ನವದೆಹಲಿ, ನ.6 (ಪಿಟಿಐ)- ಮುಂದಿನ ಐದು ವರ್ಷಗಳವರೆಗೆ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಣೆ ಮಾಡಿರುವ ಮೋದಿ ಸರ್ಕಾರದ ಕ್ರಮಕ್ಕೆ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಲೇವಡಿ ಮಾಡಿದ್ದಾರೆ. ಮೋದಿ ಅವರ ಸರ್ಕಾರವು ಐದು ವರ್ಷಗಳವರೆಗೆ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುತ್ತಿರುವುದನ್ನು ನೋಡಿದರೆ 10 ವರ್ಷಗಳ ಅಚ್ಛೇ ದಿನ್ ನಂತರವೂ ಇದರ ಅಗತ್ಯವಿದೆ ಎಂದು ಅವರು ಎಕ್ಸ್ ಮಾಡಿದ್ದಾರೆ.
ಗ್ಲೋಬಲ್ ಹಂಗರ್ ಇಂಡೆಕ್ಸ್ ನಲ್ಲಿ ಭಾರತವು 125 ದೇಶಗಳಲ್ಲಿ (ಅಕ್ಟೋಬರ್ 13, 2023) 111 ನೇ ಸ್ಥಾನದಲ್ಲಿದೆ. ಭಾರತವು ಶ್ರೇಯಾಂಕವನ್ನು ತಿರಸ್ಕರಿಸಿದೆ. ಈಗ ಉಚಿತ ಪಡಿತರ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸುತ್ತಿರುವುದರ ಆರ್ಥ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ನೇಪಾಳ ಭೂಕಂಪ : ನೆಲೆ ಕಳೆದುಕೊಂಡು ನರಳುತ್ತಿರುವ ಜನ, ನೆರವಿಗೆ ಅಧಿಕಾರಿಗಳ ಹರಸಾಹಸ
ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ, ಕಳೆದ ವರ್ಷ ಮೇನಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಉದ್ದೇಶದಿಂದ ಅವರು ಚುನಾವಣೋತರ ವೇದಿಕೆ ಇನ್ಸಾಫ್ ಸಂಘಟನೆ ರಚಿಸಿಕೊಂಡಿದ್ದಾರೆ.
ಛತ್ತೀಸ್ಗಢದಲ್ಲಿ ಶನಿವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಸರ್ಕಾರವು 80 ಕೋಟಿ ಬಡವರಿಗೆ ಉಚಿತ ಪಡಿತರ ಯೋಜನೆಯಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲಿದೆ ಎಂದು ಹೇಳಿದ್ದರು.