ಬೆಳಗಾವಿ:ಗೋವಾದ ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಂಡಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಲಾವೊ ಮಾಮಲೆದಾರ(69)ಹಾಡಾಹಗಲೇ ನಗರದ ಮುಖ್ಯ ಮಾರುಕಟ್ಟೆಯಲ್ಲಿ ಹತ್ಯೆಗೀಡಾಗಿದ್ದಾರೆ. ಬೆಳಗಾವಿ ನಗರಕ್ಕೆ ಕೆಲಸದ ನಿಮಿತ್ತ ಆಗಮಿಸಿ ಇಲ್ಲಿನ ಖಡೇಬಜಾರದಲ್ಲಿ ಹೊಟೇಲನಲ್ಲಿ ಅವರು ತಂಗಿದ್ದರು.
ಮಾಜಿ ಶಾಸಕರ ಕಾರು ತನ್ನ ಆಟೊಗೆ ತಗುಲಿದೆ ಎಂದು ನೆಪ ಮಾಡಿ ಜಗಳ ತೆಗೆದ ಆಟೊ ಡ್ರೈವರ್ ಏಕಾಏಕಿ ಮಾಜಿ ಶಾಸಕ ಲಾವೊ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದ ಹಿರಿಯರಾದ ಲಾವೋ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು. ಹತ್ಯೆಗೈದ ನಗರದ ಸುಭಾಷ ನಗರದ ಆರೋಪಿ, ಪುಂಡ ಆಟೊ ಚಾಲಕ ಮುಜಾಹಿದಿಲ್ ಶಕೀಲ್ ಜಮಾದಾರ(28)ನನ್ನು ಮಾರ್ಕೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.