ಬಾಲಘಾಟ್, ಫೆ.19-ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲೀಯರು ಹತರಾಗಿದ್ದಾರೆ.
ಛತ್ತೀಸ್‌ಗಢ ಗಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲ್ ಹಾಕ್ ವಿರೋಧಿ ಪಡೆ ಮತ್ತು ಸ್ಥಳೀಯ ಪೊಲೀಸ್ ತಂಡಗಳು ಭಾಗವಹಿಸಿದ್ದವು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ದಾಬರ್ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿಮೀ ದೂರದ ಸ್ಥಳದಲ್ಲಿ ಬೆಳಿಗ್ಗೆ ಗುಂಡಿನ ಕಾಳಗ ನಡೆದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ದಾಬರ್‌ತಿಳಿಸಿದ್ದಾರೆ. ಹಾಕ್ ಫೋರ್ಸ್ ಮತ್ತು ಪೊಲೀಸರು ಗಹಿರ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಪ್ಟರ್ ಅರಣ್ಯ ಶ್ರೇಣಿಯ ರೋಂಡಾ ಅರಣ್ಯಕ್ಯಾಂಪ್ ಬಳಿ ಎನ್‌ಕೌಂಟರ್ ನಡೆದಿದ್ದು ಇದಲ್ಲಿ ಮೂವರು ಕುಖ್ಯಾತ ನಕ್ಸಲೀಯರನ್ನು ತಟಸ್ಥಗೊಳಿಸಿದ್ದಾರೆ ಎಂದು ಹೇಳಿದರು
ಘಟನಾ ಸ್ಥಳದಲ್ಲಿ ಒಂದು ರೈಫಲ್, ಸೆಲ್-ಲೋಡಿಂಗ್ ರೈಫಲ್ ಮತ್ತು .303 ರೈಫಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಕೆಲವು ನಕ್ಸಲೀಯರು ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾರೆ. ಆದರೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅದು ಮೂಲಗಳು ತಿಳಿಸಿವೆ. ಅವರನ್ನು ಪತ್ತೆ ಹಚ್ಚಲು 12 ಪೊಲೀಸ್ ತಂಡಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.