ಬೆಂಗಳೂರು,ನ.6- ರಾಜ್ಯ ಸರ್ಕಾರದ ಬಹುನಿರೀಕ್ಷಿತ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳಿಗೆ ಪ್ರತಿ ತಿಂಗಳ 20ರೊಳಗೆ ಹಣ ಸಂದಾಯ ಮಾಡುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಜಾರಿಗೊಳಿಸುತ್ತಿರುವ ಅನ್ನಭಾಗ್ಯಯೋಜನೆಯಲ್ಲಿ ಅಕ್ಕಿ ಬದಲಾಗಿ ನಗದು ಪಾವತಿ ಸಲಾಗುತ್ತಿದೆ. ಅದನ್ನು ತಿಂಗಳ ಆರಂಭದ 10ರಿಂದ 15ರೊಳಗೆ ಪಾವತಿಸಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಪಡಿತರಚೀಟಿ ಹೊಂದಿರುವ ಪ್ರತಿ ಕುಟುಂಬದ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ನಗದನ್ನು ಏಕೀಕೃತ ನೇರ ನಗದು ರೂಪದಲ್ಲಿ ವರ್ಗಾವಣೆ ಮಾಡಲಾಗುತ್ತಿದ್ದು ಅದನ್ನು 15ರಿಂದ 20ರೊಳಗೆ ಪಾವತಿಸಬೇಕಿದೆ. ಈ ಎರಡೂ ಯೋಜನೆಗಳಿಗೂ ಆರ್ಥಿಕ ಇಲಾಖೆ ಪ್ರತಿ ತಿಂಗಳ 20ರೊಳಗೆ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಲಾಗಿದೆ.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ನೀಡಲಾಗುತ್ತಿರುವ ಹಲವಾರು ಮಾಸಾಶನಗಳನ್ನು 1ರಿಂದ 5ನೇ ತಾರೀಖಿನೊಳಗೆ ಪಾವತಿ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ತಿಳಿಸಲಾಗಿದೆ. ಪ್ರತಿ ಕಲ್ಯಾಣ ಯೋಜನೆಯ ಹಾಗೂ ಸಬ್ಸಿಡಿ ಸ್ಕೀಮ್‍ಗಳಲ್ಲಿ ಫಲಾನುಭವಿಗಳ ಆಧಾರ್ ಮತ್ತು ಬ್ಯಾಂಕ್ ಖಾತೆಗಳ ಜೋಡನೆ ಮಾಡಿ ಡಿಬಿಟಿ ಮೂಲಕ ಅಡೆತಡೆ ಇಲ್ಲದೆ ಹಣ ಪಾವತಿಸಲಾಗುತ್ತಿದೆ.
ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಕಾರು ಚಾಲಕ ವಶಕ್ಕೆ
ಸರ್ಕಾರ ನೌಕರರ ವೇತನ ಪಾವತಿ ಸಮಯದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಬಿಲ್‍ಗಳನ್ನು ಪಾವತಿಸಬೇಕಾದರೆ ಒತ್ತಡ ಹೆಚ್ಚಾಗುತ್ತದೆ. ಡಿಬಿಟಿಯಲ್ಲಿ ವಿಳಂಬವಾಗುತ್ತಿದೆ. ಪ್ರತಿ ಕಡತದ ಪರಿಶೀಲನೆಗೂ ವಿಳಂಬವಾಗುತ್ತದೆ ಎಂದು ವಿವರಿಸಲಾಗಿದೆ.
ಪಾವತಿ ಮತ್ತು ವಿತರಣೆ ವ್ಯವಸ್ಥೆಗಳ ನಡುವೆ ಸಮನ್ವಯೀಕರಣ ಅಗತ್ಯವಿದೆ ಗೃಹಲಕ್ಷ್ಮಿ, ಅನ್ನಭಾಗ್ಯಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳ ಸಂಖ್ಯೆಹೆಚ್ಚಾಗಿದೆ. ಆದ್ದರಿಂದ ಆರ್ಥಿಕ ಇಲಾಖೆಯ ಖಜಾನೆ ಘಟಕಕ್ಕೆ ಫಲಾನುಭವಿಗಳ ಪಟ್ಟಿಯನ್ನು ನಿಗದಿತ ಅವಯೊಳಗೆ ತಲುಪಿಸಬೇಕು. ಸದರಿ ಬಿಲ್‍ಗಳನ್ನು ಸೃಷ್ಟಿಸಿ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.