Thursday, February 27, 2025
Homeರಾಷ್ಟ್ರೀಯ | Nationalಫೆ.19 ಅಥವಾ 20ರಂದು ದೆಹಲಿ ನೂತನ ಮುಖ್ಯಮಂತ್ರಿ ಪ್ರಮಾಣವಚನ, ಯಾರಿಗೆ ಸಿಎಂ ಪಟ್ಟ..?

ಫೆ.19 ಅಥವಾ 20ರಂದು ದೆಹಲಿ ನೂತನ ಮುಖ್ಯಮಂತ್ರಿ ಪ್ರಮಾಣವಚನ, ಯಾರಿಗೆ ಸಿಎಂ ಪಟ್ಟ..?

Delhi: Suspense over new CM continues, swearing-in likely on Feb 19 or 20

ನವದೆಹಲಿ,ಫೆ.15 – ದೆಹಲಿಯ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲದ ನಡುವೆಯೇ ಇದೇ ಫೆಬ್ರವರಿ 19 ಅಥವಾ 20ರಂದು ಬಿಜೆಪಿ ಸರ್ಕಾರದ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ.

27 ವರ್ಷಗಳ ನಂತರ ಕೇಸರಿ ಪಕ್ಷವು ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದು, ಪ್ರಮಾಣವಚನ ಸ್ವೀಕಾರಕ್ಕೆ ಒಂದು ದಿನ ಮೊದಲು ಬಿಜೆಪಿ ಶಾಸಕಾಂಗ ಪಕ್ಷ ನಡೆಯುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರಮೋದಿ ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಂತರ ಸರ್ಕಾರ ರಚನೆಗೆ ಸಿದ್ಧತೆಗಳು ವೇಗ ಪಡೆಯುವ ನಿರೀಕ್ಷೆಯಿದೆ. ಪ್ರಧಾನಿ
ಮೋದಿ, ಗೃಹಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷನಡ್ಡಾ ಮತ್ತು ಇತರ ಹಿರಿಯ ನಾಯಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಬಹುಶಃ ಒಬ್ಬರು ಅಥವಾ ಇಬ್ಬರು ಅವರ ಉಪನಾಯಕರು ಮತ್ತು ಮಂತ್ರಿಮಂಡಲ ರಚಿಸಬಹುದು.

ಪ್ರಧಾನಿ ನರೇಂದ್ರಮೋದಿ ಆಗಮನದ ನಂತರ ಪಕ್ಷದ ಕೇಂದ್ರ ನಾಯಕತ್ವವು ಮುಖ್ಯಮಂತ್ರಿ ಹೆಸರನ್ನು ಘೋಷಿಸುವ ಮೊದಲು ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಚರ್ಚಿಸಲು ವೀಕ್ಷಕರನ್ನು ನೇಮಿಸುತ್ತದೆ.

ರಾಜೇರಿ ಗಾರ್ಡನ್‌ನ ಬಿಜೆಪಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ, ಫೆ.18-19ರಂದು ಶಾಸಕಾಂಗ ಪಕ್ಷದ ಸಭೆಯ ನಂತರ ಹೊಸ ಸರ್ಕಾರ ಫೆ.19-20ರಂದು ಅಸ್ತಿತ್ವಕ್ಕೆ ಬರಬಹುದು ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಇದೆ ಎಂಬ ವರದಿಗಳನ್ನು ಬಿಜೆಪಿಯ ಹಿರಿಯ ನಾಯಕರು ತಳ್ಳಿಹಾಕಿದ್ದು, ಅವೆಲ್ಲ ಕೇವಲ ಊಹಾಪೋಹವಷ್ಟೆ ಎಂದಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಪೈಪೋಟಿ ಇಲ್ಲ, ನಮ್ಮ ಪಕ್ಷದಲ್ಲಿ, ಸಿಎಂ ಅಥವಾ ಶಾಸಕಾಂಗ ಪಕ್ಷದ ನಾಯಕನನ್ನು ಶಾಸಕರ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದರು. ನಾವು ಅಭಿವೃದ್ಧಿ, ಜನರಿಗೆ ಶುದ್ದ ನೀರು ಮತ್ತು ಗಾಳಿಯನ್ನು ಒದಗಿಸುವುದಕ್ಕೆ ಆದ್ಯತೆ ನೀಡುತ್ತೇವೆ. ಯಮುನಾ ನೀರನ್ನು ಮಾಲಿನ್ಯ ಮುಕ್ತಗೊಳಿಸಲು ನಾವು ಕೆಲಸ ಮಾಡುತ್ತೇವೆ ಎಂದರು.

ಪ್ರಧಾನಿಯವರ ಭರವಸೆಯಂತೆ ಎಎಪಿ ಸರ್ಕಾರದಿಂದ ಅಡ್ಡಿಪಡಿಸಲ್ಪಟ್ಟ ಆಯುಷ್ಮಾನ್ ಭಾರತ್ ಯೋಜನೆಯನ್ನು ಹೊಸ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

RELATED ARTICLES

Latest News