ಬೆಂಗಳೂರು, ಫೆ.13- ಯಲಂಹಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾಗೆ ಇಂದಿನಿಂದ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ಸಿಕ್ಕದ್ದು ಲೋಹದಕ್ಕಿಗಳ ಆರ್ಭಟಕ್ಕೆ ಮಾರುಹೋಗಿದ್ದಾರೆ.
ಬಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಸಾವಿರಾರು ಜನರು ವಾಯು ನೆಲೆ ಸುತ್ತಲು ಆವರಿಸಿದ್ದಾರೆ. ಮೊದಲ ಮೂರು ದಿನ ಕೇವಲ ಆಹ್ವಾನಿತರಿದೆ ಅವಕಾಶವಿತ್ತು ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದ್ದು ಏರೋ ಇಂಡಿಯಾದ ಸಂಪೂರ್ಣ ಆನಂದ ಪಡೆಯಬಹುದಾಗಿದೆ.
ಎರಡೂವರೆ ಸಾವಿರಕ್ಕೆ ಟಿಕೆಟ್ ಪಡೆದವರು ಸಂಪೂರ್ಣ ಏರೋ ಇಂಡಿಯಾ ವೀಕ್ಷಣೆಗೆ ಅವಕಾಶ ಇರಲಿದೆ. ಇಂದು ಕೂಡ ಬೆಳಗ್ಗೆ 9:30 ರಿಂದ 12 ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆ ವರೆಗೆ ಏರ್ ಶೋನಲ್ಲಿ ಸೂರ್ಯಕಿರಣ, ಆಮೆರಿಕದ ಎಫ್ -35, ರಷ್ಯಾದ ಎಸ್‌ಯು 57, ತೇಜಸ್, ಹಗರ ಯುದ್ದ ಹೆಲಿಕಾಪ್ಟರ್ ಪ್ರದರ್ಶನ ಕಣ್ಮನ ಸೆಳೆದಿದೆ.
ಎರಡೂವರೆ ಸಾವಿರ, 5 ಸಾವಿರ ಟಿಕೆಟ್ ಪಡೆದವರಿಗೆ ಒಳಬಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.1 ಸಾವಿರ ರೂ. ಟಿಕೆಟ್ ಪಡೆದವರಿಗೆ ಜಕ್ಕೂರು, ಜಿಕೆವಿಕೆಯಲ್ಲಿ ಪಾರ್ಕಿಂಗ್ ವವಸ್ಥೆ ಇರಲಿದೆ. ಅಲ್ಲಿಂದ ಏರೋ ಶೂ ಜಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಲ್ಲದೆ ವಾಯು ನೆಲೆ ಸುತ್ತಲಿನ ಬಡಾವಣೆಗಳ ಬಳಿಯೂ ಭಾರಿ ಜನರು ಜಮಾಹಿಸಿದ್ದಾರೆ. ಬೆಳಿಗ್ಗೆಯಿಂದಲೆ ಜನರ ದಂಡು ದಾವಿಸಿದೆ ವಿಶೇಷವಾಗಿ ಮಕ್ಕಳು ಸಂಭ್ರಮಿಸಿದ್ದಾರೆ.