Thursday, April 16, 2026
Homeಮನರಂಜನೆಕುಡಿದು ಕಾರು ಚಲಾಯಿಸಿ ಸರಣಿ ಅಪಘಾತ : ನಟ ಮಯೂರ್‌ ಪಟೇಲ್‌ ವಿರುದ್ಧ ಎಫ್‌ಐಆರ್‌

ಕುಡಿದು ಕಾರು ಚಲಾಯಿಸಿ ಸರಣಿ ಅಪಘಾತ : ನಟ ಮಯೂರ್‌ ಪಟೇಲ್‌ ವಿರುದ್ಧ ಎಫ್‌ಐಆರ್‌

Actor booked for drunk driving after multiple-vehicle accident in Bengaluru

ಬೆಂಗಳೂರು,ಜ.29- ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಸರಣಿ ಅಪಘಾತ ಮಾಡಿರುವ ಸ್ಯಾಂಡಲ್‌ವುಡ್‌ ನಟ ಮಯೂರ್‌ ಪಟೇಲ್‌ ವಿರುದ್ಧ ಹಲಸೂರು ಸಂಚಾರಿ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಓಲ್ಡ್ ಏರ್‌ಪೋರ್ಟ್‌ ರಸ್ತೆಯ ಕಮಾಂಡೊ ಆಸ್ಪತ್ರೆ ಸಿಗ್ನಲ್‌ ಬಳಿ ರಾತ್ರಿ 9.30ಸುಮಾರಿಗೆ ಈ ಸರಣಿ ಅಪಘಾತ ನಡೆದಿದ್ದು, ನಾಲ್ಕು ಕಾರುಗಳು ಜಖಂಗೊಂಡಿವೆ.

ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಮಯೂರ್‌ ಪಟೇಲ್‌ ಅವರು ತಮ ಫಾರ್ಚೂನರ್‌ ಕಾರನ್ನು ತಾವೇ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಸಿಗ್ನಲ್‌ನಲ್ಲಿ ನಿಂತಿದ್ದ ಎರಡು ಸ್ವಿಫ್‌್ಟ ಡಿಜೈರ್‌ ಕಾರು ಹಾಗೂ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಸರಣಿ ಅಪಘಾತವಾಗಿದೆ.

ಅಪಘಾತವಾಗುತ್ತಿದ್ದಂತೆ ಮಯೂರ್‌ ಪಟೇಲ್‌ ಕಾರಿನಿಂದ ಇಳಿದು ನಿಮ ಕಾರುಗಳನ್ನು ಸರಿ ಮಾಡಿಸಿ ಕೊಡುತ್ತೇನೆಂದು ಹೇಳಿದ್ದಾರೆ. ಸುದ್ದಿ ತಿಳಿದು ಹಲಸೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಯೂರ್‌ಪಟೇಲ್‌ ಅವರನ್ನು ಕರೆತಂದು ಪರೀಕ್ಷೆ ನಡೆಸಿದಾಗ ಮದ್ಯ ಸೇವಿಸಿ ವಾಹನ ಚಲಾಯಿಸಿರುವುದು ಗೊತ್ತಾಗಿದೆ. ಹಾಗಾಗಿ ಮಯೂರ್‌ ಅವರ ಕಾರನ್ನು ಸೀಜ್‌ ಮಾಡಿದ್ದಾರೆ. ಜಖಂಗೊಂಡ ಕಾರು ಚಾಲಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ವೀರಭದ್ರ ನಗರದ 2ನೇ ಮುಖ್ಯ ರಸ್ತೆ ನಿವಾಸಿ ಕಾರು ಚಾಲಕ ಶ್ರೀನಿವಾಸ್‌‍ ಎಂಬುವವರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಸಂಚಾರಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News