Thursday, December 7, 2023
Homeರಾಜ್ಯದತ್ತಪೀಠವನ್ನು ಹಿಂದೂ ಪೂಜಾ ಕೇಂದ್ರವಾಗಿ ಉಳಿಸಲು ಸಿಎಂ ಮಧ್ಯಸ್ಥಿಕೆಗೆ ಮುತಾಲಿಕ್ ಆಗ್ರಹ

ದತ್ತಪೀಠವನ್ನು ಹಿಂದೂ ಪೂಜಾ ಕೇಂದ್ರವಾಗಿ ಉಳಿಸಲು ಸಿಎಂ ಮಧ್ಯಸ್ಥಿಕೆಗೆ ಮುತಾಲಿಕ್ ಆಗ್ರಹ

ಚಿಕ್ಕಮಗಳೂರು,ನ.5-  ತಾಲೂಕಿನ ದತ್ತಪೀಠ ಹಿಂದೂಗಳ ಪೂಜಾ ಕೇಂದ್ರವಾಗಿ ಉಳಿಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಬೇಕೆಂದು ರಾಷ್ಟ್ರೀಯ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದರು.20ನೇ ವರ್ಷದ ದತ್ತಮಾಲಾ ಅಭಿಯಾನದ ಅಂಗವಾಗಿ ನಗರದ ಶಂಕರ ಮಠದ ಮುಂಭಾಗ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು,  ಎಲ್ಲಾ ದಾಖಲೆಗಳು ಹಾಗೂ  ಸರ್ಕಾರಿ ದಾಖಲೆಗಳ ಪ್ರಕಾರ ದತ್ತಪೀಠ ಹಿಂದೂಗಳಿಗೆ ಸೇರಿದ್ದಾಗಿದೆ. ಈಗಾಗಲೇ ಇಬ್ಬರೂ ಹಿಂದು ಅರ್ಚಕರ ನೇಮಕಗೊಂಡು ತ್ರಿಕಾಲ ಪೂಜೆ ನಡೆಯುತ್ತಿದೆ ಎಂದರು.

ಮುಸ್ಲಿಮರ ಪವಿತ್ರ ಗ್ರಂಥ ಖುರಾನ್ ನ ಪ್ರಕಾರ ವಿವಾದವಿರುವ ಸ್ಥಳದಲ್ಲಿ ದರ್ಗಾ ಪ್ರಾರ್ಥನೆ ಸಲ್ಲಿಸುವಂತಿಲ್ಲ ಹಾಗಾಗಿ   ದತ್ತ ಪೀಠದಿಂದ ಸ್ವಲ್ಪವೇ ದೂರದಲ್ಲಿರುವ  ನಾಗೇನಹಳ್ಳಿ ಯಲ್ಲಿ ದರ್ಗಾ ಇದ್ದು ಅಲ್ಲಿ ಉರುಸ್ ಮಾಡಿಕೊಳ್ಳಲು ನಮ್ಮ ಯಾವುದೇ ಅಭ್ಯಂತರ ಇಲ್ಲ  ದತ್ತ ಪೀಠದ ಆವರಣದಲ್ಲಿರುವ ಗೋರಿಗಳನ್ನ ಸ್ಥಳಾಂತರಿಸಿ ಸಂಪೂರ್ಣ ಹಿಂದೂ ಭಕ್ತರ ಶ್ರದ್ಧಾ ಕೇಂದ್ರವಾಗಿ ಪರಿವರ್ತಿಸಲು ಹಿಂದೂ ಮುಸ್ಲಿಂ ಮುಖಂಡರನ್ನು ಚಿಕ್ಕಮಗಳೂರಿನಲ್ಲಿ ಸಭೆ ಸೇರಿಸಿ ಸೌಹಾರ್ದವಾಗಿ   ಬಗೆಹರಿಸಲು  ಮುಖ್ಯಮಂತ್ರಿಗಳು   ಮಧ್ಯಸ್ಥಿಕೆ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು  ಒತ್ತಾಯಿಸಿದರು.

