Wednesday, March 26, 2025
Homeರಾಷ್ಟ್ರೀಯ | Nationalಮಹಾಕುಂಭದಲ್ಲಿ 50 ಕೋಟಿಗೂ ಹೆಚ್ಚು ಭಕ್ತರಿಂದ ಪುಣ್ಯಸ್ನಾನ, ಯೋಗಿ ವ್ಯವಸ್ಥೆಗೆ ಶ್ಲಾಘನೆ

ಮಹಾಕುಂಭದಲ್ಲಿ 50 ಕೋಟಿಗೂ ಹೆಚ್ಚು ಭಕ್ತರಿಂದ ಪುಣ್ಯಸ್ನಾನ, ಯೋಗಿ ವ್ಯವಸ್ಥೆಗೆ ಶ್ಲಾಘನೆ

Maha Kumbh 2025: More than 500 mn people take holy dip, says UP govt

ಪ್ರಯಾಗರಾಜ್, ಫೆ.15- ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಂದರ್ಭದಲ್ಲಿ ಈ ವರೆಗೂ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.144 ವರ್ಷಗಳ ನಂತರ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತದೆ.

ಜನವರಿ 13ರಿಂದ ಫೆಬ್ರವರಿ 14ರವರೆಗೂ ಮಹಾಕುಂಭದಲ್ಲಿ ಸ್ನಾನ ಮಾಡುವವರ ಸಂಖ್ಯೆ 50 ಕೋಟಿ ದಾಟಿದೆ. ಪವಿತ್ರ ಪ್ರಯಾಗ್‌ರಾಜ್‌ನಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಉತ್ತರಪ್ರದೇಶ ಸರ್ಕಾರ ಉತ್ತಮ ವ್ಯವಸ್ಥೆ ಮಾಡಿದೆ. ಹೀಗಾಗಿ ಎಲ್ಲರೂ ಸುರಕ್ಷಿತವಾಗಿ ಸ್ನಾನ ಮಾಡಲು ಸಾಧ್ಯವಾಗುತ್ತಿದೆ. ಫೆ.14ರಂದು ಒಂದೇ ದಿನ ಮಧ್ಯಾಹ್ನ 1 ಗಂಟೆವರೆಗೆ ಸುಮಾರು 55 ಲಕ್ಷ ಜನರು ಮಹಾಕುಂಭದಲ್ಲಿ ಸ್ನಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಮಾನವನ ಇತಿಹಾಸದಲ್ಲಿಯೇ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿ ದೊಡ್ಡ ಸಭೆ ಇದಾಗಿದೆ. ಭಾರತದಲ್ಲಿ ಆಳವಾಗಿ ಬೇರೂರಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನೀತಿಯನ್ನು ಒತ್ತಿ ಹೇಳಿದ ಸಿಎಂ ಯೋಗಿ, ದೇಶದಲ್ಲಿ 110 ಕೋಟಿ ಸನಾತನ ಧರ್ಮದ ಅನುಯಾಯಿಗಳಿದ್ದು, ಇಂತಹ ಬೃಹತ್ ಭಾಗವಹಿಸುವಿಕೆಯು ಸನಾತನ ಧರ್ಮದ ಶಾಶ್ವತ ಮೌಲ್ಯಗಳಲ್ಲಿನ ಅಚಲ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಮಹಾಕುಂಭಮೇಳ ಭಾರತದ ಸಾಮೂಹಿಕ ನಂಬಿಕೆಯ ಅಮೃತ ಕಾಲ. ಈ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂತರು, ಋಷಿಗಳು, ಕಲ್ಪವಾಸಿಗಳು ಮತ್ತು ಭಕ್ತರಿಗೆ ಮುಖ್ಯಮಂತ್ರಿ ಯೋಗಿ ತಮ್ಮ ಕೃತಜ್ಞತೆ ಸಲ್ಲಿಸಿದರು. ಈ ಬೃಹತ್ ಆಧ್ಯಾತ್ಮಿಕ ಸಭೆಯ ಸುಗಮ ಅನುಷ್ಠಾನಕ್ಕೆ ಮಹಾಕುಂಭಮೇಳದ ಆಡಳಿತ, ಸ್ಥಳೀಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು, ಸ್ವಯಂಸೇವಕರು ಮತ್ತು ಧಾರ್ಮಿಕ ಸಂಸ್ಥೆಗಳ ಪ್ರಯತ್ನಗಳನ್ನು ಶ್ಲಾಘಿಸಿದರು.

ನಿತ್ಯ ತ್ರಿವೇಣಿ ಸಂಗಮರ ಜನಸಂದಣೆಯಿಂದ ತುಂಬಿರುತ್ತದೆ. ಆದರೂ ಕೂಡ ಕುಂಭಮಣ ಪ್ರದೇಶದಲ್ಲಿ ಇನ್ನೂ ಸಂಚಾರಿ ಪಟ್ಟಣೆಯ ಬಗ್ಗೆ ಯಾವುದೇ ದೂರು ಬಂದಿಲ್ಲ. ಶನಿವಾರ ಮತ್ತು ಭಾನುವಾರ ಪ್ರಯಾಗ್ರಾಜ್ಞಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ದಿನಗಳಲ್ಲಿ ವಿಶೇಷ ನಿಯೋಜನೆ ಮಾಡಲಾಗಿರುತ್ತದೆ. ಶನಿವಾರ ಮತ್ತು ಭಾನುವಾರಗಳಂದು ಬೆಳಿಗ್ಗೆಯಿಂದ ನಂಜೆಯವರೆಗೆ ವಾಹನ ನಿಷೇಧಿತ ವಲಯಗಳನ್ನು ಗುರುತಿಸಲಾಗುತ್ತದೆ.

