Homeರಾಜ್ಯಕಾರವಾರ : ಹಿಂದೂ ವ್ಯಕ್ತಿಯ ಮನೆಗೆ ಬೆಂಕಿಯಿಟ್ಟ ಫೈಸಾನ್‌ ಶೇಕ್‌ಗೆ ಸಾರ್ವಜನಿಕರ ಧರ್ಮದೇಟು

ಕಾರವಾರ : ಹಿಂದೂ ವ್ಯಕ್ತಿಯ ಮನೆಗೆ ಬೆಂಕಿಯಿಟ್ಟ ಫೈಸಾನ್‌ ಶೇಕ್‌ಗೆ ಸಾರ್ವಜನಿಕರ ಧರ್ಮದೇಟು

Karwar: Faisan Jaffer Sheikh, who set fire to a Hindu man's house,

ಬೆಂಗಳೂರು, ಜ.28- ಹಿಂದೂ ಜನಾಂಗದ ವ್ಯಕ್ತಿ ಯೊಬ್ಬರ ಮನೆಗೆ ಅನ್ಯಕೋಮಿನ ಯುವಕನೊಬ್ಬ ಬೆಂಕಿ ಹಚ್ಚಿ ಭಯದ ವಾತಾವರಣ ಸೃಷ್ಠಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಕಾರವಾರದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರ ಹಕ್ಕಲದಲ್ಲಿ ನಡೆದಿದೆ.
ಬೆಂಕಿ ಹಚ್ಚಿರುವ ಸ್ಥಳೀಯ ನಿವಾಸಿ ಫೈಸಾನ್‌ ಜಾಫರ್‌ ಶೇಕ್‌ (18) ಎಂಬಾತನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ದೇವರ ಹಕ್ಕಲದ ನಿವಾಸಿ ದಿನಕರ್‌ ಎಂಬುವವರ ಕುಟುಂಬದವರು ಕುಮಟಾದ ವೆಂಕಟರಮಣ ಜಾತ್ರೆಗೆ ತೆರಳಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಆರೋಪಿ ಫೈಸಾನ್‌ ಜಾಫರ್‌ ಶೇಕ್‌ ಎಂಬ ಯುವಕ ನಿನ್ನೆ ರಾತ್ರಿ ಅವರ ಮನೆ ಬಳಿ ಹೋಗಿ ಬೆಂಕಿ ಹಚ್ಚಿದ್ದಾನೆ.ಬೆಂಕಿ ಹಚ್ಚಿದ ತಕ್ಷಣವೇ ಸ್ಥಳೀಯರು ಗಮನಿಸಿ ಸ್ಥಳದಲಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಾರ್ವಜನಿಕರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಘಟನೆಯಿಂದಾಗಿ ದೇವರ ಹಕ್ಕಲದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಆರೋಪಿಯು ನೆರೆಮನೆಯ ನಿವಾಸಿಯಾಗಿದ್ದು ಹಳೆ ದ್ವೇಷದಿಂದ ಬೆಂಕಿ ಹಚ್ಚಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

RELATED ARTICLES

Latest News