ಬೆಂಗಳೂರು, ಫೆ. 16- ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಅಭಿಮಾನಿಗಳ ಜೊತೆಗೆ ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೂ, ತಮ್ಮ ನೆಚ್ಚಿನ ಸೆಲೆಬ್ರಿಟಿಗೆ ದಾಸನಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.
ಕಾಟೇರ ಸಿನಿಮಾದ ನಂತರ ಸಾಕಷ್ಟು ಕ್ರೇಜ್ ಹುಟ್ಟು ಹಾಕಿರುವ ಡೆವಿಲ್ ಸಿನಿಮಾದ 1 ನಿಮಿಷ 4 ಸೆಕೆಂಡ್‌ಗಳ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಮನರಂಜನೆಯ ಪ್ಯಾಕೇಜ್ ನೀಡಿದೆ.
ಯಾರಿಗೆ ಚಾಲೆಂಜ್ ?
ಈಗ ಬಿಡುಗಡೆಯಾಗಿರುವ ಡೆಎಲ್ ಟೀಸರ್ ನಲ್ಲಿ ಚಾಲೆಂಜ್ ಸ್ಟಾರ್ ದರ್ಶನ್ ಅವರು ಸಾಕಷ್ಟು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡು ಅಬ್ಬರಿಸಿದ್ದಾರೆ. ಗನ್ ಹಿಡಿದು ಗತ್ತು ತೋರಿಸಿರುವ ದಾಸನ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಈ ಟೀಸರ್ ನಲ್ಲಿ ಪಂಚಿಂಗ್ ಡೈಲಾಗ್ ಹೇಳದೆ ಬರೀ ಚಾಲೆಂಜ್ ಎಂಬ ಪದ ಮಾತ್ರ ಟೀಸರ್ ನಲ್ಲಿದ್ದು, ದಾಸ ಈ ಕಾಡುತ್ತಿದೆ. ದರ್ಶನ್ ಮಸ್ತ್ ಫೈಟ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದರೂ, ಹೆಚ್ಚಾಗಿ ತಮ್ಮ ಚಾಲೆಂಜ್ ಅನ್ನು ಯಾರಿಗೆ ಹಾಕಿದ್ದಾರೆ ಎಂಬ ಕುತೂಹಲವು ಅಭಿಮಾನಿಗಳಿಗೆ.
ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರಕ್ಕೆ ಪ್ರಕಾಶ್ ಹಾಗೂ ಜೆ.ಜಯಮ್ಮ ಅವರು ಬಂಡವಾಳ ಹೂಡಿದ್ದು, ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಡೆವಿಲ್ ಗಿದೆ.
ದಾಸನಿಗೆ ಶುಭಾಶಯಗಳ ಮಹಾಪೂರ:
48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯುವ ನಟ ಧನ್ನೀರ್ ಅವರು ವಿಶೇಷ ಡಿಪಿ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ್ದರೆ, ನಟಿ ರಕ್ಷಿತಾ ಪ್ರೇಮ್, ನಿರ್ದೇಶಕ ಪ್ರೇಮ್ ಸೇರಿದಂತೆ ಚಂದನವನದ ಹಲವು ತಾರೆಯರು ಶುಭಾಶಯ ಕೋರಿದ್ದಾರೆ.
ಜೋಗಿ ಪ್ರೇಮ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನಲ್ಲಿ ಕೆಎಎನ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಚಿತ್ರದ ಘೋಷಣೆ ಮಾಡಿದ್ದು ಈ ಚಿತ್ರದ ವಿಶೇಷ ಪೋಸ್ಟರ್ ಸೇರಿದಂತೆ ಹಲವು ಟೀಸರ್ ಗಳು ಹೊರಬಂದಿದ್ದು ದಾಸನ ಅಭಿಮಾನಿಗಳ ಸಂತಸ ಹೆಚ್ಚಿಸಿದೆ.