 ಬಿಗಿ ಪೊಲೀಸ್ ಸರ್ಪಗಾವಲಿನಲ್ಲಿ  ಶೋಭ ಯಾತ್ರೆ

 ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದು ಬಸ್ತ್‍ನೊಂದಿಗೆ ಶೋಭ ಯಾತ್ರೆ ಹಾಗೂ ದತ್ತಪೀಠದಲ್ಲಿ ದತ್ತಮಾಲಾ ವಿಸರ್ಜನೆ ನಡೆಯಿತು.  ದತ್ತ ಮಾಲೆ ಧರಿಸಿದ ನೂರಾರು ಕಾರ್ಯಕರ್ತರು ಹಾಗೂ ದತ್ತ ಭಕ್ತರು ಶೋಭಾ   ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ರಾಜ್ಯದ ಹುಬ್ಬಳ್ಳಿ, ಬೆಳಗಾಂ, ಬಾಗಲಕೋಟೆ, ಕೋಲಾರ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಸೇರಿದಂತೆ ವಿವಿಧ   ಜಿಲ್ಲೆಗಳಿಂದ ಹಾಗೂ ಜಿಲ್ಲೆಯ  ತಾಲೂಕುಗಳಿಂದ ದತ್ತ ಮಾಲೆ ಧರಿಸಿ  ದತ್ತಮಾಲಾಧಾರಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದರು.

ನಗರದ ಶಂಕರ ಮಠದಿಂದ ಹೊರಟ ಶೋಭಾ ಯಾತ್ರೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ  ಗಂಗಾಧರ ಕುಲಕರ್ಣಿ, ಚಿಕ್ಕಮಗಳೂರು ವಿಭಾಗದ ಅಧ್ಯಕ್ಷ ರಂಜಿತ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ನವೀನಾ  ರಂಜಿತ್, ಜೇವರ್ಗಿ ಮಠದ ಸಿದ್ದಲಿಂಗ ಸ್ವಾಮೀಜಿ, ಅಲ್ಲಂ ಪುರದ ರಾಜೇಂದ್ರ ಸೇರಿದಂತೆ ಪಾಲ್ಗೊಂಡಿದ್ದರು.

ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಡಿಕೆಶಿ

 ಶಂಕರ್ ಮಠದಿಂದ ಹೊರಟ ಮೆರವಣಿಗೆ ಬಸವನಹಳ್ಳಿ ಮುಖ್ಯ  ರಸ್ತೆಯ ಮೂಲಕ ಆಜಾದ್ ಪಾರ್ಕ್ ತಲುಪಿತು. ಬೆಳಿಗ್ಗೆನಿಂದ ಸಂಜೆವರೆಗೂ ಬಸವನಹಳ್ಳಿ ಮುಖ್ಯರಸ್ತೆ ಹಾಗೂ ಎಂಜಿ ರಸ್ತೆಯಲ್ಲಿ ವಾಹನಗಳ ನಿಲುಗಡೆ ಹಾಗೂ ಸಂಚಾರ ನಿಷೇಸಲಾಗಿತ್ತು .ಎರಡು ರಸ್ತೆಗಳ ಅಡ್ಡ ರಸ್ತೆಗಳಿಗೆ ಬ್ಯಾರಿಕೆಡ್ ಹಾಕಲಾಗಿತ್ತು. ಶೋಭ ಯಾತ್ರೆ ಯುದ್ಧಕ್ಕೂ ದತ್ತ ಭಕ್ತರು ಭಜನೆ ಹಾಗೂ ಜಯ ಘೋಷಗಳನ್ನು ಕೂಗಿದರು. ಮೆರವಣಿಗೆಯಲ್ಲಿ ಶ್ರೀರಾಮನ ಸ್ತಬ್ಧಚಿತ್ರ ಗಮನ ಸೆಳೆಯಿತು.

 ಆಜಾದ್ ಪಾರ್ಕಿನಿಂದ ವಿವಿಧ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದ ದತ್ತ ಭಕ್ತರು ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಬ್ಯಾರಿಕ್ಯಾಡ್‍ನಲ್ಲಿ ಸಾಲಿನಲ್ಲಿ ನಿಂತು ದತ್ತ ಗುಹೆ ಪ್ರವೇಶಿಸಿ ದತ್ತಪಾದಿಕೆಗಳ ದರ್ಶನ ಪಡೆದರು.

ದತ್ತಪೀಠ ಮುಳ್ಳಯ್ಯನಗಿರಿ ಸೀತಾಳಯನ್ ಗಿರಿ, ಹೊನ್ನಮ್ಮನ ಹಳ್ಳ, ಗಾಳಿಕೆರೆ ಹಾಗೂ ಮಾಣಿಕ್ಯದಾರ ವಿವಿಧ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಸಲಾಗಿತ್ತು. ಅತ್ತಿ ಗುಂಡಿ ಮಾಣಿಕ್ಯದಾರ ಹಾಗೂ ನಗರದಲ್ಲಿ ಮೆರವಣಿಗೆ ಹೋಗುವ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮೆರಾ ಕಾರ್ಯಾಚರಣೆ ಮಾಡಲಾಗಿತ್ತು.

RELATED ARTICLES

Latest News