Thursday, December 7, 2023
Homeಅಂತಾರಾಷ್ಟ್ರೀಯಹೋಟೆಲ್​ಗೆ ಕಾರು ಅಪ್ಪಳಿಸಿ ಐವರ ಸಾವು

ಹೋಟೆಲ್​ಗೆ ಕಾರು ಅಪ್ಪಳಿಸಿ ಐವರ ಸಾವು

ಮೆಲ್ಬೋರ್ನ್, ನ.6 ಆಸ್ಟ್ರೇಲಿಯಾದ ಪಬ್‍ನ ಹೊರಾಂಗಣ ಊಟದ ಪ್ರದೇಶಕ್ಕೆ ಕಾರೊಂದು ಡಿಕ್ಕಿ ಹೊಡೆದು ಐವರು ಸಾವನ್ನಪ್ಪಿದ್ದು, ಚಾಲಕ ಸೇರಿದಂತೆ ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೆಲ್ಬೋರ್ನ್ ವಾಯುವ್ಯ ಪ್ರದೇಶದಲ್ಲಿರುವ ಡೇಲ್ಸ್‍ಫೋರ್ಡ್ ನಗರದ ಜನನಿಬಿಡ ರಾಯಲ್ ಡೇಲ್ಸ್‍ಫೋರ್ಡ್ ಹೋಟೆಲ್‍ನ ಬಿಯರ್ ಗಾರ್ಡನ್‍ಗೆ 66 ವರ್ಷದ ವ್ಯಕ್ತಿ ಚಾಲನೆ ಮಾಡುತ್ತಿದ್ದ ಕಾರು ಅಪ್ಪಳಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಓರ್ವ ಬಾಲಕ, 30ರ ಹರೆಯದ ಇಬ್ಬರು ಪುರುಷರು ಹಾಗೂ 40ರ ಹರೆಯದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹದಿಹರೆಯದ ಹುಡುಗಿಯನ್ನು ಮೆಲ್ಬೋರ್ನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ.

ನೇಪಾಳ ಭೂಕಂಪ : ನೆಲೆ ಕಳೆದುಕೊಂಡು ನರಳುತ್ತಿರುವ ಜನ, ನೆರವಿಗೆ ಅಧಿಕಾರಿಗಳ ಹರಸಾಹಸ

11 ತಿಂಗಳ ಮತ್ತು ಸುಮಾರು 6 ವರ್ಷ ವಯಸ್ಸಿನ ಇಬ್ಬರು ಹುಡುಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.ತೀವ್ರ ನಿಗಾದಲ್ಲಿದ್ದ 35 ವರ್ಷದ ಮಹಿಳೆ ಸೇರಿದಂತೆ ಮೂವರು ವಯಸ್ಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕ ಕುಡಿದು ಅತಿವೇಗವಾಗಿ ಕಾರು ಚಾಲನೆ ಮಾಡಿದ್ದೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

RELATED ARTICLES

Latest News