ಈ ಪ್ರದೇಶಗಳಲ್ಲಿ ವಾಹನ ನಿರ್ಬಂಧ ಹೇರಲಾಗುತ್ತದೆ. ತುರ್ತು ಸೇವಾ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ಭಕ್ತರಿಗೆ ಪ್ರತೂರ್ವಕ ಅಭಿನಂದನೆಗಳು ತಿಳಿಸಿದ ಸಿಎಂ 2025ರ ಮಹಾ ಕುಂಭಮೇಳದಲ್ಲಿ ಭಾರತದ ಆಧ್ಯಾತ್ಮಿಕತೆ, ಏಕತೆ, ಸಮಾನತೆ ಮತ್ತು ಸಾಮರಸ್ಯದ ಜೀವಂತ ಸಂಕೇತವಾದ ಪ್ರಯಾಗರಾಜ್ಯಲ್ಲಿ ಇಲ್ಲಿಯವರೆಗೆ 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ತ್ರಿವೇಣಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ಒಟ್ಟು ಜನಸಂಖ್ಯೆಯಲ್ಲಿ 110 ಕೋಟಿ ನಾಗರಿಕರು ಸನಾತನ ಧರ್ಮದ ಅನುಯಾಯಿಗಳಾಗಿದ್ದು, ಅವರಲ್ಲಿ 50 ಕೋಟಿಗೂ ಹೆಚ್ಚು ನಾಗರಿಕರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಅತ್ಯುತ್ತಮ ಮಾನವೀಯ ಮೌಲ್ಯಗಳ ಮತ್ತು ಮಹಾನ್ ಸನಾತನದಲ್ಲಿ ಬೆಳೆಯುತ್ತಿರುವ ನಂಬಿಕೆಯ ಸಂಕೇತವಾಗಿದೆ.

ಏಕತೆ ಮತ್ತು ನಂಬಿಕೆಯ ಈ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡುವ ಪವಿತ್ರ ಪ್ರಯೋಜನವನ್ನು ಪಡೆದ ಎಲ್ಲಾ ಭಕ್ತರಿಗೆ ಹತ್ತೂರ್ವಕ ಅಭಿನಂದನೆಗಳು ಎಂದು ಸಿಎಂ ತಿಳಿಸಿದ್ದಾರೆ. 2025ರ ಮಹಾ ಕುಂಭ ಮೇಳಕ್ಕೆ ವಿದೇಶದಿಂದ ಎಷ್ಟು ಭಕ್ತರು ಬಂದರು? 2025ರ ಮಹಾ ಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಭಕ್ತರ ಸಂಖ್ಯೆಯ ಡೇಟಾವನ್ನು ಯುಎಸ್ ಜನಗಣತಿ ಬ್ಯೂರೋ ಬಿಡುಗಡೆ ಮಾಡಿದೆ. ಯುಎಸ್ ಸೆನ್ಸಸ್ ಬ್ಯೂರೋ ವರದಿಯ ಪ್ರಕಾರ, ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಭಕ್ತರು ಪ್ರಯಾಗರಾಜ್ ಮಹಾಕುಂಭಮೇಳ 2025ಕ್ಕೆ ಬಂದಿದ್ದಾರೆ.

ಭಾರತದಿಂದ ಮಹಾಕುಂಭಮೇಳಕ್ಕೆ ಬರುವ ಭಕ್ತರ ಸಂಖ್ಯೆ ಇಲ್ಲಿಯವರೆಗೆ 50 ಕೋಟಿ ದಾಟಿದೆ. ಭಾರತದ ನಂತರ ಅತಿ ಹೆಚ್ಚು ಭಕ್ತರು ಚೀನಾದಿಂದ ಬಂದಿದ್ದಾರೆ. ಇದು ಮಹಾ ಕುಂಭ ಮೇಳದ ಕೇವಲ ಒಂದು ಹಬ್ಬವಲ್ಲ, ಬದಲಾಗಿ ಇದು ಸನಾತನ ಧರ್ಮದ ವಿಶಾಲ ರೂಪದ ಸಂಕೇತವಾಗಿದೆ.

ಹಿಂದೂಗಳ ಪವಿತ್ರ ಆಚರಣೆಯೆಂದು ಪರಿಗಣಿಸಲ್ಪಡುವ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭವು ಜನವರಿ 13ರಂದು ಪ್ರಾರಂಭವಾಯಿತು. ಫೆಬ್ರವರಿ 26ರವರೆಗೆ ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದ ದಡದಲ್ಲಿ ಮಹಾಕುಂಭ ನಡೆಯುತ್ತಿದೆ.

ವಿವಿಧ ದೇಶಗಳ ಭಕ್ತರಿಂದ ಪುಣ್ಯಸ್ನಾನ
ಭಾರತ- 1,41,93,16,933
ಚೀನಾ 1,40,71,81,209
ಅಮೆರಿಕ- 34,20,34,432
ಇಂಡೋನೇಷ್ಯಾ- 28,35,87,097
ಪಾಕಿಸ್ತಾನ- 25,70,47,044
ನೈಜೀರಿಯಾ- 24,27,94,751
ಬ್ರೆಜಿಲ್‌ – 22,13,59,387
ಬಾಂಗ್ಲಾದೇಶ-17,01,83,916
ರಷ್ಯಾ-14,01,34,279
ಮೆಕ್ಸಿಕೊ- 13,17,41,347

RELATED ARTICLES

Latest News