನೌಕರರ ಮಕ್ಕಳಿಗೆ ಇಂಗ್ಲೀಷ್ ಶಾಲೆಯ ಸೌಲಭ್ಯ ಸಿಗಲಿ ಎಂಬ ಉದ್ದೇಶದಿಂದ ಕಳೆದ 3 ವರ್ಷಗಳಿಂದ ನಲಗೊಂಡ ಪಂಚಾಯಿತಿ ಪ್ರಾಥಮಿಕ ಶಾಲೆಯ ಪಕ್ಕ ಶಾಲೆಯೊಂದನ್ನು ತೆರೆದಿದ್ದಾರೆ. ಈ ಶಾಲೆಯಲ್ಲಿ 320 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಎಸ್ಟೇಟ್ನಲ್ಲಿ ಕೆಲಸ ಮಾಡುವ ನೌಕರರ 80 ಮಕ್ಕಳು ಕೂಡ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಶಿಕ್ಷಣದ ವೆಚ್ಚವನ್ನು ತಾವೇ ಬರಿಸುತ್ತಿದ್ದಾರೆ. ಅಲ್ಲದೆ ತನ್ನಲ್ಲಿ ಕೆಲಸ ಮಾಡುವವರ ನೌಕರರು ಹಾಗೂ ಕಾರ್ಮಿಕರ ಆರೋಗ್ಯದ ದುಬಾರಿ ವೆಚ್ಚವನ್ನು ಕೂಡ ಶಿವಕುಮಾರ್ ಭರಿಸುತ್ತಿದ್ದಾರೆ.